ಚೋಳ ರಾಜವಂಶದ ದೇವಾಲಯಗಳ ವಾಸ್ತುಶಿಲ್ಪ ಅದ್ಭುತವಾಗಿವೆ. ಪುರಾತನ ಶಿವನ ದೇವಾಲಯಗಳು ಸೇರಿ ಚೋಳರ ಕಾಲದ ನೋಡಲೇಬೇಕಾದ ದೇವಾಲಯಗಳ ವಿವರ ಇಲ್ಲಿದೆ 

By Raghavendra M Y
Feb 10, 2025

Hindustan Times
Kannada

ಬೃಹದೀಶ್ವರ ದೇವಾಲಯ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ. ಶಿವನಿಗೆ ಸಮರ್ಪಿತವಾದದ ದೇವಾಲಯದ ಅದ್ಭುತವಾದ ಚೋಳ ವಾಸ್ತುಶಿಲ್ಪ ಹೊಂದಿದೆ

ಬೃಹದೀಶ್ವರ ದೇವಸ್ಥಾನ, ತಂಜಾವೂರು

ಚೋಳ ರಾಜವಂಶದ ಸ್ಥಾಪಕನ ಹೆಸರಿಡಲಾದ ಈ ದೇವಾಲಯವು ಚೋಳ ಶೈಲಿಯ ದೇವಾಲಯ ನಿರ್ಮಾಣಕ್ಕೆ ಉತ್ತಮ ಉದಾಹರಣೆಯಾಗಿದೆ

ವಿಜಯಾಲಯ ಚೋಳೀಶ್ವರಂ, ಕಾಂಚೀಪುರಂ

ಶಿವನಿಗೆ ಸಮರ್ಪಿತವಾದ ಈ ದೇವಾಲಯವು ಚೋಳರ ಕಾಲದ ಕಲಾತ್ಮಕ ಸಾಧನೆಗಳನ್ನು ಪ್ರದರ್ಶಿಸುತ್ತದೆ. ಆಕರ್ಷಿತ ಗೋಪುರ, ಕಲ್ಲಿನ ಕೆತ್ತನೆಗಳನ್ನು ಇಲ್ಲಿ ಕಾಣಬಹುದು

ಕಂಪಹೇಶ್ವರರ್ ದೇವಾಲಯ, ತಿರುಬುವನಂ

ರಾಜೇಂದ್ರ ಚೋಳ-I ಈ ದೇವಾಲಯವನ್ನು ನಿರ್ಮಿಸಿದ್ದಾರೆ. ಭವ್ಯವಾದ ವಾಸ್ತುಶಿಲ್ಪವನ್ನು ಹೊಂದಿದೆ.ಚೋಳ ಸಮ್ರಾಜ್ಯದ ಭವ್ಯತೆಯನ್ನು ಪ್ರದರ್ಶಿಸುತ್ತೆ

ಗಂಗೈಕೊಂಡ ಚೋಳಪುರಂ, ಅರಿಯಲೂರ್

ಈ ದೇವಸ್ಥಾನ ಕೂಡ ಯುನೆಸ್ಕೊ ವಿಶ್ವ ಪರಂಪರೆಯ ತಾಣವಾಗಿದೆ. ಕಲ್ಲಿನ ಕೆತ್ತನೆಗಳಿಗೆ ಹೆಸರುವಾಸಿಯಾಗಿರುವ ಈ ದೇವಾಲಯ ಶಿವನಿಗೆ ಅರ್ಪಿತವಾಗಿದೆ

ಐರಾವತೇಶ್ವರ ದೇವಸ್ಥಾನ, ಕುಂಭಕೋಣಂ

ಸುಂದರವಾದ ಕೆತ್ತನಿ ಹಾಗೂ ವಿಶಿಷ್ಟ ವಿನ್ಯಾಸದಿಂದ ಈ ದೇವಾಲಯ ಗಮನ ಸೆಳೆಯುತ್ತದೆ. ಚೋಳ ದೇವಾಲಯ ವಾಸ್ತುಶಿಲ್ಪಕ್ಕೆ ಉತ್ತಮ ಉದಾಹಣೆಯಾಗಿದೆ

ನಾಗೇಶ್ವರಸ್ವಾಮಿ ದೇವಸ್ಥಾನ, ಕುಂಭಕೋಣಂ

ಚಂದ್ರ ದೇವರಿಗೆ ಸಮರ್ಪಿತವಾಗಿರುವ ಈ ದೇವಾಲಯವು ನವಗ್ರಹ ದೇವಾಲಯಗಳ ಒಂದು ಭಾಗ ಎನ್ನಲಾಗುತ್ತೆ. ಇದು ಚೋಳರ ಇತಿಹಾಸವನ್ನು ಹೇಳುತ್ತೆ

ಕೈಲಾಸನಾಥರ ದೇವಸ್ಥಾನ, ತಿಂಗಳೂರು

ಚೋಳ ಸಾಮಂತರಿಂದ ನಿರ್ಮಿಸಲ್ಪಟ್ಟ ಈ ಸಂಕೀರ್ಣದಲ್ಲಿ 3 ದೇವಾಲಯಗಳಿವೆ. ಈ ಪೈಕಿ 2 ದೇವಾಲಯಗಳು ಉಳಿದಿವೆ. ಚೋಳ ರಾಜವಂಶದ ಆರಂಭಿಕ ವಾಸ್ತುಶಿಲ್ಪ ಇದಾಗಿದೆ

ಮೂವರ್ ಕೋಯಿಲ್, ಕೊಡುಂಬಲೂರ್

ಈ ದೇವಾಲಯ ಹೆಚ್ಚು ಪ್ರಸಿದ್ಧಿಯಾಗದಿದ್ದರೂ ಸೊಗಸಾದ ಶಿಲ್ಪಗಳು ಹಾಗೂ ಚೋಳ ಯುಗದ ಶಾಸನಗಳನ್ನು ಇಲ್ಲಿ ಕಾಣಬಹುದು

ಕೊರಂಗನಾಥ ದೇವಸ್ಥಾನ, ಶ್ರೀನಿವಾಸನಲ್ಲೂರು

ಈ ಬೇಸಿಗೆಯಲ್ಲಿ ಹೀಟ್ ಸ್ಟ್ರೋಕ್ ತಡೆಗಟ್ಟಲು 10 ಸಲಹೆಗಳು

Image Credits : Adobe Stock