ಅಡುಗೆ ಮನೆಯಿಂದ ಹಲ್ಲಿಗಳನ್ನು ಓಡಿಸಲು ಈ ಟಿಪ್ಸ್ ಅನುಸರಿಸಿ
By Raghavendra M Y
Jun 12, 2024
Hindustan Times
Kannada
ಬೇಸಿಗೆಯಲ್ಲಿ ಮನೆಯಲ್ಲಿ ಹಲ್ಲಿಗಳು ಎಲ್ಲೆಂದರಲ್ಲಿ ಕಾಣಿಸಿಕೊಳ್ಳುತ್ತವೆ. ಆದರೆ ಇವುಗಳಿಂದ ದೊಡ್ಡ ಭಯವೆಂದರೆ ಅಡುಗೆ ಮನೆ
ಮಕ್ಕಳಿರಲಿ, ದೊಡ್ಡವರಿರಲಿ ಎಲ್ಲರಿಗೂ ಹಲ್ಲಿ ಎಂದರೆ ತುಂಬಾ ಭಯ. ಇವುಗಳನ್ನು ಸಾಯಿಸಿ ಹೊರಕ್ಕೆ ಹಾಕುವುದು ಬಹಳ ಕಷ್ಟ
ಹಲ್ಲಿಗಳಿಂದ ಆಹಾರ, ಪಾನೀಯಗಳು ಕಲುಷಿತಗೊಳ್ಳುವ ಭಯವಿರುತ್ತೆ. ಕೆಲವು ಮನೆಮದ್ದುಗಳಿಂದ ಹಲ್ಲಿಗಳನ್ನು ಅಡುಗೆಮನೆಯಿಂದ ಓಡಿಸಬಹುದು
ಅಡುಗೆ ಮನೆಯಿಂದ ಹಲ್ಲಿಗಳನ್ನು ಓಡಿಸಲು ಈರುಳ್ಳಿ ಬೆಳ್ಳುಳ್ಳಿಯ ಪಾಕ ವಿಧಾನ ಪ್ರಯತ್ನಿಸಿ. ಇದನ್ನ ಹೇಗೆ ತಯಾರಿಸೋದು ಅನ್ನೋದನ್ನ ತಿಳಿಯಿರಿ
ಮಧ್ಯಮ ಗಾತ್ರದಲ್ಲಿ 1 ಈರುಳ್ಳಿಯನ್ನು ಕತ್ತರಿಸಿಕೊಳ್ಳಿ. 4 ರಿಂದ 5 ಬಿಡಿಸಿದ ಬೆಳ್ಳುಳ್ಳಿ ಪೀಸ್ ತೆಗೆದುಕೊಂಡು ಎರಡನ್ನೂ ಒಟ್ಟಿಗೆ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ
ಈರುಳ್ಳಿ, ಬೆಳ್ಳುಳ್ಳಿ ಪೇಸ್ಟ್ ಅನ್ನು 1 ಬಟ್ಟಲಿಗೆ ತೆಗೆದುಕೊಳ್ಳಿ. ಅದಕ್ಕೆ ಬೇಕಿಂಗ್ ಸೋಡಾ, ಕರಿಮೆಣಸಿನ ಪುಡಿ, 1 ಚಮಚ ನಿಂಬೆ ರಸವನ್ನು ಮಿಶ್ರಣ ಮಾಡಿ
ಎಲ್ಲವನ್ನು ಮಿಶ್ರಣ ಮಾಡಿದ ನಂತರ ಅದಕ್ಕೆ 1 ರಿಂದ 2 ಕಪ್ ನೀರು ಸೇರಿಸಿ. ನಂತರ ನೀರನ್ನು ಫಿಲ್ಟರ್ ಮಾಡಿ ಸ್ಪ್ರೇ ಬಾಟಲಿಗೆ ತುಂಬಿಸಿ
ಅಡುಗೆ ಮನೆ ಸೇರಿದಂತೆ ಮನೆಯ ಮೂಲೆ ಮೂಲೆಗಳಲ್ಲಿ ಈ ನೀರನ್ನು ಸಿಂಪಡಿಸಿ. ಈ ಹರ್ಬಲ್ ಸ್ಪ್ರೇಯಿಂದ ಹಲ್ಲಿಗಳು ಓಡಿಹೋಗುತ್ತವೆ
ವಾರ್ಡ್‌ರೋಬ್‌ನಲ್ಲಿ ಈ ನೀರನ್ನು ಸಿಂಪಡಿಸಬೇಡಿ. ಸಿಂಪಡಿಸಿದ್ರೆ ಬಟ್ಟೆಗಳು ವಾಸನೆ ಬರುತ್ತವೆ
ಸಹ ಕಲಾವಿದನಿಗೆ ವೇದಿಕೆ ಮೇಲೆಯೇ ಪ್ರೇಮ ನಿವೇದನೆ ಮಾಡಿದ ಬ್ರಹ್ಮಗಂಟು ಸೀರಿಯಲ್ ಸಂಜನಾ ಪಾತ್ರಧಾರಿ ಆರತಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ