ಹಾವು ಸಾಕಿ ಕೋಟ್ಯಂತರ ರೂಪಾಯಿ ಸಂಪಾದಿಸುವ ಊರು ಇದು

By Raghavendra M Y
Jun 17, 2024

Hindustan Times
Kannada

ಪ್ರಪಂಚದಲ್ಲಿ ವಿವಿಧ ರೀತಿಯ ಜೀವಿಗಳು ಕಂಡುಬರುತ್ತವೆ. ಅವುಗಳಲ್ಲಿ ಕೆಲವು ಭೂಮಿಯಲ್ಲಿ, ಇನ್ನೂ ಕೆಲವು ನೀರಿನಲ್ಲಿ ವಾಸಿಸುತ್ತವೆ

ಜೀವಿಗಳಲ್ಲಿ ಹಾವು ಕೂಡ ಒಂದಾಗಿದ್ದು, ಇದು ತುಂಬಾ ವಿಷಕಾರಿಯಾಗಿದೆ. ಇವು ಎಷ್ಟು ಅಪಾಯಕಾರಿ ಎಂದರೆ ಇದರ ಹೆಸರು ಹೇಳಿದ್ರೆ ಜನ ನಡುಗುತ್ತಾರೆ

ಹಾವು ಕಚ್ಚಿದರೆ ಮನುಷ್ಯ ಕೆಲವು ಗಂಟೆಗಳಲ್ಲಿ ಸಾಯಬಹುದು. ಈ ಕಾರಣಕ್ಕಾಗಿಯೇ ಜನರು ಹಾವುಗಳೆಂದರೆ ಭಯ ಪಡುತ್ತಾರೆ. ಅವುಗಳಿಂದ ದೂರ ಉಳಿಯುತ್ತಾರೆ

ಹಾವುಗಳ ಭಯದಿಂದ ಜನರು ದೂರ ಉಳಿಯುತ್ತಿದ್ದರೂ ಚೀನಾದಲ್ಲಿ ಹಾವುಗಳನ್ನು ಸಾಕುವ ಹಳ್ಳಿಯೊಂದಿದೆ

ಚೀನಾದ ಝಿಜಿಯಾಂಗ್ ಪ್ರಾಂತ್ಯದ ಒಂದು ಹಳ್ಳಿಯಲ್ಲಿ ವಿಷಕಾರಿ ಹಾವುಗಲನ್ನು ಸಾಕಲಾಗುತ್ತಿದೆ. ಈ ಗ್ರಾಮದ ಬಹುತೇಕ ಜನರ ಆದಾಯದ ಮೂಲ ಹಾವುಗಳ ಸಾಕಾಣಿಕೆ

ಚೀನಾದಲ್ಲಿ ಹಾವುಗಳ ಸಾಕಣೆಗೆ ಹೆಸರುವಾಸಿಯಾಗಿರುವ ಹಳ್ಳಿಯ ಹೆಸರು ಜಿಸಿಕಿಯಾವೊ. ಈ ಗ್ರಾಮದಲ್ಲಿ ಪ್ರತಿ ವರ್ಷ ಸುಮಾರು 30 ಲಕ್ಷ ಹಾಲವುಗಳನ್ನು ಸಾಕಲಾಗುತ್ತದೆ

1980 ರಲ್ಲಿ ಚೀನಾದ ಈ ಗ್ರಾಮದಲ್ಲಿ ಹಾವು ಸಾಕಣೆಯ ಸಂಪ್ರದಾಯ ಪ್ರಾರಂಭವಾಯಿತು. ಇಲ್ಲಿನ ಜನರು ಹೊಲಗಳಲ್ಲಿ ಬೆಳೆಗೆ ಬದಲಾಗಿ ಹಾವುಗಳನ್ನು ಸಾಕುತ್ತಾರೆ

ಚೀನಾದಲ್ಲಿ ವಿಷಕಾರಿ ಹಾವುಗಳನ್ನು ಸಾವಿರಾರು ವರ್ಷಗಳಿಂದ ಸಾಂಪ್ರದಾಯಿಕ ಔಷಧಗಳನ್ನು ತಯಾರಿಸಲು ಬಳಸಲಾಗುತ್ತದೆ

ಅಂಕಿ ಅಂಶಗಳ ಜಿಸಿಕಿಯಾವೊ ಗ್ರಾಮದಲ್ಲಿ ಜನಸಂಖ್ಯೆ ಕಡಿಮೆ. ಆದರೆ ಇಲ್ಲಿನ ಜನರು ಹಾವಿನ ವ್ಯಾಪಾರವನ್ನು ಮಾಡುತ್ತಾರೆ. 100 ಕ್ಕೂ ಹೆಚ್ಚು ಹಾವು ಸಾಕಣೆ ಕೇಂದ್ರಗಳಿವೆ

ಜಿಸಿಕಿಯಾವೊದಲ್ಲಿ ಹಾವುಗಳ ಕೃಷಿಯನ್ನು ಚರ್ಮ ರೋಗಗಳನ್ನು ಗುಣಪಡಿಸಲು ಪ್ರಾರಂಭಿಸಲಾಯಿತು. ಆದರೆ ನಂತರ ಕ್ಯಾನ್ಸರ್‌ನಂತಹ ಕಾಯಿಲೆಗಳಿಗೆ ಹಾವುಗಳನ್ನು ಬಳಸಲಾರಂಭಿಸಿದರು

ಚೀನಾದ ಈ ಗ್ರಾಮದಲ್ಲಿ ಹೆಚ್ಚಿನ ವಿಷರಹಿತ ಹಾವುಗಳನ್ನು ಸಾಕಲಾಗುತ್ತದೆ. ಆದರೆ ನಾಗರಹಾವು, ಹೆಬ್ಬಾವು, ಕಾಳಿಂಗ ಸರ್ಪಗಳಂತಹ ಹಾವುಗಳನ್ನು ಸಾಕುತ್ತಾರೆ

ಬೇಸಿಗೆಯಲ್ಲಿ ಮರಿಗಳು ಹಾವಿನ ಮೊಟ್ಟೆಗಳಿಂದ ಹೊರಬರುತ್ತವೆ. ಇವುಗಳನ್ನು ಚಳಿಗಾಲದವರೆಗೆ ಸಾಕಿ ಮಾರಾಟ ಮಾಡಲಾಗುತ್ತದೆ. ಅಮೆರಿಕ, ಜರ್ಮನಿ, ದಕ್ಷಿಣ ಕೊರಿಯಾ, ರಷ್ಯಾಗೂ ರಫ್ತು ಮಾಡುತ್ತಾರೆ

ಮಾಸ್ಟರ್‌ ಪೀಸ್‌ ಚೆಲುವೆ ಜ್ಯೋತಿ ರೈ ಹೊಸ ಫೋಟೋಗಳು