ಭಾರತದ ಈ 5 ನಿಲ್ದಾಣಗಳಿಂದ ವಿದೇಶಗಳಿಗೆ ರೈಲು ಸಂಪರ್ಕವಿದೆ 

By Reshma
Jan 01, 2025

Hindustan Times
Kannada

ಭಾರತವು ಅಫ್ಘಾನಿಸ್ತಾನ, ಭೂತಾನ್, ನೇಪಾಳ, ಬಾಂಗ್ಲಾದೇಶದಂತಹ 7 ದೇಶಗಳೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ 

ಆದರೆ ಇದರಲ್ಲಿ ಕೆಲವು ದೇಶಗಳಿಗೆ ನೀವು ರೈಲಿನ ಮೂಲಕವೂ ಹೋಗಬಹುದು ಎಂಬ ವಿಚಾರ ನಿಮಗೆ ತಿಳಿದಿದ್ಯಾ?

ದೇಶದ ಈ ಕೆಲವು ರೈಲು ನಿಲ್ದಾಣಗಳಿಂದ ವಿದೇಶಗಳಿಗೆ ರೈಲು ಹೋಗುತ್ತವೆ. ಅಂತಹ ನಿಲ್ದಾಣಗಳು ಯಾವುವು ನೋಡಿ 

ಪೆಟ್ರಾಪೋಲ್ ರೈಲು ನಿಲ್ದಾಣ: ಇದು ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಎನ್ನುವ ಜಿಲ್ಲೆಯಲ್ಲಿದೆ. ಇದು ಭಾರತ–ಬಾಂಗ್ಲಾದೇಶ ಗಡಿಯ ಸಮೀಪವಿದೆ 

ಮಾಧ್ಯಮ ವರದಿಗಳ ಪ್ರಕಾರ ಕೊಲ್ಕತ್ತಾದಿಂದ ಬಾಂಗ್ಲಾದೇಶಕ್ಕೆ ಹೋಗಲು ಬಂಧನ್ ಎಕ್ಸ್‌ಪ್ರೆಸ್‌ ಹತ್ತಬೇಕು 

ಈ ರೈಲಿನಲ್ಲಿ ಹೋಗಲು ನಿಮಗೆ ವೀಸಾ ಹಾಗೂ ಪಾಸ್‌ಪೋರ್ಟ್ ಬೇಕು. ಬಾಂಗ್ಲಾದೇಶ ತಲುಪುವ ಮೊದಲು ಪೆಟ್ರಾಪೋಲ್ ನಿಲ್ದಾಣದಲ್ಲಿ ಈ ರೈಲು ನಿಲ್ಲುತ್ತದೆ 

ಹಲ್ದಿಬರಿ ರೈಲು ನಿಲ್ದಾಣ: ಇದು ಬಾಂಗ್ಲಾದೇಶದ ಗಡಿಯಿಂದ ಸುಮಾರು 4.5 ಕಿಲೋಮೀಟರ್ ದೂರಲ್ಲಿದೆ. ಈ ನಿಲ್ದಾಣವು ಸಾರಿಗೆ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ 

ಸಿಂಗಾಬಾದ್ ರೈಲು ನಿಲ್ದಾಣ: ಇದು ಪಶ್ಚಿಮ ಬಂಗಾಳದ ಮಾಲ್ದಾ ಜಿಲ್ಲೆಯಲ್ಲಿದೆ. ಓಲ್ಡ್ ಮಾಲ್ಡಾ ನಿಲ್ದಾಣದಿಂದ ಸಿಂಗಾಬಾದ್ ನಿಲ್ದಾಣಕ್ಕೆ ಕೇವಲ ಒಂದು ಪ್ಯಾಸೆಂಜರ್ ರೈಲು ಮಾತ್ರ ಚಲಿಸುತ್ತದೆ 

ಜಯನಗರ ರೈಲು ನಿಲ್ದಾಣ: ಬಿಹಾರದ ಮಧುಬನಿ ಜಿಲ್ಲೆಯಲ್ಲಿರುವ ಈ ರೈಲು ನಿಲ್ದಾಣವು ಭಾರತ–ನೇಪಾಳ ಗಡಿಯ ಸಮೀಪವಿದೆ. ಇದು ನೇಪಾಳದಿಂದ ಕೇವಲ 4 ಕಿಲೋಮೀಟರ್ ದೂರದಲ್ಲಿದೆ 

ರಾಧಿಕಾಪುರ ರೈಲು ನಿಲ್ದಾಣ: ಇದು ಝೀರೋ ಪಾಯಿಂಟ್ ರೈಲು ನಿಲ್ದಾಣವಾಗಿದೆ. ಇದು ಭಾರತ–ಬಾಂಗ್ಲಾದೇಶ ಗಡಿಯಲ್ಲಿ ಸಾರಿಗೆ ನಿಲ್ದಾಣವಾಗಿ ಕಾರ್ಯನಿರ್ವಹಿಸುತ್ತದೆ 

ಮನೆಯಲ್ಲಿ ಮೊಲ ಸಾಕಬಹುದೇ? ಜ್ಯೋತಿಷ್ಯದ ಪ್ರಕಾರ ಶುಭವೋ, ಅಶುಭವೋ?