ಚಿತ್ರವಿಚಿತ್ರ ಕೊಂಬುಗಳ ಮೂಲಕ ಗಮನ ಸೆಳೆವ 11 ಪ್ರಾಣಿಗಳಿವು, ನೀವೂ ನೋಡಿ  

Pixabay

By Reshma
Jul 14, 2024

Hindustan Times
Kannada

ಪ್ರಪಂಚದಾದ್ಯಂತ ಸಾವಿರಾರು ಪ್ರಾಣಿಗಳಿದ್ದು, ಇವು ಒಂದಕ್ಕಿಂತ ಒಂದು ಭಿನ್ನವಾಗಿರುತ್ತವೆ. ಕೆಲವು ಬಣ್ಣದ ಮೂಲಕ ಗಮನ ಸೆಳೆದರೆ, ಇನ್ನೂ ಕೆಲವು ಚರ್ಮದ ವಿನ್ಯಾಸದ ಮೂಲಕ ಗಮನ ಸೆಳೆಯುತ್ತವೆ. 

Pixabay

ಪ್ರಪಂಚದಲ್ಲಿ ವಿಭಿನ್ನ ಕೊಂಬು ಹೊಂದಿರುವ ಸಾಕಷ್ಟು ಪ್ರಾಣಿಗಳಿವೆ. ತಮ್ಮ ರಕ್ಷಣೆಗಾಗಿ ವಿಶಿಷ್ಟ ಕೊಂಬುಗಳನ್ನು ಹೊಂದಿರುವ ಈ ಪ್ರಾಣಿಗಳ ಕೊಂಬು ಗಮನ ಸೆಳೆಯುವಂತೆ ಇರುತ್ತವೆ. ವಿಚಿತ್ರ ಆಕಾರದ ಕೊಂಬುಗಳನ್ನು ಹೊಂದಿರುವ 11 ಪ್ರಾಣಿಗಳ ಪರಿಚಯ ಇಲ್ಲಿದೆ. 

Pixabay

ಅಡ್ಡಾಕ್ಸ್‌: ಬಿಳಿ ಹುಲ್ಲೆ ಎಂದೂ ಕರೆಯಲ್ಪಡುವ ಅಡ್ಡಾಕ್ಸ್‌ ಸುರುಳಿಯಾಕಾರದ ಕೊಂಬುಗಳನ್ನು ಹೊಂದಿದೆ. ಇದರ ಕೊಂಬು ಸೇರಿ ದೇಹಾಕೃತಿಯು 3 ಅಡಿ ಇರಬಹುದು ಎಂದು ಅಂದಾಜಿಸಲಾಗಿದೆ. 

Pixabay

ಮಾರ್ಖೋರ್‌: ಇದು ಸುರುಳಿಯಾಕಾರದಂತೆ ಸುತ್ತಿಕೊಂಡಿರುವ ಕೊಂಬನ್ನು ಹೊಂದಿದ್ದು, ಇದು 5 ಅಡಿವರೆಗೆ ಇರುತ್ತದೆ. ಇದೊಂಥರಾ ಆಸಕ್ತಿದಾಯಕ ಪ್ರಾಣಿಯೂ ಹೌದು. 

Pixabay

ಸೇಬಲ್‌ ಅಂಟೆಲೋಪ್‌: ಸೇಬಲ್‌ ಹುಲ್ಲೆ ಎಂದು ಇದನ್ನು ಕರೆಯಬಹುದು. ಇದು ಬಾಗಿದ ಕೊಂಬುಗಳನ್ನು ಹೊಂದಿರುತ್ತದೆ. ವಯಸ್ಕ ಪ್ರಾಣಿಯಲ್ಲಿ 4 ಅಡಿಯಷ್ಟು ಉದ್ದದ ಕೊಂಬು ಇರಬಹುದು. ಗಂಡು ಹಾಗೂ ಹೆಣ್ಣು ಎರಡೂ ಪ್ರಾಣಿಗೂ ಕೊಂಬು ಇರುವುದು ವಿಶೇಷ. 

Pixabay

ಟೆಕ್ಸಾಸ್‌ ಲಾಂಗ್‌ಹಾರ್ನ್‌: ಟೆಕ್ಸಾಸ್‌ ಲಾಂಗ್‌ಹಾರ್ನ್‌ ಎನ್ನುವುದು ಜಾನುವಾರುಗಳ ತಳಿಗಳಲ್ಲಿ ಒಂದಾಗಿದೆ. ಇದು ಉದ್ದವಾದ ಹಾಗೂ ಬಾಗಿದ ಕೊಂಬುಗಳಿಗೆ ಹೆಸರುವಾಸಿಯಾಗಿದೆ. 

Pixabay

ಗ್ರೇಟರ್‌ ಕುಡು: ಗ್ರೇಟರ್‌ ಕುಡು ಉದ್ದವಾದ ಮತ್ತು ಸುರುಳಿಯಾಕಾರದ ಕೊಂಬುಗಳನ್ನು ಹೊಂದಿರುತ್ತದೆ. ಕುಡು ಕೊಂಬುಗಳು ಸುಮಾರು 6 ಅಡಿಗಳಷ್ಟು ಬೆಳೆಯುತ್ತವಂತೆ, ಇದು ನಮ್ಮ ಕುಲದಲ್ಲಿ ಪ್ರಾಬಲ್ಯ ಸಾಧಿಸಲು ಅವುಗಳಿಗೆ ನೆರವಾಗುತ್ತವೆ. 

Pixabay

ಬಿಗ್‌ಹಾರ್ನ್‌ ಕುರಿ: ಇದು ಉತ್ತರ ಅಮೆರಿಕದಲ್ಲಿ ಹೆಚ್ಚು ಕಂಡು ಬರುತ್ತದೆ. 60ಕೆಜಿವರೆಗೆ ತೂಗುವ ಈ ಪ್ರಾಣಿ ಸುರುಳಿಯಾಕಾರದ ಕೊಂಬುಗಳನ್ನು ಹೊಂದಿದೆ. ಈ ಪ್ರಾಣಿಗಳು ಪ್ರಾಬಲ್ಯಕ್ಕಾಗಿ ಹೋರಾಡಲು ಕೊಂಬುಗಳನ್ನು ಬಳಸುತ್ತವೆ. 

Pixabay

ಸ್ಕಿಮಿಟಾರ್‌-ಹಾರ್ನ್ಡ್‌ ಓರಿಕ್ಸ್‌: ಸ್ಕಿಮಿಟಾರ್‌ ಮುಖ ಕುದುರೆಯಂತೆ ಕಾಣಿಸುತ್ತದೆ. ಇದು ತೆಳ್ಳನೆಯ ಉದ್ದವಾದ ಬಾಗಿದ ಕೊಂಬುಗಳನ್ನು ಹೊಂದಿರುತ್ತದೆ. 

Pixabay

ಕೃಷ್ಣಮೃಗ: ಆಂಗ್ಲಭಾಷೆಯಲ್ಲಿ ಬ್ಲ್ಯಾಕ್‌ ಬಕ್‌ ಎಂದೂ ಕರೆಯುವ ಈ ಪ್ರಾಣಿ ತಿರುಚಿದ ಕೊಂಬುಗಳನ್ನು ಹೊಂದಿರುತ್ತವೆ. ಸುರುಳಿಯಂತೆ ಕೊಂಬುಗಳು ಸುತ್ತಿಕೊಂಡಿರುವುದನ್ನು ಗಮನಿಸಬಹುದು. 

Pixabay

ಯಾಕ್‌: ಅತ್ಯಂತ ತೂಕದ ಪ್ರಾಣಿಗಳಲ್ಲಿ ಒಂದಾಗಿರುವ ಯಾಕ್‌ ಕೂಡ ವಿಭಿನ್ನ ಕೊಂಬುಗಳನ್ನು ಹೊಂದಿದೆ. ಇದರ ಕೊಂಬುಗಳು ಉದ್ದವಾಗಿದ್ದು, ಒಳಮುಖವಾಗಿ ಬಾಗಿರುತ್ತವೆ. 

Pixabay

ಪ್ರಾಂಗ್‌ಹಾರ್ನ್‌: ವಿಚಿತ್ರ ಕೊಂಬುಗಳನ್ನು ಹೊಂದಿರುವ ಪ್ರಾಣಿಗಳಲ್ಲೇ ವಿಭಿನ್ನ ಪ್ರಾಂಗ್‌ಹಾರ್ನ್.‌ ಇದು ಚಿಕ್ಕ ಕೊಂಬುಗಳನ್ನು ಹೊಂದಿದ್ದರೂ ಅದರಲ್ಲೇ ಚಿಕ್ಕ ಚಿಕ್ಕ ಕೊಂಬುಗಳನ್ನು ಬಂದಿರುವುದನ್ನು ಗಮನಿಸಬಹುದು. 

Pixabay

ಗೌರ್‌: ಭಾರತೀಯ ಕಾಡೆಮ್ಮೆ ಎಂದೂ ಇದನ್ನು ಕರೆಯುತ್ತಾರೆ. ಇದು ದೊಡ್ಡ ಜಾತಿಯ ಪ್ರಾಣಿ ಹಾಗೂ ವಿಶಿಷ್ಟವಾದ ಕೊಂಬನ್ನು ಹೊಂದಿರುತ್ತದೆ. ಸ್ವಲ್ಪ ಬಾಗಿದಂತಿರುವ ಕೊಂಬು ಬಲಶಾಲಿಯಾಗಿರುವುದು ಸುಳ್ಳಲ್ಲ. 

Pixabay

ಹಳೆಯ ಸಾಲಗಳು ವಸೂಲಿಯಾಗಲಿವೆ; ಮೇ 15ರ ಗುರುವಾರದ ದಿನ ಭವಿಷ್ಯ