ಕೇದಾರನಾಥ ದೇವಾಲಯ ಸಮೀಪ ನೋಡಬಹುದಾದ ಅತ್ಯುತ್ತಮ 7 ತಾಣಗಳಿವು
By Raghavendra M Y
May 19, 2025
Hindustan Times
Kannada
ಕೇದಾರನಾಥ ದೇವಾಲಯವು ಉತ್ತರಾಖಂಡದ ಹಿಮಾಲ ಪರ್ವತಗಳ ಮಡಿಲ್ಲಲ್ಲಿದೆ. ಇದು ಚಾರ್ ಧಾಮ್ ಯಾತ್ರೆಗಳಲ್ಲಿ ಒಂದಾಗಿದೆ
12 ಜ್ಯೋತಿರ್ಲಿಂಗಗಳಲ್ಲಿ ಕೇದಾರನಾಥ ಅತ್ಯಂತ ಪ್ರಮುಖವಾದದ್ದು. ಶಿವನ ಈ ಪ್ರಮುಖ ಯಾತ್ರಾ ಸ್ಥಳದ ಸುತ್ತಲೂ ಭೇಟಿ ನೀಡಲು ಅನೇಕ ಉತ್ತಮ ಸ್ಥಳಗಳಿವೆ
ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿದ ನಂತರ ನೀವು ಯಾವ ಸ್ಥಳಗಳಿಗೆ ಭೇಟಿ ನೀಡಬಹುದು ಎಂಬುದರ ಕುರಿತ ಮಾಹಿತಿಯನ್ನು ತಿಳಿಯಿರಿ
ಸೋನ್ ಪ್ರಯಾಗ್: ಈ ಸ್ಥಳ 1,829 ಮೀಟರ್ ಎತ್ತರದಲ್ಲಿದೆ. ಇದು ಕೇದಾರನಾಥದಿಂದ 20 ಕಿಲೋ ಮೀಟರ್ ದೂರದಲ್ಲಿದೆ
ಬೈಕುಂಠ ಧಾಮ: ಮಂದಾಕಿನಿ ನದಿ ಮತ್ತು ಬಾಸುಕಿ ದಿನ ಸಂಗಮದ ಸ್ಥಳ ಬೈಕುಂಠ ಧಾಮ. ಭಕ್ತರು ಬೈಕುಂಠ ಧಾಮದ ನೀರನ್ನು ಮುಟ್ಟುವ ಮೂಲಕ ಧಾಮಕ್ಕೆ ತಲುಪಬಹುದು
ವಾಸುಕಿ ತಾಲ್: ಕೇದಾರನಾಥದಿಂದ 8 ಕಿಲೋ ಮೀಟರ್ ಪಾದಯಾತ್ರೆಯ ಮೂಲಕ ನೀವು ಈ ಸರೋವರನ್ನು ತಲುಪಬಹುದು. ಇಲ್ಲಿನ ಪ್ರಕೃತಿ ಅದ್ಭುತ ನೋಟವನ್ನು ಸವಿಯಬಹುದು
ಹಿಂದೂ ಪುರಾಣದ ಪ್ರಕಾರ, ರಕ್ಷಾ ಬಂಧನದ ಶಳುಭ ಸಂದರ್ಭದಲ್ಲಿ ವಿಷ್ಣು ಈ ಸರೋವರದಲ್ಲಿ ಸ್ನಾನ ಮಾಡಿದ್ದನೆಂದು ನಂಬಲಾಗಿದೆ
ತ್ರಿಯುಗಿ ನಾರಾಯಣ ದೇವಾಲಯ: ಸೋನಪ್ರಯಾಗ ಬಳಿ ಇರುವ ತ್ರಿಯುಗಿ ನಾರಾಯಣ ದೇವಸ್ಥಾನದಲ್ಲಿ ಶಿವ ಮತ್ತು ಪಾವರ್ತಿ ವಿವಾಹವಾದರು ಎಂಬ ಪೌರಾಣಿಕ ನಂಬಿಕೆಗಳಿವೆ
ಪಾರ್ವತಿ ದೇವಿಯ ಸಹೋದರನಾಗಿ ವಿಷ್ಣು ಮದುವೆಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿದರೆ, ಬ್ರಹ್ಮ ಪೂಜಾರಿ ಪಾತ್ರವನ್ನು ನಿರ್ವಹಿಸಿದ್ದನು ಎಂದು ಹೇಳಲಾಗುತ್ತದೆ
ಇವುಗಳಲ್ಲದೆ ನೀವು ಕೇದರಾನಾಥದ ಬಳಿಯಿರುವ ಭೈರವನಾಥ ದೇವಾಲ, ಗೌರಿಕುಂಡ, ರುದ್ರ ಗುಹೆಗೂ ಭೇಟಿ ನೀಡಬಹುದು
ಎಚ್ಚರ!
ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ
PEXELS
ಮುಂದಿನ ಸ್ಟೋರಿ ಕ್ಲಿಕ್ ಮಾಡಿ