ಯಾವ ದೇಶದಲ್ಲಿ ಮೊದಲು ಟ್ರಾಫಿಕ್ ಸಿಗ್ನಲ್ ಲೈಟ್ ಅಳವಡಿಸಲಾಯಿತು?

By Reshma
Oct 19, 2024

Hindustan Times
Kannada

ರಸ್ತೆಯಲ್ಲಿ ಗಾಡಿ ಓಡಿಸುವಾಗ ಸಂಚಾರ ನಿಯಮಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯ. ಇದರಲ್ಲಿ ಟ್ರಾಫಿಕ್ ಸಿಗ್ನಲ್ ಕೂಡ ಒಂದು 

ಸಿಗ್ನಲ್‌ಗಳಲ್ಲಿ ಟ್ರಾಫಿಕ್ ಸಿಗ್ನಲ್ ಲೈಟ್‌ಗಳನ್ನು ಅಳವಡಿಸಿ ಇರುತ್ತಾರೆ. ಇದರಲ್ಲಿ ಕೆಂಪು, ಹಳದಿ, ಹಸಿರು ದೀಪಗಳಿರುತ್ತವೆ. ಈ ಮೂರು ಬಣ್ಣಕ್ಕೂ ಒಂದೊಂದು ಅರ್ಥವಿರುತ್ತದೆ 

ಕೆಂಪು ಲೈಟ್ ಬಂದರೆ ನೀವು ವಾಹನ ನಿಲ್ಲಿಸಬೇಕು ಎಂದು ಅರ್ಥ, ಹಳದಿ ದೀಪವು ನೀವಿಗ ಹೊರಡಲು ಸಿದ್ಧವಾಗಬಹುದು ಎಂಬುದನ್ನು ಸೂಚಿಸುತ್ತದೆ. ಟ್ರಾಫಿಕ್ ಗ್ರೀನ್ ಆದ ಕೂಡಲೇ ನೀವು ಹೊರಡಬಹುದು ಎಂದರ್ಥ 

ಹಾಗಾದರೆ ಈ ಟ್ರಾಫಿಕ್ ಸಿಗ್ನಲ್ ಲೈಟ್‌ ಅನ್ನು ಮೊದಲು ಬಾರಿ ಎಲ್ಲಿ ಅಳವಡಿಸಲಾಯಿತು ಎಂದು ಅನುಮಾನ ನಿಮಗೆ ಬಂದಿರಬಹುದು, ಅದಕ್ಕೆ ಇಲ್ಲಿದೆ ಉತ್ತರ 

ವಿಶ್ವದ ಮೊದಲ ಟ್ರಾಫಿಕ್ ಸಿಗ್ನಲ್ ಅನ್ನು ಬ್ರಿಟಿಷ್ ಕೌನ್ಸಿಲ್ ಆಫ್ ಪಾರ್ಲಿಮೆಂಟ್‌ ಮುಂದೆ ಸ್ಥಾಪಿಸಲಾಯಿತು. ರೈಲ್ವೆ ಎಂಜಿನಿಯರ್‌ ಆಗಿದ್ದ ಜೆಕೆ ನೈಟ್ ಎನ್ನುವವರು ಇದನ್ನು ಅಳವಡಿಸಿದ್ದಾರೆ

ಆರಂಭದ ದಿನಗಳಲ್ಲಿ ಟ್ರಾಫಿಕ್ ಸಿಗ್ನಲ್ ಲೈಟ್‌ನಲ್ಲಿ ಕೆಂಪು ಹಾಗೂ ಹಸಿರು ಬಣ್ಣವನ್ನು ಮಾತ್ರ ಬಳಸಲಾಗುತ್ತಿತ್ತು. ಮುಖ್ಯವಾಗಿ ಇದು ರಾತ್ರಿಯಲ್ಲಿ ಮಾತ್ರ ಗೋಚರವಾಗುವಂತೆ ಇದರಲ್ಲಿ ಅನಿಲ ತುಂಬಿಸಲಾಗುತ್ತಿತ್ತು

ವಿಶ್ವ ಮೊದಲ ಮೂರು ಬಣ್ಣದ ಸುರಕ್ಷಿತ ಸ್ವಯಂ ಚಾಲಿತ ವಿದ್ಯುತ್ ದ್ವೀಪವನ್ನು 1890ರಲ್ಲಿ ಅಮೆರಿಕದಲ್ಲಿ ಅಳವಡಿಸಲಾಯಿತು 

ಟ್ರಾಫಿಕ್ ಸಿಗ್ನಲ್‌ನಲ್ಲಿ ಕೆಂಪು, ಹಳದಿ, ಹಸಿರು ಬಣ್ಣವನ್ನು ಮಾತ್ರ ಯಾಕೆ ಬಳಸುತ್ತಾರೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ 

ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಬಳಸುವ ಕೆಂಪು ಬಣ್ಣವು ಇತರ ಬಣ್ಣಗಳಿಗಿಂತ ಹೆಚ್ಚು ಗಾಢವಾಗಿದೆ. ಅದು ದೂರದಿಂದ ಗೋಚರಿಸುತ್ತದೆ, ಅಲ್ಲದೇ ಇದು ಅಪಾಯದ ಸಂಕೇತವೂ ಹೌದು 

ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಬಳಸುವ ಹಳದಿ ಬಣ್ಣವು ಶಕ್ತಿ ಹಾಗೂ ಸೂರ್ಯನ ಸಂಕೇತ. ಈ ಬಣ್ಣವು ನೀವಿನ್ನು ಹೊರಡಲು ಸಿದ್ಧರಾಗಬೇಕು ಎಂದರೆ ನಿಮ್ಮ ಶಕ್ತಿಯನ್ನು ಖರ್ಚು ಮಾಡಲು ಸಿದ್ಧರಾಗಬೇಕು ಎಂಬುದನ್ನು ಸೂಚಿಸುತ್ತದೆ 

ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಬಳಸುವ ಹಸಿರು ಬಣ್ಣವು ಶಾಂತಿ ಹಾಗೂ ಪ್ರಕೃತಿಯ ಸಂಕೇತವಾಗಿದೆ. ಇದು ಅಪಾಯದ ವಿರುದ್ಧವಾಗಿ, ಮುಂದೆ ಚಲಿಸುವಂತೆ ಸೂಚಿಸುತ್ತದೆ 

ಬ್ರೇಕಪ್ ಬಗ್ಗೆ ಸ್ಪಷ್ಟನೆ ಕೊಟ್ಟ ಮಾರಿಮುತ್ತು ಮೊಮ್ಮಗಳು ಜಯಶ್ರೀ ಆರಾಧ್ಯ