ಭಾರತದ ಐಷಾರಾಮಿ ರೈಲಿದು, ಗೋಲ್ಡನ್ ಚಾರಿಯೇಟ್ ಟ್ರೈನ್‌ನಲ್ಲಿ ಒಮ್ಮೆಯಾದ್ರೂ ಓಡಾಡಿ
By Reshma
Nov 23, 2024
Hindustan Times
Kannada
ಭಾರತೀಯ ರೈಲ್ವೇ ಇನ್ನೂ ಕೆಲವೇ ದಿನಗಳಲ್ಲಿ 7 ಸ್ಟಾರ್ ಹೋಟೆಲ್‌ಗಿಂತ ಕಡಿಮೆ ಇಲ್ಲದ ಐಷಾರಾಮಿ ರೈಲನ್ನು ಹಳಿ ಮೇಲೆ ಓಡಿಸಲು ಸಿದ್ಧವಾಗಿದೆ
ಈ ರೈಲಿನಲ್ಲಿ ಎಲ್ಲಾ ರೀತಿಯ ಐಷಾರಾಮಿ ಸೌಲಭ್ಯಗಳು ಲಭ್ಯವಿರುತ್ತವೆ. ಅದರ ಹೆಸರು ದಿ ಗೋಲ್ಡನ್ ಚಾರಿಯೇಟ್ ಟ್ರೈನ್
ಕರ್ನಾಟಕದ ಶ್ರೀಮಂತ ಪರಂಪರೆಯನ್ನು ಪ್ರದರ್ಶಿಸುವ ಈ ರೈಲು ಡಿಸೆಂಬರ್ 14 ರಿಂದ ಹೊರಡಲಿದೆ
ಈ ರೈಲು 13 ಡಬಲ್ ಬೆಡ್ ಕ್ಯಾಬಿನ್, 26 ಟ್ವಿನ್ ಬೆಡ್ ಕ್ಯಾಬಿನ್, ಅಂಗವಿಕಲ ಅತಿಥಿಗಳಿಗಾಗಿ 1 ಕ್ಯಾಬಿನ್ ಅನ್ನು ಹೊಂದಿದೆ
ಎಲ್ಲಾ ಕ್ಯಾಬಿನ್‌ಗಳು ಮೆತ್ತನೆಯ ಪೀಠೋಪಕರಣಗಳು, ಐಷಾರಾಮಿ ಬಾತ್‌ರೂಮ್, ಆರಾಮದಾಯಕ ಹಾಸಿಗೆ, ಟಿವಿ ಹಾಗೂ ಸಲೂನ್‌ಗಳು ಕೂಡ ಇದರಲ್ಲಿ ವಿಶೇಷ ವ್ಯವಸ್ಥೆ ಇರುತ್ತದೆ
ಈ ರೈಲಿನಲ್ಲಿ ಅತ್ಯುತ್ತಮ ರೆಸ್ಟೊರೆಂಟ್ ಕೂಡ ಇರುತ್ತದೆ. ಅಲ್ಲಿ ಸಸ್ಯಹಾರಿ ಹಾಗೂ ಮಾಂಸಾಹಾರಿ ಆಹಾರಗಳನ್ನು ನೀಡಲಾಗುತ್ತದೆ
ಈ ಗೋಲ್ಡನ್ ಚಾರಿಯೇಟ್ ರೈಲಿನಲ್ಲಿ ಹೆಲ್ತ್ ಸ್ಪಾ ಹಾಗೂ ಹೈಟೆಕ್ ಜಿಮ್ ಕೂಡ ಇದೆ
ಈ ರೈಲು ಮಾರ್ಗದ ಬಗ್ಗೆ ಹೇಳಬೇಕು ಎಂದರೆ ಇದು ಬೆಂಗಳೂರಿನಿಂದ ಪ್ರಾರಂಭವಾಗಿ ಬಂಡೀಪುರ, ಮೈಸೂರು. ಹಳಬೀಡು, ಚಿಕ್ಕಮಗಳೂರು, ಹಂಪಿ ಹಾಗೂ ಗೋವಾಕ್ಕೆ ಹೋಗಿ ಪುನಃ ಬೆಂಗಳೂರಿಗೆ ಬರುತ್ತದೆ
ಅಲ್ಲದೇ ಬೆಂಗಳೂರಿನಿಂದ ಹೊರಟು ಮೈಸೂರು, ಕಾಂಚೀಪುರಂ, ಮಹಾಬಲಿಪುರಂ, ತಂಜಾವೂರು, ಚೆಟ್ಟಿನಾಡು, ಕೊಚ್ಚಿನ್ ಹೋಗಿ ಬೆಂಗಳೂರಿಗೆ ಮರಳುತ್ತದೆ
ಮಾಸ್ಟರ್ ಕಿಶನ್ ಈಗ ಹೇಗಿದ್ದಾರೆ ನೋಡಿ?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ