ಉಷ್ಣ ವಲಯದ ಮಳೆ ಕಾಡುಗಳಲ್ಲಿ ಕಂಡುಬರುವ 5 ಅತಿ ಸುಂದರ ಪಕ್ಷಿಗಳು 

PEXELS

By Reshma
May 15, 2025

Hindustan Times
Kannada

ಉಷ್ಣವಲಯದ ಮಳೆಕಾಡುಗಳಲ್ಲಿ ವಿಶ್ವದ ಅತ್ಯಂತ ಆಕರ್ಷಕ ಮತ್ತು ವರ್ಣರಂಜಿತ ಪಕ್ಷಿಗಳು ಕಾಣ ಸಿಗುತ್ತವೆ. ಇವು ಅಲ್ಲಿನ ಪರಿಸರ ವ್ಯವಸ್ಥೆಯ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ

PEXELS

ಉಷ್ಣವಲಯದ ಮಳೆಕಾಡಿನ 5 ಅತಿ ಸುಂದರ, ನಯನ ಮನೋಹ ಪಕ್ಷಿಗಳ ಬಗ್ಗೆ ತಿಳಿಯೋಣ

PEXELS

ಸ್ಕಾರ್ಲೆಟ್ ಮಕಾವ್

ಅಮೆಜಾನ್ ಕಾಡಿನ ಜಲಾನಯನ ಪ್ರದೇಶಗಳಲ್ಲಿ ಕಂಡುಬರುವ ಸುಂದರ ಪಕ್ಷಿಗಳಿವು. ನೀಲಿ ಮತ್ತು ಹಳದಿ ಗರಿಗಳನ್ನು ಹೊಂದಿರುವ ಕೆಂಪು ಬಣ್ಣದ ಸುಂದರ ಹಕ್ಕಿ ಇದು 

PEXELS

ಕೀಲ್-ಬಿಲ್ಡ್ ಟೌಕನ್

ಕೀಲ್-ಬಿಲ್ಡ್ ಟೌಕನ್‌ಗಳು ಮಧ್ಯ ಮತ್ತು ದಕ್ಷಿಣ ಅಮೆರಿಕಾದಾದ್ಯಂತ ಉಷ್ಣವಲಯದ ಮಳೆಕಾಡುಗಳಲ್ಲಿ ಕಂಡುಬರುತ್ತವೆ. ವಿವಿಧ ಬಣ್ಣದ ಕೊಕ್ಕು, ಹಳದಿ ಬಣ್ಣದ ಕತ್ತು, ಕಪ್ಪು ಬಣ್ಣದ ದೇಹ ಹೀಗೆ ವೈವಿದ್ಯಮಯ ಬಣ್ಣಗಳಿಂದ ಕೂಡಿರುವ ನಯನ ಮನೋಹರವಾಗಿ ಕಾಣಿಸುವ ಪಕ್ಷಿ ಇದು 

PEXELS

ಆಫ್ರಿಕನ್ ಬೂದು ಗಿಳಿ

ಆಫ್ರಿಕನ್ ಬೂದು ಗಿಳಿ ಪಶ್ಚಿಮ ಮತ್ತು ಮಧ್ಯ ಆಫ್ರಿಕಾದ ದಟ್ಟವಾದ ಮಳೆಕಾಡುಗಳಲ್ಲಿ ವಾಸಿಸುತ್ತದೆ, ಮತ್ತು ಹೆಚ್ಚಾಗಿ ಬೂದು ಬಣ್ಣದ ರೆಕ್ಕೆಗಳನ್ನು ಹೊಂದಿದ್ದು, ಸ್ಪಷ್ಟವಾದ ಕೆಂಪು ಬಾಲವನ್ನು ಹೊಂದಿರುತ್ತದೆ

PEXELS

ನೀಲಿ ಮತ್ತು ಹಳದಿ ಮಕಾವ್

ನೀಲಿ ಮತ್ತು ಹಳದಿ ಮಕಾವ್ ದಕ್ಷಿಣ ಅಮೆರಿಕದ  ಕಾಡುಗಳಲ್ಲಿ ವಾಸಿಸುತ್ತದೆ. ಇದು ಆಕರ್ಷಕ ನೀಲಿ, ಹಳದಿ ದೇಹದ ಭಾಗಗಳನ್ನು ಹೊಂದಿರುತ್ತದೆ.  ಉದ್ದವಾದ ಬಾಲದಿಂದ ಇದನ್ನು ಗುರುತಿಸಬಹುದು

PEXELS

ಬಾಲಿ ಮೈನಾ

ಇದು ವಿಚಿತ್ರವಾಗಿ ಕೂಗುವ ಹಕ್ಕಿ. ಬಿಳಿ ಮತ್ತು ಕಪ್ಪು ಬಣ್ಣದ ರೆಕ್ಕೆಗಳನ್ನು ಹೊಂದಿರುತ್ತದೆ. ಕಣ್ಣುಗಳ ಸುತ್ತಲೂ ಸ್ಪಷ್ಟವಾದ ನೀಲಿ ತೇಪೆಯಿಂದ ಆವರಿಸಿರುತ್ತದೆ. ಇದು ಇಂಡೋನೇಷ್ಯಾದ ಬಾಲಿ ಮೂಲದವದ ಪಕ್ಷಿಯಾಗಿದ್ದು, ಅರಣ್ಯ ಮತ್ತು ಸವನ್ನಾ ಪ್ರದೇಶಗಳಲ್ಲಿ ವಾಸಿಸುತ್ತದೆ 

PEXELS

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS