ಶನಿ ಚಾಲೀಸಾ ಈ ವಿಧಾನದಲ್ಲಿ ಪಠಿಸಿದರೆ ಶುಭಫಲ ಹೆಚ್ಚಾಗುತ್ತೆ
By Raghavendra M Y
Jan 05, 2025
Hindustan Times
Kannada
ಸೂರ್ಯನ ಪುತ್ರ ಶನಿ ದೇವರನ್ನು ಪೂಜಿಸುವುದರಿಂದ ಎಲ್ಲಾ ತೊಂದರೆಗಳಿಗೆ ಪರಿಹಾರ ಸಿಗುತ್ತ ಎಂಬ ನಂಬಿಕೆ ಇದೆ. ಹೀಗಾಗಿ ಜನರು ಹಲವು ಕ್ರಮಗಳನ್ನು ಅನುಸರಿಸುತ್ತಾರೆ
ಪರಿಹಾರಗಳ ಕ್ರಮಗಳಲ್ಲಿ ಶನಿ ಚಾಲೀಸಾ ಪಠಣವೂ ಸೇರಿದೆ. ಇದನ್ನು ಸರಿಯಾಗಿ ಪಠಿಸಿದರೆ ಶನಿ ದೇವರು ಪ್ರಸನ್ನನಾಗುತ್ತಾನೆ ಎಂದು ನಂಬಲಾಗಿದೆ
ಪುರಾಣಗಳ ಪ್ರಕಾರ ದಶರಥ ರಾಜನು ಕೂಡಾ ಶನಿ ಚಾಲೀಸಾವನ್ನು ಪಠಿಸಿದ್ದ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿವಾರದಂದು ಶನಿ ಚಾಲೀಸವನ್ನು ಪಠಿಸುವ ಸರಿಯಾದ ವಿಧಾನವನ್ನು ತಿಳಿಯೋಣ
ಶನಿವಾರದಂದು ಅಶ್ವತ್ಥಮರದ ಕೆಳಗೆ ಕುಳಿತು ಶನಿ ಚಾಲೀಸಾವನ್ನು ಪಠಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ
ಶನಿವಾರದಂದು ಮನೆಯ ಪೂಜಾ ಕೋಣೆಯಲ್ಲಿ ಸಾಸಿವೆ ಎಣ್ಣೆಯ ದೀಪ ಹಚ್ಚಿ ಶನಿ ದೇವರನ್ನು ಧ್ಯಾನಿಸಿದ ನಂತರ ಚಾಲೀಸಾವನ್ನು ಪಠಿಸಬೇಕು
ಶನಿ ಚಾಲೀಸಾವನ್ನು ಪಠಿಸುವಾಗ ನಿಮ್ಮ ಮನಸ್ಸು ಶಾಂತವಾಗಿರಬೇಕು. ಇದರೊಂದಿಗೆ ಶನಿ ದೇವರ ಅಶುಭ ಪರಿಣಾಮಗಳಿಂದ ಮುಕ್ತಿ ಪಡೆಯಬಹುದು
ಶನಿ ಚಾಲೀಸಾ ಪಠಿಸುತ್ತಿದ್ದರೆ, ಶನಿದೇವರ ವಿಗ್ರಹ ಅಥವಾ ಫೋಟೊವನ್ನು ನೇರವಾಗಿ ನೋಡಬಾರದು. ಬದಲಾಗಿ ತಲೆ ಬಗ್ಗಿಸಿ ಪಕ್ಕದಲ್ಲಿ ನಿಂತಿರಬೇಕು
ಶನಿ ಚಾಲೀಸಾ ಪಠಿಸಿದ ನಂತರ, ಅಶ್ವತ್ಥಮರ ಮತ್ತು ನವಗ್ರಹವನ್ನು ಪ್ರದಕ್ಷಿಣೆ ಹಾಕಬೇಕು. ಇದರಿಂದ ಶನಿ ದೋಷದಿಂದ ಮುಕ್ತಿ ಪಡೆಯಬಹುದು
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ
ಜಯ್ ಶಾ ಸ್ಥಾನ ತುಂಬಿದ ದೇವಜಿತ್ ಸೈಕಿಯಾ ಯಾರು?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ