ಗಾಳಿಪಟವು ಭಾರತಕ್ಕಿಂತ ಮೊದಲು ಈ ದೇಶದಲ್ಲಿತ್ತು, ಇಲ್ಲಿದೆ ಇತಿಹಾಸ
Pinterest
By Priyanka Gowda
Jan 20, 2025
Hindustan Times
Kannada
ಮಕರ ಸಂಕ್ರಾಂತಿ ಹಬ್ಬದಲ್ಲಿ ಭಾರತದಲ್ಲಿ ವರ್ಣರಂಜಿತ ಗಾಳಿಪಟಗಳನ್ನು ಹಾರಿಸಲಾಗುತ್ತದೆ. ಅದರಲ್ಲೂ ಚಿಕ್ಕ ಮಕ್ಕಳಿಗಂತೂ ಗಾಳಿಪಟ ಹಾರಿಸುವುದು ತುಂಬಾನೇ ಇಷ್ಟ.
Pinterest
ಗಾಳಿಪಟ ಹಾರಿಸುವುದು ಭಾರತದಲ್ಲಿ ಹುಟ್ಟಿಕೊಂಡಿದೆ ಎಂದು ಹಲವರು ಭಾವಿಸಿದ್ದಾರೆ. ಆದರೆ, ಗಾಳಿಪಟ ಹುಟ್ಟಿಕೊಂಡಿದ್ದು ನಮ್ಮ ದೇಶದಲ್ಲಿಯಲ್ಲ.
Pinterest
ಗಾಳಿಪಟವನ್ನು ಚೀನಾದಲ್ಲಿ ಕಂಡುಹಿಡಿಯಲಾಯಿತು ಎಂದು ನಂಬಲಾಗಿದೆ. ಇದರ ಇತಿಹಾಸವು ಸುಮಾರು 2000 ವರ್ಷಗಳಷ್ಟು ಹಳೆಯದು.
Pinterest
ಕ್ರಿ.ಪೂ ಮೂರನೇ ಶತಮಾನದಲ್ಲಿ ಗಾಳಿಪಟಗಳನ್ನು ತಯಾರಿಸಲಾಯಿತು. ಚೀನಾದಿಂದ ಈ ಗಾಳಿಪಟಗಳು ಭಾರತ ಸೇರಿದಂತೆ ಇತರೆ ದೇಶಗಳನ್ನು ತಲುಪಿದವು.
Pinterest
ಗಾಳಿಪಟಗಳನ್ನು ಆರಂಭದಲ್ಲಿ ಬಿದಿರು ಮತ್ತು ರೇಷ್ಮೆವಸ್ತ್ರದಿಂದ ತಯಾರಿಸಲಾಗುತ್ತಿತ್ತು. ಭಯಾನಕ ಆಕಾರದ ಗಾಳಿಪಟಗಳನ್ನು ಹಾರಿಸುವ ಮೂಲಕ ಶತ್ರುಗಳಲ್ಲಿ ಭೀತಿ ಹುಟ್ಟಿಸಲಾಗುತ್ತಿತ್ತು.
Pinterest
ರಾಮಚರಿತಮಾನಸ ಗ್ರಂಥದಲ್ಲಿ ಒಂದು ಪದ್ಯವು ಮನಸ್ಸು ಆಕಾಶದಲ್ಲಿ ಹಾರುತ್ತಿರುವ ಗಾಳಿಪಟದಂತಿದೆ ಎಂದು ಉಲ್ಲೇಖಿಸಲಾಗಿದೆ.
Pinterest
ರಾಮಚರಿತಮಾನಸ ಗ್ರಂಥದ ಉಲ್ಲೇಖದ ಪ್ರಕಾರ, ಶ್ರೀರಾಮಚಂದ್ರ ತಮ್ಮ ಸಹೋದರರು ಮತ್ತು ಸ್ನೇಹಿತರೊಂದಿಗೆ ಗಾಳಿಪಟಗಳನ್ನು ಹಾರಿಸಲು ಪ್ರಾರಂಭಿಸಿದರು. ಆ ಗಾಳಿಪಟ ಹಾರಿ ಸ್ವರ್ಗ ತಲುಪಿತು.
Pinterest
ಅನೇಕ ಸ್ತೋತ್ರಗಳು ಮತ್ತು ಜಾನಪದ ಕಥೆಗಳಲ್ಲಿ ಕೃಷ್ಣನು ಗಾಳಿಪಟಗಳನ್ನು ಹಾರಿಸಿದ ಬಗ್ಗೆಯೂ ಉಲ್ಲೇಖಿಸಲಾಗಿದೆ.
Pinterest
ಭಾರತವು ಸ್ವಾತಂತ್ರ್ಯ ಪಡೆದ ಆಗಸ್ಟ್ 15, 1947 ರಂದು ಗಾಳಿಪಟ ಹಾರಿಸುವ ಮೂಲಕ ಸಂಭ್ರಮಿಸಲಾಯಿತು.
Pinterest
ಚೋಳ ರಾಜವಂಶದ ದೇವಾಲಯಗಳ ವಾಸ್ತುಶಿಲ್ಪ ಅದ್ಭುತವಾಗಿವೆ. ಪುರಾತನ ಶಿವನ ದೇವಾಲಯಗಳು ಸೇರಿ ಚೋಳರ ಕಾಲದ ನೋಡಲೇಬೇಕಾದ ದೇವಾಲಯಗಳ ವಿವರ ಇಲ್ಲಿದೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ