ವೈಶಾಖ ಪೂರ್ಣಿಮೆ ದಿನ ಲಕ್ಷ್ಮಿ ದೇವಿಯ ಆಶೀರ್ವಾದಕ್ಕಾಗಿ ಹೀಗೆ ಮಾಡಿ
By Raghavendra M Y May 12, 2025
Hindustan Times Kannada
ಹಿಂದೂ ಧರ್ಮದಲ್ಲಿ ವೈಶಾಖ ಪೂರ್ಣಿಮೆಗೆ ವಿಶೇಷ ಮಹತ್ವವಿದೆ. ಪಂಚಾಂಗದ ಪ್ರಕಾರ, ವೈಶಾಖ ಮಾಸದ ಹುಣ್ಣಿಮೆ ದಿನ ಅಂದರೆ ಇಂದು (2025ರ ಮೇ 12) ಆಚರಿಸಲಾಗುತ್ತಿದೆ
ವೈಶಾಖ ಪೂರ್ಣಿಮೆಯ ದಿನ ಸ್ನಾನ, ದಾನ ಮಾಡುವುದರಿಂದ ಶುಭ ಫಲಿತಾಂಶಗಳು ಸಿಗುತ್ತವೆ. ಈ ದಿನ ಚಂದ್ರನೊಂದಿಗೆ ಲಕ್ಷ್ಮಿ ದೇವಿಯನ್ನ ಪೂಜಿಸುವುದು ಶುಭವೆಂದು ಪರಿಗಣಿಸಲಾಗಿದೆ
ಧಾರ್ಮಿಕ ಗ್ರಂಥಗಳ ಪ್ರಕಾರ, ವೈಶಾಖ ಪೂರ್ಣಿಮೆ ದಿನ ದಾನವು ವಿಶೇಷ ಮಹತ್ವವನ್ನು ಹೊಂದಿದೆ. ಈ ದಿನ ದಾನ ಮಾಡುವುದರಿಂದ 32 ಪಟ್ಟು ಲಾಭವಾಗುತ್ತೆ
ವೈಶಾಖ ಪೂರ್ಣಿಮೆ ದಿನ ಕೆಲವು ವಿಶೇಷ ಪರಿಣಾಮಗಳನ್ನು ಮಾಡಬೇಕಾಗುತ್ತದೆ. ಇದರಿಂದ ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಟಾಗುತ್ತದೆ
ಪುರಾಣಗಳ ಪ್ರಕಾರ, ವೈಶಾಖ ಪೂರ್ಣಿಮೆ ದಿನ ಗಂಗಾ ಸ್ನಾನ ಮಾಡುವುದರಿಂದ ಶ್ರೀಹರಿಯ ವಿಶೇಷ ಆಶೀರ್ವಾದ ಪಡೆಯಬಹುದು. ಈ ದಿನ ವಿಷ್ಣು ಗಂಗಾ ನೀರಿನಲ್ಲಿ ನೆಲೆಸಿರುತ್ತಾನೆ ಎಂದು ನಂಬಲಾಗಿದೆ
ವೈಶಾಖ ಪೂರ್ಣಿಮೆ ದಿನ ವಿಷ್ಣುವಿನ ಜೊತೆಗೆ ಲಕ್ಷ್ಮಿ ದೇವಿಯನ್ನು ಪೂಜಿಸುವ ಸಂಪ್ರದಾಯವಿದೆ. ಈ ದಿನ ಲಕ್ಷ್ಮಿಗೆ ಹಳದಿ, ಕೆಂಪು ಬಣ್ಣದ ವಸ್ತುಗಳನ್ನು ಅರ್ಪಿಸುವುದರಿಂದ ದೇವಿ ಸಂತೋಷ ಪಡುತ್ತಾಳೆ
ಧಾರ್ಮಿಕ ಪಂಡಿತರ ಪ್ರಕಾರ, ವೈಶಾಖ ಪೂರ್ಣಿಮೆ ದಿನ ಸರಿಯಾದ ವಿಧಿವಿಧಾನಗಳೊಂದಿಗೆ ಲಕ್ಷ್ಮಿ ದೇವಿಯನ್ನು ಪೂಜಿಸಿದ ನಂತರ ಶ್ರೀ ಸೂಕ್ತವನ್ನು ಪಠಿಸಬೇಕು. ಹೀಗೆ ಮಾಡುವುದರಿಂದ ಸಮೃದ್ಧಿಯನ್ನು ದಯಪಾಲಿಸುತ್ತಾಳೆ
ವೈಶಾಖ ಪೂರ್ಣಿಮೆಯ ದಿನ ನದಿಯ ದಡದಲ್ಲಿ ದೀಪಗಳನ್ನು ಬೆಳಗಿಸುವುದಕ್ಕೂ ಮಹತ್ವವಿದೆ. ಹೀಗೆ ಮಾಡುವುದರಿಂದ ದೇವಾನುದೇವತೆಗಳು ಸಂತುಷ್ಟರಾಗುತ್ತಾರೆ. ಪುಣ್ಯಪ್ರಾಪ್ತಿಯಾಗುತ್ತೆ ಎಂದು ನಂಬಲಾಗಿದೆ
ಈ ವಿಶೇಷ ದಿನ 11 ಕವಡೆಗಳಿೆ ಅರಿಶಿನ ಹಚ್ಚಿ ಲಕ್ಷ್ಮಿ ದೇವಿಗೆ ಅರ್ಪಿಸುವುದರಿಂದ ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಪೂಜೆಯ ನಂತರ ಈ ಕವಡೆಗಳನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ತಿಜೋರಿಯಲ್ಲಿ ಇಡಿ
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆ ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ