ಭಾರತದಲ್ಲಿ ಮಾತ್ರ ಕಂಡುಬರುವ ಅಪರೂಪದ ವಿಶಿಷ್ಟ ಪ್ರಾಣಿಗಳಿವು
By Reshma Oct 22, 2024
Hindustan Times Kannada
ಭಾರತವು ವೈವಿಧ್ಯಮಯ ವಿಶಿಷ್ಟ ವನ್ಯಜೀವಿಗಳ ನೆಲೆಯಾಗಿದೆ
ಭಾರತದಲ್ಲಿ ಮಾತ್ರ ಕಂಡುಬರುವ ಅಪರೂಪದ 5 ಜೀವಿಗಳ ಪರಿಚಯ ಇಲ್ಲಿದೆ ನೋಡಿ
ಕಪ್ಪು ಪಟ್ಟೆಗಳನ್ನ ಹೊಂದಿರುವ ಕಿತ್ತಳೆ ಬಣ್ಣದ ಕೋಟ್‌ಗೆ ಹೆಸರುವಾಸಿಯಾದ ಬಂಗಾಳ ಹುಲಿಯು ಭಾರತಕ್ಕೆ ಸ್ಥಳೀಯವಾಗಿದೆ ಸುಂದರಬನ್ಸ್ ಮತ್ತು ರಣಥಂಬೋರ್‌ನಂತಹ ರಾಷ್ಟ್ರೀಯ ಉದ್ಯಾನಗಳಲ್ಲಿ ಇದನ್ನು ಕಾಣಬಹುದು
ಏಷ್ಯಾಟಿಕ್ ಲಯನ್: ಇದು ಅಪರೂಪದ ಸಿಂಹವು ಗುಜರಾತ್‌ನ ಗಿರ್ ಅರಣ್ಯದಲ್ಲಿ ಮಾತ್ರ ಕಂಡುಬರುತ್ತದೆ. ಇದು ಆಫ್ರಿಕನ್ ಸಿಂಹಗಳಿಗಿಂತ ಚಿಕ್ಕದಾದರೂ ಅಷ್ಟೇ ಪ್ರಭಾವಶಾಲಿಯಾಗಿದೆ
ದೇಹದ ಮೇಲೆ ರಕ್ಷಣಾತ್ಮಕ ಚಿಪ್ಪುಗಳನ್ನು ಹೊಂದಿರುವ ಇಂಡಿಯನ್ ಪ್ಯಾಂಗೊಲಿನ್ ಭಾರತದಾದ್ಯಂತ ಕಾಡುಗಳಲ್ಲಿ ಕಂಡುಬರುತ್ತದೆ. ಇದು ರಾತ್ರಿ ಸಂಚರಿಸುವ ಪ್ರಾಣಿಯಾಗಿದೆ
ನೀಲಗಿರಿ ಥಾರ್; ಜಿಂಕೆಯಂತಹ ಈ ಪ್ರಾಣಿ ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳಿಗೆ ಹೆಸರುವಾಸಿಯಾಗಿದೆ. ಹೆಚ್ಚಾಗಿ ಇದು ಎತ್ತರ ಪರ್ವತದಂತಹ ಸ್ಥಳಗಳಲ್ಲಿ ಕಾಣಿಸುತ್ತದೆ
ಸಿಂಹ ಬಾಲದ ಸಿಂಗಳಿಕ: ವಿಶಿಷ್ಟವಾದ ಬಾಲ, ಮೂತಿ, ಕಣ್ಣುಗಳನ್ನು ಹೊಂದಿರುವ ಗೊರಿಲ್ಲಾ ರೂಪದ ಈ ಪ್ರಾಣಿ ಪಶ್ಚಿಮ ಘಟ್ಟದ ಮಳೆಕಾಡುಗಳಲ್ಲಿ ಮಾತ್ರ ಕಂಡುಬರುತ್ತದೆ
ಅವಾಸಸ್ಥಾನದ ಹಾನಿ, ಬೇಟೆಯಾಡುವುದು ಹೀಗೆ ಹಲವು ಕಾರಣದಿಂದ ಈ ಪ್ರಾಣಿಗಳು ಭಾರತದಲ್ಲಿ ಅಪರೂಪವಾಗಿ ಬಿಟ್ಟಿವೆ
ಭಾರತವು ಈ ಪ್ರಾಣಿಗಳನ್ನು ರಕ್ಷಿಸಲು ರಾಷ್ಟ್ರೀಯ ಉದ್ಯಾನವನಗಳು, ವನ್ಯಜೀವಿ ಮೀಸಲು ತಾಣ ಹಾಗೂ ಜಾಗೃತಿ ಅಭಿಯಾನಗಳನ್ನು ಮಾಡುತ್ತಿದೆ
ಈ ಅಪರೂಪದ ಪ್ರಾಣಿಗಳು ಭಾರತದ ವಿಸ್ಮಯಕಾರಿ ಜೀವ ವೈವಿಧ್ಯಕ್ಕೆ ಸಾಕ್ಷಿಯಾಗಿದೆ
ಬ್ಯಾಚುಲರ್ ಲೈಫ್‌ಗೆ ಪುಲ್ ಸ್ಟಾಪ್ ಇಟ್ಟ ಪಾರು ಧಾರಾವಾಹಿ ನಟಿ