ಬಾವಲಿಗಳು ತಲೆಕೆಳಗಾಗಿ ನೇತಾಡಲು ಕಾರಣಗಳಿವು

By Raghavendra M Y
May 11, 2024

Hindustan Times
Kannada

ಭೂಮಿ ಮೇಲಿರುವ ಪ್ರಾಣಿ, ಪಕ್ಷಿಗಳು ತನ್ನದೇ ಆದ ವೈಶಿಷ್ಟ್ಯ ಹೊಂದಿರುತ್ತವೆ. ಕೆಲವು ನೆಲದ ಮೇಲೆ ತೆವಳುತ್ತವೆ. ಕೆಲವು ಹಾರುತ್ತವೆ

ಬಾವಲಿಗಳು ವಿಶಿಷ್ಟ ಜೀವಿಯಾಗಿದ್ದು, ಆಕಾಶದಲ್ಲಿ ಹಾರುವ ಸಸ್ತನಿಯಾಗಿದೆ

ಸಾಮಾನ್ಯವಾಗಿ ಬಾವಲಿಗಳು ಮರಗಳ ಕೊಂಬೆಗಳ ಮೇಲೆ ತಲೆಕೆಳಗಾಗಿ ನೇತಾಡುವುದನ್ನು ನೋಡಿರುತ್ತೀರಿ

ಬಾವಲಿಗಳು  ತಲೆ ಕೆಳಗಾಗಿ ಏಕೆ ನೇತಾಡುತ್ತವೆ ಎಂಬ ಪ್ರಶ್ನೆ ಅನೇಕರ ಮನಸ್ಸಿನಲ್ಲಿ ಮೂಡಿರುತ್ತದೆ. ಅದಕ್ಕೆ ಉತ್ತರ ಇಲ್ಲಿದೆ

ಬಾವಲಿಗಳು ತಲೆಕೆಳಗಾಗಿ ನೇತಾಡುವ ಹಿಂದಿರುವ ಕಾರಣವೆಂದರೆ ತೆಲೆಕೆಳಗಾದಾಗ ಅವುಗಳಿಗೆ ಹಾರಲು ಸುಲಭವಾಗುತ್ತೆ

Pexel

ಬಾವಲಿಗೆ ಪಕ್ಷಯಂತೆ ಹಾರಲು ಸಾಧ್ಯವಿಲ್ಲ. ನೆಲದಿಂದ ಹಾರುವಷ್ಟು ಸಾಮರ್ಥ್ಯ ಬಾವಲಿಯ ರೆಕ್ಕೆಗಳಿಗೆ ಇರೋದಿಲ್ಲ

ತಲೆಕೆಳಗಾಗಿ ನೇತಾಡುವ ಬಾವಲಿಗಳು ಯಾಕೆ ಬೀಳುವುದಿಲ್ಲ ಎಂದು ಪ್ರಶ್ನೆ ಹಲವರಲ್ಲಿ ಇರುತ್ತೆ

ಬಾವಲಿಯ ಕಾಲುಗಳಲ್ಲಿನ ನರಗಳ ರಚನೆ ಶಕ್ತಿಯುತವಾಗಿದ್ದು, ದೃಢವಾದ ಉಗುರುಗಳಿಂದಲೇ ಹಿಡಿದಿಟ್ಟುಕೊಳ್ಳುತ್ತವೆ

ಪಕ್ಷಿಗಳಂತೆ ಇವು ಮೊಟ್ಟೆಗಳನ್ನು ಇಡುವುದಿಲ್ಲ. ಮರಿಗಳಿಗೆ ಜನ್ಮ ನೀಡುತ್ತವೆ. ಹಾಲುಣಿಸುತ್ತವೆ. ಆದ್ದರಿಂದ ಬಾವಲಿಗಳು ಪಕ್ಷಿ ವರ್ಗಕ್ಕೆ ಸೇರುವುದಿಲ್ಲ

ಜಗತ್ತಿನಾದ್ಯಂತ ಸಾವಿರಕ್ಕೂ ಹೆಚ್ಚು ಜಾತಿಯ ಬಾವಲಿಗಳಿವೆ. ಅದರಲ್ಲಿ ಹಾರುವ ಬಾವಲಿಗಳು ದೊಡ್ಡದಾಗಿವೆ

ಬಿಸಿಲಿಗೆ ಸೊರಗಿದ ಚರ್ಮದ ಕಾಂತಿ ಒಂದೇ ದಿನದಲ್ಲಿ ಅರಳಬೇಕು ಅಂದ್ರೆ ಈ ಫೇಸ್‌ಪ್ಯಾಕ್‌ ಬಳಸಿ