ಯಾವ ರಾಶಿಯವರು ಯಾವ ಹರಳು ಧರಿಸಿದರೆ ಹೆಚ್ಚು ಶುಭಫಲಗಳಿವೆ

By Raghavendra M Y
Jan 04, 2025

Hindustan Times
Kannada

ಹಿಂದೂ ಧರ್ಮದಲ್ಲಿ ರತ್ನ ಶಾಸ್ತ್ರಕ್ಕೆ ವಿಶೇಷ ಮಹತ್ವವಿದೆ. ಗ್ರಹಗಳ ದುಷ್ಪರಿಣಾಮ ಕಡಿಮೆ ಮಾಡಲು ಕೆಲವರು ರತ್ನಗಳನ್ನು ಧರಿಸುತ್ತಾರೆ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ಅಶುಭ ಫಲಿತಾಂಶಗಳು ವ್ಯಕ್ತಿಯ ಜೀವನದ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ

ಹರಳುಗಳನ್ನು ಧರಿಸಿದರೆ ಗ್ರಹಗಳಿಂದ ಉಂಟಾಗುವ ತೊಂದರೆಗಳು ಕಡಿಮೆಯಾಗುತ್ತವೆ. ಯಾವ ರಾಶಿಯವರು ಯಾವ ಹರಳು ಧರಿಸಬೇಕೆಂಬುದನ್ನು ತಿಳಿಯೋಣ

ಮೇಷ ಮತ್ತು ವೃಶ್ಚಿಕ ರಾಶಿಯ ಜನರು ಹವಳದ ರತ್ನ ಧರಿಸುವುದರಿಂದ ಶುಭ ಫಲಿತಾಂಶಗಳು ಸಿಗುತ್ತವೆ. ಆತ್ಮವಿಶ್ವಾಸ ಹೆಚ್ಚಿಸುತ್ತದೆ

ವೃಷಭ ಮತ್ತು ತುಲಾ ರಾಶಿಯವರು ವಜ್ರ, ಓಪಲ್ ಹವಳವನ್ನು ಧರಿಸಬೇಕು. ಇದರಿಂದ ಈ ಎರಡೂ ರಾಶಿಯವರಿಗೆ ಹೆಚ್ಚು ಶುಭ ಫಲಗಳಿವೆ

ಮಿಥುನ ಮತ್ತು ಕನ್ಯಾ ರಾಶಿಯವರು ಪಚ್ಚೆ ಹರಳನ್ನು ಧರಿಸುವುದರಿಂದ ಜೀವನದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ

ಮುತ್ತಿನ ಹರಳು ಮನಸ್ಸಿಗೆ ಶಾಂತಿ ಸಿಗುತ್ತದೆ. ಚಂದ್ರನ ಸ್ಥಾನ ಬಲಗೊಳ್ಳುತ್ತದೆ. ಕಟಕ ರಾಶಿಯವರು ಮುತ್ತು ಹರಳು ಧರಿಸಬೇಕು

ಸಿಂಹ ರಾಶಿಯವರು ಮಾಣಿಕ್ಯ ಹರಳು ಧರಿಸುವುದರಿಂದ ಶುಭ ಫಲಿತಾಂಶಗಳನ್ನು ಪಡೆಯುತ್ತಾರೆ

ಹಳದಿ ನೀಲಮಣಿ ಅತ್ಯಂತ ಪರಿಣಾಮಕಾರಿ ರತ್ನವೆಂದು ಪರಿಗಣಿಸಲಾಗಿದೆ. ಧನು ರಾಶಿ ಮತ್ತು ಮೀನ ರಾಶಿಯವರು ನೀಲಮಣಿಯನ್ನು ಧರಿಸಬೇಕು

 ನೀಲಿ ಬಣ್ಣದ ಹರಳು ಶನಿ ಗ್ರಹದ ರತ್ನವೆಂದು ಪರಿಗಣಿಸಲಾಗಿದೆ. ಮಕರ ಮತ್ತು ಕುಂಭ ರಾಶಿಯವರು ನೀಲಮಣಿಯನ್ನು ಧರಿಸಬೇಕು

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ

ಭಾರತದ 5ನೇ ಶ್ರೀಮಂತ ಕ್ರಿಕೆಟಿಗ ಸೆಹ್ವಾಗ್; ಎಷ್ಟು ಕೋಟಿ ಒಡೆಯ ವೀರು?