ಮಹಿಳೆಯರು ರುದ್ರಾಕ್ಷಿ ಮಾಲೆ ಧರಿಸಬಹುದೇ? ಬೇಡವೇ?

By Raghavendra M Y
May 05, 2025

Hindustan Times
Kannada

ಹಿಂದೂ ಧರ್ಮದಲ್ಲಿ ರುದ್ರಾಕ್ಷಿಗೆ ಹೆಚ್ಚಿನ ಮಹತ್ವವಿದೆ. ಇದು ಶಿವನ ಕಣ್ಣೀರಿನಿಂದ ಹುಟ್ಟಿಕೊಂಡಿತು ಎಂದು ನಂಬಲಾಗಿದೆ

ಇಂದಿನ ಕಾಲದಲ್ಲಿ ಮಹಿಳೆಯರು ರುದ್ರಾಕ್ಷಿ ಧರಿಸಲು ಆಸಕ್ತಿ ಹೊಂದಿರುತ್ತಾರೆ. ಆದರೆ ಪ್ರಶ್ನೆ ಇರುವುದು, ಮಹಿಳೆಯರು ಇದನ್ನು ಧರಿಸಬಹುದೇ ಎಂಬುದು

ಈ ಪ್ರಶ್ನೆಗೆ ಉತ್ತರಿಸಿರುವ ದೀರೇಂದ್ರ ಶಾಸ್ತಿ, ರುದ್ರಾಕ್ಷಿ ಶಿವನ ಕಣ್ಣೀರಿನಿಂದ ಹುಟ್ಟಿಕೊಂಡಿದೆ. ಆದ್ದರಿಂದ ಇದು ಅತ್ಯಂತ ಪವಿತ್ರ, ಶಕ್ತಿಯಿಂದ ತುಂಬಿದ ಹಾರ ಎಂದಿದ್ದಾರೆ.

ಈ ಪವಿತ್ರ ರುದ್ರಾಕ್ಷಿ ಮಾಲೆಯನ್ನು ಮಕ್ಕಳು, ವೃದ್ಧರು, ಮಹಿಳೆಯರು ಹಾಗೂ ಪುರುಷರು ಯಾರು ಬೇಕಾದರೂ ಧರಿಸಬಹುದು

ಆದರೆ ರುದ್ರಾಕ್ಷಿ ಮಾಲೆಯನ್ನು ಧರಿಸಿದರೆ ಶುದ್ಧತೆಯ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ

ಯಾವುದೇ ವ್ಯಕ್ತಿ ನಿಯಮಗಳು ಮತ್ತು ಪರಿಶುದ್ಧತೆಯನ್ನು ಕಾಪಾಡಿಕೊಂಡು ರುದ್ರಾಕ್ಷಿ ಮಾಲೆಯನ್ನು ಧರಿಸಬಹುದಾಗಿದೆ

ಮುಟ್ಟಿನ ಸಮಯದಲ್ಲಿ ಮಹಿಳೆಯರು ರುದ್ರಾಕ್ಷಿ ಮಣಿಗಳನ್ನು ಧರಿಸುವಾಗ ಜಾಗರೂಕರಾಗಿರಬೇಕು ಎಂದು  ದೀರೇಂದ್ರ ಶಾಸ್ತಿ ಹೇಳಿದ್ದಾರೆ

ಮಹಿಳೆಯರು ರುದ್ರಾಕ್ಷಿ ಮಣಿಗಳನ್ನು ಧರಿಸಿದರೆ ಅವರ ಆರೋಗ್ಯ ಉತ್ತಮವಾಗಿರುತ್ತದೆ ಎಂದು ನಂಬಲಾಗಿದೆ

ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಬೆಳೆಯುತ್ತದೆ. ಇದು ಮಾನಸಿಕ ಒತ್ತಡವನ್ನು ದೂರ ಮಾಡುತ್ತದೆ

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆ ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ

ಮಕ್ಕಳು ಆಗಾಗ ಅಳುತ್ತಾರೆಯೇ? ಈ ಕಾರಣಗಳಿರಬಹುದು