ದೆವ್ವಗಳ ಭಯದಿಂದ 42 ವರ್ಷಗಳ ಕಾಲ ಮುಚ್ಚಿದ್ದ ಭಾರತದ ರೈಲು ನಿಲ್ದಾಣವಿದು

By Reshma
Sep 03, 2024

Hindustan Times
Kannada

ದೆವ್ವಗಳ ಕಥೆಯನ್ನು ನಾವೆಲ್ಲರೂ ನೋಡಿರುತ್ತೇವೆ. ಆದರೆ ದೆವ್ವ ನಿಜಕ್ಕೂ ಇದ್ಯಾ ಎಂಬ ಪ್ರಶ್ನೆಗೆ ಯಾರಲ್ಲೂ ಉತ್ತರವಿಲ್ಲ 

ದೆವ್ವದ ಬಗ್ಗೆ ಕೆಲವರಿಗೆ ನಂಬಿಕೆಯೇ ಇಲ್ಲ. ಆದರೆ ಕೆಲವರು ಅತಿಯಾಗಿ ನಂಬುತ್ತಾರೆ. ಭಾರತದ ಈ ರೈಲು ನಿಲ್ದಾಣದಲ್ಲಿ ದೆವ್ವವಿದೆ ಎಂದು ಹೇಳಲಾಗುತ್ತದೆ 

ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯಲ್ಲಿರುವ ಬೇಗಂಕೋದರ್ ರೈಲು ನಿಲ್ದಾಣವು ದೆವ್ವದ ಕಾರಣದಿಂದ 42 ವರ್ಷಗಳ ಕಾಲ ಮುಚ್ಚಿತ್ತು ಎಂದರೆ ನಂಬಲೇಬೇಕು

ವರದಿಗಳ ಪ್ರಕಾರ 1960ರಲ್ಲಿ ಈ ರೈಲು ನಿಲ್ದಾಣವನ್ನು ಸ್ಥಾಪಿಸಲಾಯಿತು. ಆದರೆ ಕೇವಲ 7 ವರ್ಷಗಳಲ್ಲಿ ಇಲ್ಲಿ ವಿಚಿತ್ರ ಘಟನೆಗಳು ನಡೆಯಲು ಆರಂಭವಾಯಿತು 

ಬೇಗಂಕೋದರ್ ರೈಲು ಸಿಬ್ಬಂದಿಯೊಬ್ಬರು ಮಹಿಳೆಯ ಭೂತ ನೋಡಿದ್ದಾಗಿ ಹೇಳಿದ್ದರು, ಅಲ್ಲದೇ ಆ ಸಮಯದಲ್ಲಿ ರೈಲು ಅಪಘಾತದಲ್ಲಿ ಹಲವರು ಸಾವನ್ನಪ್ಪಿದ್ದರು ಎಂಬ ವದಂತಿಯೂ ಹರಡಿತ್ತು

ಬೇಗಂಕೋದರ್ ರೈಲು ನಿಲ್ದಾಣದಲ್ಲಿ ದೆವ್ವ ಕಾಣಿಸಿದ ಕೆಲ ದಿನಗಳಲ್ಲಿ ಸ್ಟೇಷನ್ ಮಾಸ್ಟರ್ ಮತ್ತು ಅವರ ಕುಟುಂಬವು ರೈಲು ಗಾಡಿಯಲ್ಲಿ ಶವವಾಗಿ ಪತ್ತೆಯಾಗಿತ್ತು. ಇದು ದೆವ್ವದ ಕೈವಾಡ ಎಂದು ಜನ ಮಾತನಾಡಲು ಆರಂಭಿಸಿದರು 

ಆ ನಂತರ ಈ ರೈಲು ನಿಲ್ದಾಣದಲ್ಲಿ ಭೂತದ ಬಗೆಗಿನ ಹಲವು ವಿಚಾರಗಳು ಕೇಳಿ ಬರಲು ಪ್ರಾರಂಭವಾಯಿತು. ಸೂರ್ಯಾಸ್ತದ ನಂತರ ಇಲ್ಲಿ ರೈಲು ಹಾದು ಹೋದರೆ ಹೆಣ್ಣಿನ ದೆವ್ವ ಕಾಡುತ್ತದೆ ಎಂದು ಹೇಳಲಾಗುತ್ತದೆ

ಈ ರೀತಿ ಹಲವು ಘಟನೆಗಳು ಬೆಳಕಿಗೆ ಬಂದ ನಂತರ ಬೇಗಂಕೋದರ್ ರೈಲು ನಿಲ್ದಾಣವನ್ನು ದೆವ್ವದ ರೈಲು ನಿಲ್ದಾಣ ಎಂದು ಪರಿಗಣಿಸಲಾಯಿತು. ಇದು ರೈಲ್ವೆ ದಾಖಲೆಯಲ್ಲೂ ಹೀಗೆ ಇದೆ. 

ಈ ನಿಲ್ದಾಣದಲ್ಲಿ ದೆವ್ವದ ಭೀತಿಯಿಂದ ಸಿಬ್ಬಂದಿ  ಉಳಿಯಲು ನಿರಾಕರಿಸಿದರು. ರೈಲುಗಳು ಕೂಡ ನಿಲುಗಡೆ ನಿಲ್ಲಿಸಿದವು. ಇದರಿಂದ ಈ ಸ್ಥಳವು ಹೆಚ್ಚು ನಿರ್ಜನವಾಗಿದೆ 

2009ರಲ್ಲಿ ಗ್ರಾಮದ ಜನರ ಬೇಡಿಕೆ ಮೇರೆಗೆ ಅಂದಿನ ರೈಲ್ವೇ ಸಚಿವೆ ಮಮತಾ ಬ್ಯಾನರ್ಜಿ ಈ ನಿಲ್ದಾಣವನ್ನು ಪುನಃ ಆರಂಭಿಸಿದರು.  ಪ್ರಸ್ತುತ ಇಲ್ಲಿ 10 ರೈಲುಗಳು ನಿಲ್ಲುತ್ತವೆ.

Apple ಪ್ರಾಡಕ್ಟ್‌ ಫ್ಯಾನ್‌ಗಳೇ ರೆಡಿ ಆಗಿ, ಬಂದೇ ಬಿಡ್ತು ಲಾಂಚ್ ಈವೆಂಟ್