ಮನುಷ್ಯರಿಗಿಂತ ಕುದುರೆಗಳೇ ಹೆಚ್ಚಿರುವ ವಿಶ್ವದ ವಿಭಿನ್ನ ದೇಶವಿದು
By Reshma Oct 05, 2024
Hindustan Times Kannada
ಪ್ರಪಂಚದಲ್ಲಿರುವ ಪ್ರತಿ ದೇಶವು ಒಂದೊಂದು ವೈಶಿಷ್ಟ್ಯಗಳನ್ನು ಹೊಂದಿದೆ. ಒಂದು ದೇಶಕ್ಕಿಂತ ಇನ್ನೊಂದು ದೇಶ ಭಿನ್ನವಾಗಿದೆ. ಇಲ್ಲೊಂದು ದೇಶದಲ್ಲಿ ಮನುಷ್ಯರಿಗಿಂತ ಕುದುರೆಗಳ ಸಂಖ್ಯೆಯೇ ಹೆಚ್ಚಿದೆಯಂತೆ
ಯಾವುದಪ್ಪಾ ಆ ದೇಶ ಅಂತ ಯೋಚನೆ ಮಾಡ್ತಾ ಇದೀರಾ, ಅದುವೇ ಮಂಗೋಲಿಯಾ. ಭೂಕುಸಿತ ಕಾರಣದಿಂದ ಮಾತ್ರವಲ್ಲ ಹೆಚ್ಚು ಕುದುರೆಗಳನ್ನ ಹೊಂದಿರುವ ದೇಶ ಎಂಬ ಕಾರಣಕ್ಕೂ ಇದು ಖ್ಯಾತಿ ಪಡೆದಿದೆ
ಸುತ್ತಲೂ ಗುಡ್ಡಗಾಡು ಪ್ರದೇಶ ಇರುವ ಈ ದೇಶಕ್ಕೆ ಯಾವುದೇ ಸಮುದ್ರ ಸಂಪರ್ಕವಿಲ್ಲ
ಏಷ್ಯಾ ಖಂಡದಲ್ಲಿ ಒಂದಾಗಿರುವ ಮಂಗೋಲಿಯಾ ವಿಶ್ವದಲ್ಲೇ ಅತಿ ಹೆಚ್ಚು ಭೂಕುಸಿತಕ್ಕೆ ಉಂಟಾಗುವ ದೇಶಗಳಲ್ಲಿ ಮೊದಲನೇಯದ್ದು. ಈ ದೇಶವು ಉತ್ತರದಲ್ಲಿ ರಷ್ಯಾ ಹಾಗೂ ದಕ್ಷಿಣದಲ್ಲಿ ಚೀನಾದ ಗಡಿಭಾಗವನ್ನು ಹೊಂದಿದೆ
ಮಂಗೋಲಿಯಾದ ವಾರ್ಷಿಕ ಜಾನುವಾರು ಗಣತಿಯ ಪ್ರಕಾರ 2023ರ ಅಂತ್ಯದ ವೇಳೆಗೆ ಈ ದೇಶದಲ್ಲಿ ಕುದುರೆಗಳ ಸಂಖ್ಯೆಯು ಸುಮಾರು 4.8 ಮಿಲಿಯನ್ ಎಂದು ಅಂದಾಜಿಸಲಾಗಿದೆ
ಮಂಗೋಲಿಯನ್‌ನಲ್ಲಿ ಮನುಷ್ಯರ ಸಂಖ್ಯೆ ಒಟ್ಟು 3.5 ಮಿಲಿಯನ್. ಈ ದೇಶದಲ್ಲಿ ಮನುಷ್ಯರಗಿಂತ 1 ಮಿಲಿಯನ್‌ಗೂ ಹೆಚ್ಚು ಕುದುರೆಗಳಿವೆ
ಈ ದೇಶದ ವಿವಿಧ ಭಾಗಗಳಲ್ಲಿ ಮಂಗೋಲ್ ತಳಿಯ ಕುದುರೆಗಳನ್ನು ಸಾಕುವುದನ್ನು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗಿದೆ. ಮಂಗೋಲಿಯಾದ ಆರ್ಥಿಕತೆಗೆ ಕುದುರೆಗಳು ಗಮನಾರ್ಹ ಕೊಡುಗೆ ನೀಡುತ್ತವೆ
ಮಂಗೋಲಿಯನ್ ತಳಿಯ ಕುದುರೆಗಳು ಅತ್ಯಂತ ಶಕ್ತಿಶಾಲಿ ಹಾಗೂ ಚುರುಕಾಗಿ, ವೇಗವಾಗಿರುತ್ತವೆ
ಮಂಗೋಲಿಯಾದ ಪ್ರತಿ ಮನೆಗಳಲ್ಲೂ ಕದುರೆಗಳನ್ನು ಸಾಕಲಾಗುತ್ತದೆ. ರೆಕ್ಕೆ ಇಲ್ಲದೆ ಪಕ್ಷಿಯಿಲ್ಲ, ಕುದುರೆ ಇಲ್ಲದೇ ಮಂಗೋಲಿಯಾ ಇಲ್ಲ ಎಂಬ ಗಾದೆ ಮಾತುಗಳು ಕೂಡ ಇದೆ
ಅಶ್ವಿನ್ ಸೇರಿ ವಿದಾಯ ಪಂದ್ಯವಾಡದ ಭಾರತದ ದಿಗ್ಗಜ ಕ್ರಿಕೆಟಿಗರು