ಈ ವಸ್ತುಗಳನ್ನು ಎಂದಿಗೂ ಉಡುಗೊರೆಯಾಗಿ ನೀಡಬೇಡಿ
By Raghavendra M Y
Dec 29, 2024
Hindustan Times
Kannada
ವಿಶೇಷ ಸಂದರ್ಭದಲ್ಲಿ ಜನರು ತಮ್ಮ ಪ್ರೀತಿಪಾತ್ರರಿಗೆ ಉಡುಗೊರೆ ನೀಡುವ ಸಂಪ್ರದಾಯವಿದೆ. ಇದು ಶತಮಾನಗಳಿಂದ ನಡೆದು ಬಂದಿದೆ
ಶಾಸ್ತ್ರಗಳ ಪ್ರಕಾರ, ಉಡುಗೊರೆ ನೀಡುವ ಮುನ್ನ ಕೆಲವು ವಿಷಯಗಳು ಗೊತ್ತಿರಬೇಕು. ಇಲ್ಲದಿದ್ದರೆ ಕೆಟ್ಟ ಪರಿಣಾಮ ಎದುರಿಸಬೇಕಾಗಬಹುದು
ಜ್ಯೋತಿಷ್ಯದ ಪ್ರಕಾರ, ಯಾವ ಉಡುಗೊರೆಗಳನ್ನು ಯಾರಿಗೂ ನೀಡಬಾರದು ಎಂಬುದನ್ನು ತಿಳಿಯೋಣ
ಅನೇಕ ಮಂದಿ ಗಿಫ್ಟ್ ಅಂತ ಬಂದಾಗ ದೇವರು, ದೇವತೆಗಳ ವಿಗ್ರಹಗಳನ್ನು ಉಡುಗೊರೆಯಾಗಿ ನೀಡಲು ಇಷ್ಟಪಡುತ್ತಾರೆ
ಆದರೆ ಜ್ಯೋತಿಷ್ಯದ ಪ್ರಕಾರ, ದೇವರು ಮತ್ತು ದೇವತೆಗಳ ವಿಗ್ರಹಗಳನ್ನು ಉಡುಗೊರೆಯಾಗಿ ಯಾರಿಗೂ ನೀಡಬಾರದು
ಏಕೆಂದರೆ ದೇವರ ವಿಗ್ರಹ ಉಡುಗೊರೆಯಾಗಿ ಸ್ವೀಕರಿಸುವವರು ಅದನ್ನ ಸರಿಯಾಗಿ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಗಿಫ್ಟ್ ಕೊಟ್ಟವರು ತಪ್ಪಿತಸ್ಥರಾಗುತ್ತಾರೆ
ನೀರಿಗೆ ಸಂಬಂಧಿಸಿದ ವಸ್ತುಗಳನ್ನು ಗಿಫ್ಟ್ ಆಗಿ ಯಾರಿಗೂ ಕೊಡಬಾರದು. ಜ್ಯೋತಿಷ್ಯದ ಪ್ರಕಾರ, ನೀರಿನ ಅಂಶವು ಅದೃಷ್ಟಕ್ಕೆ ಸಂಬಂಧಿಸಿದೆ
ಕರವಸ್ತ್ರವನ್ನು ಉಡುಗೊರೆಯಾಗಿ ನೀಡಬಾರದು. ಕರವಸ್ತ್ರನ್ನು ಗಿಫ್ಟ್ ಆಗಿ ಸ್ವೀಕರಿಸುವ ವ್ಯಕ್ತಿಯ ಮನಸ್ಸಿನಲ್ಲಿ ನಿರಾಶೆಯ ಭಾವನೆ ಮೂಡುತ್ತೆ
ಶೂ, ಚಪ್ಪಲಿ, ಬ್ಯಾಗ್ ಅನ್ನು ಸಹ ಉಡುಗೊರೆಯಾಗಿ ನೀಡಬಾರದು. ಈ 3 ವಸ್ತುಗಳನ್ನು ಕೊಡುವುದರಿಂದ ಕೊಟ್ಟವರಿಗೆ ಆರ್ಥಿಕ ನಷ್ಟವಾಗುತ್ತೆ
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ
ಸಹ ಕಲಾವಿದನಿಗೆ ವೇದಿಕೆ ಮೇಲೆಯೇ ಪ್ರೇಮ ನಿವೇದನೆ ಮಾಡಿದ ಬ್ರಹ್ಮಗಂಟು ಸೀರಿಯಲ್ ಸಂಜನಾ ಪಾತ್ರಧಾರಿ ಆರತಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ