ಪ್ರತಿ ಋತುವಿನಲ್ಲೂ ಬಣ್ಣ ಬದಲಿಸುವ ಪ್ರಪಂಚದ ವಿಸ್ಮಯಕಾರಿ ನದಿಯಿದು 

By Reshma
Oct 25, 2024

Hindustan Times
Kannada

ಜಗತ್ತಿನಲ್ಲಿ ಸಾವಿರಾರು ನದಿಗಳಿವೆ. ಈ ನದಿಗಳು ತಮ್ಮದೇ ಆದ ವೈಶಿಷ್ಟ್ಯವನ್ನು ಹೊಂದಿವೆ. ಇದರಲ್ಲಿ ಬಹಳ ವಿಶಿಷ್ಟವಾದ ನದಿಯೊಂದಿದೆ. ಇದು ಪ್ರತಿ ಋತುವಿನಲ್ಲೂ ತನ್ನ ಬಣ್ಣ ಬದಲಿಸುತ್ತದೆ 

ಕೊಲಾಂಬಿಯಾದಲ್ಲಿ ಹರಿಯುವ ಈ ನದಿಯ ಹೆಸರು ಕ್ಯಾನೊ ಕ್ರಿಸ್ಟಲ್‌ 

ಇದರ ಬಣ್ಣ ಬದಲಾಗುತ್ತಿರುವುದರಿಂದ 5 ಬಣ್ಣಗಳ ನದಿ ಅಥವಾ ಲಿಕ್ವಿಡ್ ರೈನ್‌ಬೋ ರಿವರ್ ಎಂದೂ ಕೂಡ ಕರೆಯುತ್ತಾರೆ. ಈ ನದಿಯ ವಿಶೇಷತೆ ಏನು ನೋಡಿ 

ಈ ನದಿಯು ಕೊಲಂಬಿಯಾ ಸೆರಾನಿಯಾ ಡೆ ಲಾ ಮಕರೆನಾ ರಾಷ್ಟ್ರೀಯ ಉದ್ಯಾನದಲ್ಲಿ ಹರಿಯುತ್ತದೆ 

ಈ ನದಿಯು 100 ಕಿಲೋಮೀಟರ್‌ಗಿಂತಲೂ ಹೆಚ್ಚು ಹರಡಿಕೊಂಡಿದೆ. ಇದು ವರ್ಷದಲ್ಲಿ ಆರು ತಿಂಗಳು ಸಾಮಾನ್ಯ ನದಿಯಂತೆ ಕಾಣುತ್ತದೆ 

ಆದರೆ ಜೂನ್‌ನಿಂದ ನವೆಂಬರ್‌ವರೆಗೆ ಈ ನದಿಯ ಬಣ್ಣವು ಕೆಲವೊಮ್ಮೆ ಕೆಂಪು, ಕೆಲವೊಮ್ಮೆ ಹಳದಿ, ಕೆಲವೊಮ್ಮೆ ನೀಲಿ, ಕೆಲವೊಮ್ಮೆ ಹಸಿರು, ಕೆಲವೊಮ್ಮೆ ಕಪ್ಪು ಬಣ್ಣಕ್ಕೆ ತಿರುಗುತ್ತದೆ 

ಈ ನದಿಯು ಭೂಮಿ ಮೇಲಿನ ಅತ್ಯಂತ ಸುಂದರವಾದ ನದಿ ಎಂಬ ಬಿರುದು ಪಡೆದಿದೆ 

ಈ ನದಿಯಲ್ಲಿ ಪೊಡೊಸ್ಟೆಮಾಸಿಯೆ ಅಥವಾ ಮಕರೇನಿಯಾ ಕ್ಲಾವಿಗೇರಾ ಸಸ್ಯವರ್ಗವನ್ನು ಹೊಂದಿದೆ 

ಈ ಸಸ್ಯಗಳು ನೀರಿನ ಅಡಿಯಾದ ಗಟ್ಟಿಯಾದ ಮೇಲ್ಮೈಗಳಿಗೆ ಅಂಟಿಕೊಳ್ಳುತ್ತವೆ. ಈ ಕಾರಣಗಳಿಂದಾಗಿ ನದಿಯ ನೀರು ಬಣ್ಣವಾಗಿ ಕಾಣಿಸುತ್ತದೆ

ಸ್ಫಟಿಕದಂತೆ ಸ್ವಚ್ಛವಾದ ನೀರನ್ನು ಹೊಂದಿರುವ ಈ ನದಿಯನ್ನು ನೋಡಲು ಪ್ರತಿ ಸಹಸ್ರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ 

ಕಾಮರ್ಸ್ ವಿದ್ಯಾರ್ಥಿಗಳಿಗೆ ಲಕ್ಷ ಲಕ್ಷ ಸಂಬಳ ತಂದುಕೊಡುವ 5 ಅಧುನಿಕ ಕೋರ್ಸ್​ಗಳಿವು