1 ಕಿಮೀ ಪ್ರಯಾಣಕ್ಕೆ ರೈಲಿನ ಎಂಜಿನ್‌ಗೆ ಎಷ್ಟು ಲೀಟರ್ ಡೀಸೆಲ್ ಬಳಸುತ್ತೆ

By Raghavendra M Y
May 12, 2024

Hindustan Times
Kannada

ನೀವು ರೈಲಿನಲ್ಲಿ ಪ್ರಯಾಣಿಸಿರಬೇಕು. ಇತರೆ ವಾಹನಗಳಿಗೆ ಹೋಲಿಸಿದರೆ ರೈಲಿನ ಪ್ರಯಾಣ ಆರಾಮದಾಯಕ ಮತ್ತು ಸುರಕ್ಷಿತವಾಗಿದೆ

ಕಾರು, ಬಸ್, ಬೈಕ್‌ಗಳನ್ನು ಖರೀದಿಸುವಾಗ ಮೊದಲು ಎಷ್ಟು ಮೈಲೇಜ್ ಕೊಡುತ್ತೆ ಅಂತ ಕೇಳಲಾಗುತ್ತದೆ

1 ಲೀಟರ್ ಪೆಟ್ರೋಲ್‌ ಅಥವಾ ಡೀಸೆಲ್‌ಗೆ ವಾಹನಗಳ ಎಷ್ಟು ಕಿಮೀ ಪ್ರಯಾಣಿಸುತ್ತೆ ಎಂಬುದನ್ನು ಮೈಲೇಜ್ ಮೀಟರ್ ತೋರಿಸುತ್ತೆ

ರೈಲಿನ ಮೈಲೇಜ್ ಬಗ್ಗೆ ಯಾವತ್ತಾದರೂ ಯೋಚಿನೆ ಮಾಡಿದ್ದೀರಾ. ಇತ್ತೀಚೆಗೆ ಹೆಚ್ಚಿನ ರೈಲುಗಳು ವಿದ್ಯುತ್‌ನಿಂದ ಚಲಿಸುತ್ತವೆ

ಹಲವು ಕಡೆಗಳಲ್ಲಿ ಇನ್ನೂ ವಿದ್ಯುತ್ ಸಂಪರ್ಕ ಇಲ್ಲದ ಕಾರಣ ಡೀಸೆಲ್ ಎಂಜಿನ್ ರೈಲುಗಳು ಸಂಚಾರ ನಡೆಸುತ್ತವೆ

ರೈಲಿನ ಡೀಸೆಲ್ ಎಂಜಿನ್ ನೀಡುವ ಮೈಲೇಜ್ ಅದರ ಶಕ್ತಿ ಮತ್ತು ಲೋಡ್‌ ಮೇಲೆ ಅವಲಂಬಿಸಿರುತ್ತದೆ

ಲೋಡ್ ಮಾತ್ರವಲ್ಲದೆ, ಯಾವ ಪ್ರದೇಶದಲ್ಲಿ ಚಲಿಸುತ್ತದೆ, ಎಷ್ಟು ಕಡೆ ನಿಲುಗಡೆಯಾಗುತ್ತದೆ ಎಂಬುದನ್ನೂ ಅವಲಂಬಿಸಿರುತ್ತೆ

ತಜ್ಞರ ಪ್ರಕಾರ, 2 ಟೈರ್ ಪ್ಯಾಸೆಂಜರ್ ರೈಲು ಎಂಜಿನ್ 1 ಕಿಮೀ ಸಂಚರಿಸಲು 6 ಲೀಟರ್ ಡೀಸೆಲ್ ತೆಗೆದುಕೊಳ್ಳುತ್ತೆ. ಎಕ್ಸ್‌ಪ್ರೆಸ್ ರೈಲಿಗೆ 4.5 ಲೀ ಬೇಕು

ಸೂಪರ್ ಫಾಸ್ಟ್, ಎಕ್ಸ್‌ಪ್ರೆಸ್ ರೈಲುಗಳಿಗಿಂತ ಪ್ಯಾಸೆಂಜರ್ ರೈಲುಗಳು ಹೆಚ್ಚು ಡೀಸೆಲ್ ಕೇಳುತ್ತವೆ. ಹೆಚ್ಚು ನಿಲುಗಡೆ ನೀಡುವುದೇ ಇದಕ್ಕೆ ಕಾರಣ

ನಿಲ್ಲಿಸಿದ ರೈಲು ಮುಂದೆ ಸಾಗಲು ಪ್ರಾರಂಭಿಸಿದಾಗ ಎಂಜಿನ್‌ಗೆ ಹೆಚ್ಚು ಬಾರ ಇರುತ್ತೆ. ಈ ಕಾರಣಕ್ಕೆ ಪ್ಯಾಸೆಂಜರ್‌ ರೈಲು ಹೆಚ್ಚು ಡೀಸೆಲ್ ಕುಡಿಯುತ್ತವೆ

ಮಾಸ್ಟರ್‌ ಕಿಶನ್‌ ಈಗ ಹೇಗಿದ್ದಾರೆ ನೋಡಿ?