ಮಳೆಗಾಲ ಆರಂಭವಾಗುತ್ತಿದ್ದಂತೆ ಸೊಳ್ಳೆಗಳು ಹೆಚ್ಚುತ್ತವೆ. ಸೊಳ್ಳೆ ಕಚ್ಚುವುದು ಅಪಾಯ. ಸೊಳ್ಳೆಗಳು ಮನುಷ್ಯ ದೇಹದಿಂದ ಹೇಗೆ ರಕ್ತ ಹೀರುತ್ತವೆ ಅನ್ನೋದು ನಿಮಗೆ ತಿಳಿದಿದ್ಯಾ?
ಹೆಣ್ಣು ಸೊಳ್ಳೆಗಳು ಮಾತ್ರ ರಕ್ತ ಕುಡಿಯುತ್ತವೆ. ಯಾಕೆಂದರೆ ಅವುಗಳಿಗೆ ಮೊಟ್ಟೆ ಇಡಲು ಪ್ರೊಟೀನ್, ಪೋಷಕಾಂಶಗಳ ಅಗತ್ಯವಿರುತ್ತದೆ. ಗಂಡು ಸೊಳ್ಳೆಗಳು ಸಸ್ಯಗಳ ರಸವನ್ನು ಹೀರುತ್ತವೆ
ಸೊಳ್ಳೆಗಳು ಇಂಗಾಲದ ಡೈಆಕ್ಸೈಡ್, ದೇಹದ ಉಷ್ಣತೆ ಮತ್ತು ಬೆವರಿನ ವಾಸನೆಯಿಂದ ಬೇಟೆಯನ್ನು ಆರಂಭಿಸುತ್ತವೆ
ಸೊಳ್ಳೆಯು ಬಾಯಿಯಲ್ಲಿ ತೆಳುವಾದ ಮೊನಚಾದ ರಚನೆಯನ್ನು ಹೊಂದಿರುತ್ತದೆ. ಇದನ್ನು ಪ್ರೋಬೋಸಿಸ್ ಎಂದು ಕರೆಯಲಾಗುತ್ತದೆ. ಇದು ಸೂಜಿಯಂತೆ ಚರ್ಮವನ್ನು ಬೇಧಿಸಿ ರಕ್ತ ಹೀರುತ್ತದೆ
ಸೊಳ್ಳೆಯು ತನ್ನ ಪ್ರೊಬೋಸಿಸ್ ಮೂಲಕ ಚರ್ಮವನ್ನು ಬೇಧಿಸಿ ಸಣ್ಣ ರಕ್ತನಾಳಗಳನ್ನು ಹುಡುಕುತ್ತದೆ. ಇದು 6 ಮೊನಚಾದ ಭಾಗಗಳನ್ನು ಹೊಂದಿದ್ದು, ಅವು ನಿಖರವಾಗಿ ಕಾರ್ಯನಿರ್ವಹಿಸುತ್ತವೆ
ಸೊಳ್ಳೆಯು ಚರ್ಮಕ್ಕೆ ಲಾಲಾರಸವನ್ನು ಚುಚ್ಚುತ್ತದೆ. ಇದು ಹೆಪ್ಪುಗಟ್ಟುವಿಕೆ ವಿರೋಧಿ ವಸ್ತುವನ್ನು ಹೊಂದಿರುತ್ತದೆ. ಇದು ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ ಮತ್ತು ಹೀರುವಿಕೆಯನ್ನು ಸುಲಭಗೊಳಿಸುತ್ತದೆ. ಈ ಲಾಲಾರಸವು ತುರಿಕೆ ಮತ್ತು ಊತವನ್ನು ಉಂಟು ಮಾಡುತ್ತದೆ
ಸೊಳ್ಳೆಯ ಪ್ರೊಬೋಸಿಸ್ ಎರಡು ಕೊಳವೆಗಳಿಂದ ಮಾಡಲ್ಪಟ್ಟಿದೆ. ಒಂದು ಲಾಲಾರಸವನ್ನು ಚುಚ್ಚಲು, ಇನ್ನೊಂದು ರಕ್ತವನ್ನು ಹೀರಲು. ಈ ಪ್ರಕ್ರಿಯೆಯು ಕೆಲವು ಸೆಕೆಂಡುಗಳಿಂದ 2 ನಿಮಿಷಗಳವರೆಗೆ ಇರುತ್ತದೆ
ಸೊಳ್ಳೆಯ ಜೊಲ್ಲು ಡೆಂಗ್ಯೂ, ಮಲೇರಿಯಾ ಮತ್ತು ಚಿಕುನ್‌ಗುನ್ಯಾದಂತಹ ರೋಗಗಳನ್ನು ಹರಡುತ್ತದೆ. ಆದ್ದರಿಂದ ಸೊಳ್ಳೆಗಳಿಂದ ರಕ್ಷಣೆ ಪಡೆಯುವುದು ಅವಶ್ಯ.
ಸೊಳ್ಳೆಗಳು ರಕ್ತ ಕುಡಿಯುವುದು ಒಂದು ಸಂಕೀರ್ಣ ಜೈವಿಕ ಪ್ರಕ್ರಿಯೆಯಾಗಿದ್ದು, ಇದು ಅಪಾಯದ ಬಗ್ಗೆ ನಮಗೆ ಎಚ್ಚರಿಕೆ ನೀಡುತ್ತದೆ. ಸೊಳ್ಳೆ ಪರದೆಗಳು, ನಿವಾರಕಗಳು ಹಾಗೂ ಸ್ವಚ್ಛತೆ ಕಾಪಾಡಿಕೊಳ್ಳುವ ಮೂಲಕ ಸೊಳ್ಳೆಯಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ
ಈ ಮಾಹಿತಿಯು ವೈಜ್ಞಾನಿಕ ಸಂಗತಿಗಳನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ