ಈ 8 ಕಾರ್ಯಗಳನ್ನು ಮಾಡದಿದ್ದರೆ ಮಕರ ಸಂಕ್ರಾಂತಿ ಅಪೂರ್ಣವಾಗುತ್ತೆ
By Raghavendra M Y
Jan 03, 2025
Hindustan Times
Kannada
2025ರ ಜನವರಿ 14 ರಂದು ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಈ ಕಾರ್ಯಗಳನ್ನು ಮಾಡದಿದ್ದರೆ ಹಬ್ಬ ಅಪೂರ್ಣ ಎನಿಸುತ್ತೆ
ಈ ದಿನ ಪವಿತ್ರ ನದಿಯಲ್ಲಿ ಸ್ನಾನ ಮಾಡುವುದು ಪುಣ್ಯ ಕಾರ್ಯಗಳಲ್ಲಿ ಒಂದು. ಗಂಗಾಜಲವನ್ನು ನೀರಿನಲ್ಲಿ ಬೆರೆಸಿ ಮನೆಯಲ್ಲೂ ಸ್ನಾನ ಮಾಡಬಹುದು
ಜನವರಿ 14 ರಂದು ಸೂರ್ಯನು ಉತ್ತರ ದಿಕ್ಕಿಗೆ ತನ್ನ ಪಥವನ್ನು ಬದಲಾಯಿಸುತ್ತಾನೆ. ಈ ದಿನ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಬೇಕು
ಎಳ್ಳು ಮತ್ತು ಬೆಲ್ಲವನ್ನು ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಬಡವರಿಗೆ ದಾನ ಮಾಡಿದರೆ ಪುಣ್ಯ ಸಿಗುತ್ತೆ
ಈ ದಿನ ಹಸುವಿಗೆ ವಿಶೇಷವಾಗಿ ಹಸಿ ಮೇವನ್ನು ನೀಡಬೇಕು. ಇದರಿಂದ ದುರ್ಗೆ ಮತ್ತು ಲಕ್ಷ್ಮಿ ದೇವಿ ಹರ್ಷಗೊಳ್ಳುತ್ತಾರೆ
ಈ ಹಬ್ಬವನ್ನು ಗಾಳಿಪಟ ಉತ್ಸವ ಅಂತಲೂ ಕರೆಯುತ್ತಾರೆ. ಈ ದಿನ ಗಾಳಿಪಟ ಹಾರಿಸುವ ಸಂಪ್ರದಾಯವೂ ಇದೆ
ಸಂಕ್ರಾಂತಿ ಹಬ್ಬದಲ್ಲಿ ಪೊಂಗಲ್ ಖಾದ್ಯವನ್ನು ತಯಾರಿಸಲಾಗುತ್ತದೆ. ಆಯಾ ಪ್ರದೇಶಕ್ಕೆ ಅನುಸಾರವಾಗಿ ಸಿಹಿ ತಯಾರಿಸಲಾಗುತ್ತೆ
ಮಕರ ಸಂಕ್ರಾಂತಿ ದಿನ ವಿಷ್ಣು ಪೂಜೆ ಮುಖ್ಯವಾಗಿದೆ. ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ಶುಭ ಫಲಗಳು ಸಿಗುತ್ತವೆ
ಈ ದಿನ ವಸಂತ ಕಾಲ ಆರಂಭವಾಗುತ್ತದೆ. ಹೀಗಾಗಿ ಹೊಸದಾಗಿ ಸಂಗ್ರಹಿಸಿದ ಧಾನ್ಯಗಳನ್ನು ಪೂಜಿಸಲಾಗುತ್ತದೆ
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ
ಮನೆಯಲ್ಲಿ ಮೊಲ ಸಾಕಬಹುದೇ? ಜ್ಯೋತಿಷ್ಯದ ಪ್ರಕಾರ ಶುಭವೋ, ಅಶುಭವೋ?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ