ಹಾವು ಭೂಮಿ ಮೇಲಿನ ವಿಷಕಾರಿ ಜೀವಿಗಳಲ್ಲಿ ಒಂದು. ಪ್ರತಿಯೊಬ್ಬರು ಹಾವಿಗೆ ಹೆದರುತ್ತಾರೆ. ಭಾರತದಲ್ಲಿ ಹಾವು ಕಡಿತದಿಂದ ಪ್ರತಿವರ್ಷ ಹಲವರು ಸಾವನ್ನಪ್ಪುತ್ತಾರೆ.
ಹಾವಿನ ವಿಷವು ಮಾರಣಾಂತಿಕವಾದ್ರೂ ಇದು ಅನೇಕ ರೋಗಗಳಿಂದ ಜೀವ ಉಳಿಸಲು ಕೂಡ ಸಹಾಯ ಮಾಡುತ್ತದೆ ಎಂದರೆ ನಂಬಲೇಬೇಕು.
ಹಾವು ಕಡಿತಕ್ಕೆ ಒಳಗಾದ ವ್ಯಕ್ತಿಯ ಪ್ರಾಣ ಉಳಿಸಲು ಅದರ ವಿಷದಿಂದಲೇ ತಯಾರಾದ ಆಂಟಿ ವೇನಮ್ ಔಷಧಿಗಳನ್ನು ಬಳಸಲಾಗುತ್ತದೆ.
ಹಾವಿನ ವಿಷವನ್ನು ಹಲವು ಬಗೆಯ ಔಷಧಿಗಳಲ್ಲಿ ಬಳಸುವುದರಿಂದ ಮಾರುಕಟ್ಟೆಯಲ್ಲಿ ಇದರ ಬೆಲೆಯು ಹೆಚ್ಚಾಗಿದೆ.
ಭಾರತದಲ್ಲಿ ಕಂಡುಬರುವ ಸ್ಪೆಕ್ಟಾಕಲ್ಡ್ ಕೋಬ್ರಾದ ಒಂದು ಗ್ರಾ ವಿಷದ ಬೆಲೆ ಸುಮಾರು 12,500 ರೂವರೆಗೆ ಇರುತ್ತದೆ.
ಹಾವಿನ ವಿಷವನ್ನು ಸಾವಿರಾರು ವರ್ಷಗಳಿಂದ ಸಾಂಪ್ರದಾಯಿಕ ಔಷಧ ಪದ್ಧತಿಯಲ್ಲಿ ಬಳಸಲಾಗುತ್ತಿದೆ. ಆಲ್ಬರ್ಟ್ ಕಾಲ್ಮೆಟ್ ಎನ್ನುವವರು ಪ್ರಾಣಿಗಳಿಗೆ ಸ್ವಲ್ಪ ಮಟ್ಟಿಗೆ ವಿಷ ಚುಚ್ಚುವ ಮೂಲಕ ಆಂಟಿ ವೇನಮ್ ತಯಾರಿಸಲು ಆರಂಭಿಸಿದರು ಎನ್ನಲಾಗುತ್ತದೆ.
ಇತರ ಪ್ರಾಣಿಗಳ ವಿಷಕ್ಕೆ ಹೋಲಿಸಿದರೆ ಹಾವಿನ ವಿಷದಿಂದ ತಯಾರಿಸಿದ ಔಷಧಿಗಳು ಸಾಕಷ್ಟು ಪ್ರಮಾಣದಲ್ಲಿವೆ. ಏಕೆಂದರೆ ಇತರ ವಿಷಕಾರಿ ಜೀವಿಗಳಿಗೆ ಹೋಲಿಸಿದರೆ ಹಾವಿನ ವಿಷವು ಹೇರಳವಾಗಿದೆ.
ಹಾವಿನ ವಿಷವನ್ನು ಹೃದಯಾಘಾತ, ಅಲ್ಝೈಮರ್ ಮತ್ತು ಪಾರ್ಕಿನ್ಸನ್ ಕಾಯಿಲೆಯ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಔಷಧಿಗಳಲ್ಲಿ ಬಳಸುವುದರಿಂದ ಹಾವಿನ ವಿಷವು ಚಿನ್ನಕ್ಕಿಂತ ಹೆಚ್ಚು ದುಬಾರಿಯಾಗಿದೆ.
ಪ್ರಪಂಚದಾದ್ಯಂತ 3 ಸಾವಿರಕ್ಕೂ ಹೆಚ್ಚು ಜಾತಿಯ ಹಾವುಗಳು ಕಂಡುಬರುತ್ತವೆ. ಆದರೆ ಅವುಗಳಲ್ಲಿ ಕೆಲವು ಮಾತ್ರ ವಿಷಕಾರಿ ಹಾವುಗಳಾಗಿವೆ.
ಭಾರತದಲ್ಲಿ ಸುಮಾರು 58 ಜಾತಿಯ ವಿಷಕಾರಿ ಹಾವುಗಳಾಗಿವೆ. ಕ್ರೈಟ್, ರಸೆಲ್ಸ್ ವೈಪರ್, ಸಾ–ಸ್ಕೇಲ್ಡ್ ವೈಪರ್ ಮತ್ತು ಇಂಡಿಯನ್ ಕೋಬ್ರಾ ಭಾರತದ ನಾಲ್ಕು ಅತ್ಯಂತ ವಿಷಕಾರಿ ಹಾವುಗಳಾಗಿವೆ.
Horoscope: ಏಪ್ರಿಲ್ 22ರ ಮಂಗಳವಾರ 12 ರಾಶಿಯವರ ಫಲಾಫಲ ಹೀಗಿವೆ