ಸಂಜೆಯ ನಂತರ ಅಪ್ಪಿತಪ್ಪಿಯೂ ಮನೆಯಲ್ಲಿ ಈ 7 ಕೆಲಸಗಳನ್ನು ಮಾಡಬೇಡಿ
By Raghavendra M Y
Nov 27, 2024
Hindustan Times
Kannada
ಹಿಂದೂ ಧಾರ್ಮಿಕ ಪದ್ಧತಿಗಳ ಪ್ರಕಾರ, ಮನೆಯಲ್ಲಿ ಸಂತೋಷ ಸಮೃದ್ಧಿ ಕಾಪಾಡಿಕೊಳ್ಳಲು ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ
ಎಷ್ಟೋ ಸಲ ಗೊತ್ತಿದ್ದೋ ಗೊತ್ತಿಲ್ಲದೆಯೇ ಕೆಲವು ತಪ್ಪುಗಳನ್ನು ಮಾಡುತ್ತೇವೆ. ಧಾರ್ಮಿಕ ಗ್ರಂಥಗಳ ಪ್ರಕಾರ, ಸಂಜೆಯ ವೇಳೆ ಕೆಲವು ಕೆಲಸಗಳನ್ನು ಮಾಡಬಾರದು
ಸಂಜೆಯ ಸಮಯದಲ್ಲಿ ಅಪ್ಪಿತಪ್ಪಿಯೂ ಯಾವೆಲ್ಲಾ ಕೆಲಸಗಳನ್ನು ಮಾಡಬಾರದು ಎಂಬುದನ್ನು ತಿಳಿಯೋಣ
ಸಂಜೆಯ ವೇಳೆ ಮುಖ್ಯ ಬಾಗಿಲನ್ನು ಮುಚ್ಚಬಾರದು. ಬಾಗಿಲು ತೆರೆದಿರಬೇಕು. ಇದು ಲಕ್ಷ್ಮಿ ದೇವಿಯ ಆಗಮನದ ಸಮಯವಾಗಿರುತ್ತೆ
ಸಂಜೆಯ ಸಮಯದಲ್ಲಿ ಸಾಲವನ್ನು ಪಡೆಯಬಾರದು, ಅದೇ ರೀತಿಯಾಗಿ ಸಾಲವನ್ನು ಕೊಡಬಾರದು. ಸಾಲ ಕೊಟ್ಟರೆ ವಾಪಸ್ ಪಡೆಯುವುದು ಕಷ್ಟ
ಶಾಸ್ತ್ರಗಳ ಪ್ರಕಾರ, ಸಂಜೆಯ ಸಮಯದಲ್ಲಿ ಆಹಾರವನ್ನು ದೇಹದಲ್ಲಿ ರೋಗಗಳು ಉಂಟಾಗುತ್ತವೆ
ಸಂಜೆಯ ಸಮಯದಲ್ಲಿ ಮನೆಯನ್ನು ಗುಡಿಸಬಾರದು. ಹೀಗೆ ಮಾಡುವುದರಿಂದ ಲಕ್ಷ್ಮಿಯು ಅಸಮಾಧಾನಗೊಳ್ಳುತ್ತಾಳೆ ಎಂಬ ನಂಬಿಕೆ ಇದೆ
ಸಂಜೆಯ ವೇಳೆ ಮಲಗಬಾರದು. ಈ ಸಮಯದಲ್ಲಿ ಮಲಗುವುದರಿಂದ ಆಯುಷ್ಯ ಕಡಿಮೆಯಾಗುತ್ತದೆ. ಆದರೆ ಗರ್ಭಿಣಿಯರು ಮಲಗಬಹುದು
ಸಂಜೆಯ ಸಮಯದಲ್ಲಿ ಮಹಿಳೆಯರು ತಲೆ ಸ್ನಾನ ಮಾಡಬಾರದು. ಇದು ಮನೆಯಲ್ಲಿ ಬಡತನಕ್ಕೆ ಕಾರಣವಾಗುತ್ತೆ
ಸಂಜೆ ವೇಳೆ ಉಗುರುಗಳನ್ನು ಕತ್ತರಿಸಬಾರದು. ಈ ಸಮಯದಲ್ಲಿ ಉಗುರುಗಳನ್ನು ಕತ್ತರಿಸುವುದು ಮಂಗಳಕರವಲ್ಲ ಎಂದು ಹೇಳಲಾಗುತ್ತದೆ
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ
ಪುಷ್ಪ 2 ಚಿತ್ರಕ್ಕೆ ಅಲ್ಲು ಅರ್ಜುನ್-ರಶ್ಮಿಕಾ ಪಡೆದ ಸಂಭಾವನೆ ಇಷ್ಟು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ