ಯಾವುದೇ ಪ್ರಯೋಗಗಳನ್ನ ಮನುಷ್ಯರಿಗಿಂತ ಮೊದಲು ಇಲಿಗಳ ಮೇಲೆ ಮಾಡುವುದೇಕೆ? 

By Reshma
Nov 11, 2024

Hindustan Times
Kannada

ಮನುಷ್ಯನ ದೇಹದ ವಿಜ್ಞಾನವು ಸಾಕಷ್ಟು ಸಂಕೀರ್ಣವಾಗಿದೆ. ನಮ್ಮ ದೇಹವು ಸುಸ್ಥಿತಿಯಲ್ಲಿರಲು ಹಾಗೂ ರೋಗಗಳಿಂದ ದೇಹವನ್ನು ರಕ್ಷಿಸಲು ವಿವಿಧ ರೀತಿಯ ಸಂಶೋಧನೆಗಳು ನಡೆಯುತ್ತಲೇ ಇರುತ್ತವೆ 

ವಿಜ್ಞಾನಿಗಳು ಮಾನವರ ಮೇಲೆ ನೇರವಾಗಿ ಯಾವುದೇ ರೀತಿಯ ಕ್ಲಿನಿಕಲ್ ಪ್ರಯೋಗಗಳನ್ನು ಮಾಡುವುದಿಲ್ಲ. ಮೊದಲು ಇಲಿಗಳ ಮೇಲೆ ಪ್ರಯೋಗ ಮಾಡಲಾಗುತ್ತದೆ 

ವಿಶೇಷವಾಗಿ ವೈದ್ಯಕೀಯ ಹಾಗೂ ಔಷಧಿಗಳಿಗೆ ಸಂಬಂಧಿಸಿದ ಪ್ರಯೋಗಗಳನ್ನು ಇಲಿಗಳ ಮೇಲೆ ಮಾತ್ರ ಮಾಡಲಾಗುತ್ತದೆ. ಇಲಿಗಳ ಮೇಲೆ ಮೊದಲು ಪ್ರಯೋಗ ಮಾಡುವುದು ಏಕೆ ಎಂದು ನಿಮಗೆ ತಿಳಿದಿದ್ಯಾ?

ಇಲಿಯು ಮನುಷ್ಯರಂತೆ ಸಸ್ತನಿಯಾಗಿದೆ. ಇದರ ಜೀವಕೋಶಗಳು ಕೂಡ ಮನುಷ್ಯರಂತೆ ಇರುತ್ತವೆ 

ಇಲಿಗಳ ಮೇಲೆ ಪ್ರಯೋಗ ಯಶಸ್ವಿಯಾದರೆ ಮನುಷ್ಯರ ಮೇಲೂ ಯಶಸ್ವಿಯಾಗುವ ಸಾಧ್ಯತೆ ಹೆಚ್ಚು ವಿಜ್ಞಾನ ನಂಬುತ್ತದೆ 

ಇಲಿಗಳ ಮೇಲೆ ಮಾತ್ರವಲ್ಲ ಚಿಂಪಾಜಿಗಳು, ಕೋತಿಗಳ ಮೇಲೂ ಇಂತಹ ಪ್ರಯೋಜನಗಳನ್ನು ಮಾಡಬಹುದು. ಆದರೆ ಇಲಿಗಳು ಗಾತ್ರದಲ್ಲಿ ಚಿಕ್ಕದು, ಇದನ್ನು ಸುಲಭವಾಗಿ ಪ್ರಯೋಗಾಲಯದಲ್ಲಿ ಇಡಬಹುದು 

ಯಾವುದೇ ರೀತಿ ಔಷಧಿಗಳನ್ನು ಪರೀಕ್ಷಿಸಲು ಹಾಗೂ ತ್ವರಿತ ಫಲಿತಾಂಶ ಪಡೆಯಲು ಇಲಿಗಳು ಅತ್ಯುತ್ತಮ ಆಯ್ಕೆಯಾಗಿದೆ. ಏಕೆಂದರೆ ಇಲಿಗಳ ಜೀವತಾವಧಿ ಬಹಳ ಕಡಿಮೆ 

ಇಲಿಗಳು ಗರ್ಭ ಧರಿಸಿದ 21 ದಿನಗಳಲ್ಲಿ ಮರಿಗಳಿಗೆ ಜನ್ಮ ನೀಡುತ್ತವೆ. ಗರ್ಭಿಣಿ ಮಹಿಳೆಯರಿಗೆ ಔಷಧಿ ತಯಾರು ಮಾಡಿದಾಗ ಇದನ್ನು ಪರೀಕ್ಷೆ ಮಾಡಲು ಇಲಿಗಳ ಸಹಾಯ ಪಡೆಯಲಾಗುತ್ತದೆ 

ಯಾವುದೇ ಔಷಧಿಗಳ ಆವಿಷ್ಕಾರದ ನಂತರ ಮನುಷ್ಯರ ಮೇಲೆ ನೇರವಾಗಿ ಪ್ರಯೋಗ ಮಾಡಲಾಗುವುದಿಲ್ಲ. ಇದು ಅಪಾಯಕಾರಿ ಎನ್ನುವ ಕಾರಣಕ್ಕೆ. 

ಯಾವುದೇ ಕಾಯಿಲೆಗೆ ಔಷಧಿ ಕಂಡುಹಿಡಿದ ನಂತರ ಇದನ್ನು ಹಲವರು ಹಂತಗಳಲ್ಲಿ ಪರೀಕ್ಷೆ ಮಾಡಲಾಗುತ್ತದೆ. ನಂತರವಷ್ಟೇ ಅದನ್ನು ಬಳಕೆಗೆ ನೀಡಲಾಗುತ್ತದೆ 

ಯುವರಾಜ್ ಸಿಂಗ್ ಹುಟ್ಟುಹಬ್ಬ; ಕ್ರಿಕೆಟ್ ದಾಖಲೆ-ನಿವ್ವಳ ಮೌಲ್ಯ