ಮಹಾ ಕುಂಭ ಸ್ನಾನ ಬಳಿಕ ಈ 5 ಕೆಲಸ ಮಾಡಿದರೆ ಶುಭ ಫಲ ಹೆಚ್ಚಾಗುತ್ತೆ
By Raghavendra M Y
Jan 04, 2025
Hindustan Times
Kannada
12 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭಮೇಳ ಉತ್ತರ ಪ್ರದೇಶದ ಪ್ರಯೋಗರಾಜ್ ನಲ್ಲಿ 2025ರ ಜನವರಿ 13 ರಿಂದ ಆರಂಭವಾಗುತ್ತೆ
ಮಹಾ ಕುಂಭಮೇಳದಲ್ಲಿ ಶಾಹಿ ಸ್ನಾನಕ್ಕೆ ತುಂಬಾ ಮಹತ್ವವಿದೆ. ಈ ರಾಜ ಸ್ನಾನ ಮಾಡುವುದರಿಂದ ಎಲ್ಲಾ ಪಾಪಗಳಿಂದ ಮುಕ್ತಿ ದೊರೆಯುತ್ತೆ ಎಂದು ನಂಬಲಾಗಿದೆ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ರಾಜ ಸ್ನಾನವು ದೇಹದ ಶುದ್ಧೀಕರಣಕ್ಕೆ ಮಾತ್ರವಲ್ಲ, ಆತ್ಮದ ಶುದ್ಧೀಕರಣ ಜೊತೆಗೆ ಶಾಂತಿಯನ್ನ ನೀಡುತ್ತೆ ಎಂದು ಪರಿಗಣಿಸಲಾಗಿದೆ
ಪ್ರಯೋಗರಾಜ್ ನಲ್ಲಿ ಆಯೋಜಿಸಿರುವ ಮಹಾ ಕುಂಭಮೇಳದಲ್ಲಿ ನೀವು ಸಹ ಭಾಗವಹಿಸಿ ರಾಜ ಸ್ಥಾನ ಮಾಡಲು ಹೋದರೆ ಕೆಲವು ವಿಶೇಷ ಕೆಲಸಗಳನ್ನು ಮಾಡಬೇಕು
ಜ್ಯೋತಿಷ್ಯದ ಪ್ರಕಾರ, ಕುಂಭಮೇಳದಲ್ಲಿ ಸ್ನಾನದ ನಂತರ ಸೂರ್ಯನಿಗೆ ಅರ್ಘ್ಯ ಅರ್ಪಿಸಬೇಕು. ಇದರಿಂದ ವೃತ್ತಿ ಬೆಳವಣಿಗೆ, ಸಂಪತ್ತು, ಅಧಿಕಾರ ಹೆಚ್ಚಾಗುತ್ತೆ
ಮಹಾ ಕುಂಭಮೇಳದಲ್ಲಿ ರಾಜ ಸ್ನಾನದ ನಂತರ ಬಡವರಿಗೆ ದಾನ ಮಾಡುವುದರಿಂದ ಗ್ರಹಗಳ ಅಶುಭ ಪರಿಣಾಮಗಳು ಕಡಿಮೆಯಾಗುತ್ತವೆ. ಜೀವನದಲ್ಲಿ ಧನಾತ್ಮಕ ಶಕ್ತಿ ಹೆಚ್ಚುತ್ತೆ
ಕುಂಭಮೇಳದಲ್ಲಿ ರಾಜ ಸ್ನಾನದ ನಂತರ ವಿಷ್ಣುವನ್ನು ಪೂಜಿಸಿ, ತುಳಸಿಗೆ ನೀರನ್ನು ಅರ್ಪಿಸಿ. ಹೀಗೆ ಮಾಡಿದರೆ ಮನೆಯಲ್ಲಿ ಐಶ್ವರ್ಯ ಇರುತ್ತದೆ ಎಂಬ ನಂಬಿಕೆ ಇದೆ
ಮಹಾ ಕುಂಭ ಸ್ನಾನದ ಬಳಿಕ ಹಸುವಿಗೆ ಮೇವು ನೀಡುವುದು ಬಹಳ ಪುಣ್ಯದ ಕೆಲಸವೆಂದು ಪರಿಗಣಿಸಲಾಗಿದೆ. ಇದರಿಂದ ನಿಮ್ಮ ಜೀವನ ಯಾವಾಗಲೂ ಸಂತೋಷವಾಗಿರುತ್ತೆ
ಮಹಾ ಕುಂಭದ ರಾಜ ಸ್ನಾನ ಬಳಿಕ ನದಿ ದಡದಲ್ಲಿ ಎಳ್ಳೆಣ್ಣೆ ಅಥವಾ ಹಸುವಿನ ತುಪ್ಪದ ದೀಪ ಹಚ್ಚಬೇಕು. ದೀಪ ದಾನದಿಂದ ಶುಭ ಫಲಗಳಿವೆ
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ
ಈ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಕಂಗನಾ ಅಭಿನಯದ ಸಿನಿಮಾ ಎಮರ್ಜೆನ್ಸಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ