ಏರ್‌ಕಂಡೀಷನರ್ ಬರುವ ಮೊದಲು ರೈಲ್ವೆ ಕೋಚ್‌ಗಳನ್ನು ಹೇಗೆ ತಂಪಾಗಿ ಇರಿಸಲಾಗುತ್ತಿತ್ತು

SWR

By Raghavendra M Y
May 07, 2024

Hindustan Times
Kannada

ಪ್ರತಿ ದಿನ ಕೋಟ್ಯಂತರ ಜನರು ರೈಲು ಮೂಲಕ ಪ್ರಯಾಣ ಮಾಡುತ್ತಾರೆ. ಬೇಸಿಗೆಯಲ್ಲಿ ಎಸಿ ಇಲ್ಲದ ರೈಲಿನಲ್ಲಿ ಪ್ರಯಾಣ ಕಷ್ಟ

ಭಾರತೀಯ ರೈಲುಗಳಲ್ಲಿ ಇಂದು ವಿವಿಧ ಮಾದರಿಯ ಎಸಿ ಆಧಾರಿತ ರೈಲಿನ ಕೋಚ್‌ಗಳಿವೆ

ಎಸಿ ಬರುವುದಕ್ಕೂ ಮುನ್ನ ರೈಲಿನ ಕೋಚ್‌ಗಳನ್ನ ಹೇಗೆ ತಂಪಾಗಿ ಇರಿಸಲಾಗುತ್ತಿತ್ತು ಅನ್ನೋದನ್ನ ತಿಳಿಯೋಣ

ನೈಋತ್ಯ ರೈಲ್ವೆ ಫೇಸ್‌ಬುಕ್ ಪೋಸ್ಟ್ ಪ್ರಕಾರ, ರೈಲಿನ ಬೋಗಿಗಳನ್ನು ಕೂಲ್ ಆಗಿ ಇಡಲು ಐಸ್‌ ಬ್ಲಾಕ್‌ಗಳನ್ನು ಬಳಸಲಾಗುತ್ತಿತ್ತು

SWR

ರೈಲಿನ ಬೋಗಿಯ ಕೆಳಗಡೆ ಸೀಲ್ ಮಾಡಿದ ಕಂಟೈರ್‌ನಲ್ಲಿ ಐಸ್ ಬ್ಲಾಕ್‌ಗಳನ್ನು ಇಡಲಾಗುತ್ತಿತ್ತು

ಬ್ಯಾಟರಿ ಚಾಲಿತ ಬ್ಲೋವರ್ ನಿರಂತರವಾಗಿ ಗಾಳಿ ಬಿಸಿದಾಗ ಕಂಟೈರ್‌ನಿಂದ ಬೋಗಿಗಳಿಗೆ ತಂಪಾದ ಗಾಳಿ ಬರುತ್ತಿತ್ತು

ರೈಲನ್ನು ತಂಪಾಗಿಡುವುದು ಸವಾಲಿನ ಕೆಲಸವಾಗಿತ್ತು. ಕೆಲವೊಮ್ಮೆ ಮಾರ್ಗ ಮಧ್ಯ ರೈಲನ್ನು ನಿಲ್ಲಿಸಿ ಐಸ್ ಬ್ಲಾಕ್‌ಗಳನ್ನು ತುಂಬಿಸುತ್ತಿದ್ದರು

ದೇಶದ ಮೊದಲ ಎಸಿ ರೈಲನ್ನು ಫ್ರಾಂಟಿಯರ್ ಮೇಲ್ ಎಂದು ಕರೆಯಲಾಗುತ್ತಿತ್ತು. 1934 ರಲ್ಲಿ ಬಿಬಿ&ಸಿಐ ಕಂಪನಿ ಆರಂಭಿಸಿತ್ತು

ಕೆಕೆಆರ್‌ vs ಎಸ್‌ಆರ್‌ಎಚ್‌ ಮುಖಾಮುಖಿಯಲ್ಲಿ ಯಾರು ಬಲಿಷ್ಠ?