ಅಮರನಾಥ ಯಾತ್ರೆಗೆ ನೋಂದಣಿ ಮಾಡಿಕೊಳ್ಳುವುದು ಹೇಗೆ, ಇಷ್ಟಿದೆ ಶುಲ್ಕ

By Raghavendra M Y
Apr 16, 2025

Hindustan Times
Kannada

ಬರ್ಫಾನಿ ಬಾಬಾ ಅಂದರೆ ಶಿವನು ಅಮರನಾಥ ಗುಹೆಯಲ್ಲಿ ಕುಳಿತಿದ್ದಾನೆ. ಇಲ್ಲಿ ಒಂದು ಶಿವಲಿಂಗ ಮಂಜುಗಡ್ಡೆಯಿಂದ ರೂಪುಗೊಂಡಿದ್ದು ಅದು ಕರಗುವುದಿಲ್ಲ

ಬರ್ಫಾನಿ ಬಾಬಾ ದರ್ಶನ ಪಡೆಯಲು ಭಕ್ತರು ಕಾಲ್ನಡಿಗೆಯಲ್ಲಿ ಬಹಳ ದೂರ ಪ್ರಯಾಣಿಸುತ್ತಾರೆ. ನಂತರ ದೇವಾಲಯ ತಲುಪಿ ಪ್ರಾರ್ಥನೆ ಸಲ್ಲಿಸುತ್ತಾರೆ

ಅಮರನಾಥ ಯಾತ್ರೆ ಜುಲೈ 3 ರಿಂದ ಪ್ರಾರಂಭವಾಗಿ ಆಗಸ್ಟ್ 9 ರವರೆಗೆ ನಡೆಯಲಿದೆ. ಈ ಪವಿತ್ರ ಪ್ರಯಾಣವು 39 ದಿನಗಳವರೆಗೆ ನಡೆಯುತ್ತದೆ

ನೀವು ಕೂಡ  ಈ ಗುಹೆಗೆ ಭೇಟಿ ನೀಡಲು ಬಯಸಿದರೆ ನೋಂದಣಿ ಮಾಡಿಕೊಳ್ಳಿ. ಈಗಾಗಲೇ ನೋಂದಣಿ ಪ್ರಾರಂಭವಾಗಿದೆ. ಇದರ ಮಾಹಿತಿ ಇಲ್ಲಿದೆ

ಆನ್ ಲೈನ್ ನಲ್ಲಿ ನೋಂದಾಯಿಸಿಕೊಳ್ಳಲು https://www.shriamarnathjishrine.com ಗೆ ಭೇಟಿ ನೀಡಬೇಕು

ವೆಬ್ ಸೈಟ್ ಗೆ ಲಾಗಿನ್ ಆಗಿದ ನಂತರ ಇ-ಕೆವೈಸಿ ಮಾಡಿ. ಇದಾದ ನಂತರ ಆರೋಗ್ಯ ಪ್ರಮಾಣಪತ್ರವನ್ನು ಅಪ್ ಲೋಡ್ ಮಾಡಿ

ಬಳಿಕ ನಿಮ್ಮ ಸ್ಲಾಟ್ ಬುಕ್ ಮಾಡಿ ಮತ್ತು ಆರ್ ಎಫ್ಐಡಿ ಕಾರ್ಡ್ ಡೌನ್ ಲೋಡ್ ಮಾಡಿ. ನೋಂದಣಿ ಮಾಡಿಕೊಳ್ಳಲು ಮೇ 31 ಕೊನೆಯ ದಿನವಾಗಿದೆ

ನೀವು ಆಫ್ ಲೈನ್ ನಲ್ಲಿ ನೋಂದಾಯಿಸಿಕೊಳ್ಳಲು ಪಿಎನ್ ಬಿ, ಎಸ್ ಬಿಐ, ಜೆ ಅಂಡ್ ಕೆ ಬ್ಯಾಂಕ್ ನಿಂದ ಫಾರ್ಮ್ ಅನ್ನು ಪಡೆದು ಭರ್ತಿ ಮಾಡಬಹುದು

ಅಮರನಾಥ ಯಾತ್ರೆಗೆ ಬುಕಿಂಗ್ ಗೆ 150 ರೂ ನೋಂದಣಿ ಶುಲ್ಕ ಇದೆ. ಗುಂಪಿನಲ್ಲಿ ಹೋದರೆ ಪ್ರತಿ ವ್ಯಕ್ತಿಗೆ 250 ರೂ, ಗುಂಪು ಬುಕಿಂಗ್ ಗೆ ಮೇ 20 ಕೊನೆಯ ದಿನವಾಗಿದೆ

ಅಮರನಾಥ ಯಾತ್ರೆ ನೋಂದಣಿ ಮಾಡಿಕೊಳ್ಳಲು ಆರೋಗ್ಯ ಪ್ರಮಾಣಪತ್ರ ಇರಬೇಕು. ಜೊತೆಗೆ ಆಧಾರ್, ಪ್ಯಾನ್, ಪಾಸ್ ಪೋರ್ಟ್ ಗಾತ್ರದ ಫೋಟೊ ನಿಮ್ಮೊಂದಿಗೆ ಇಟ್ಟುಕೊಳ್ಳಿ

ಎಲ್ಲವನ್ನು ಎದುರಿಸಿ ಗೆಲ್ಲುತ್ತೀರಿ; ಮೇ 1ರ ಗುರುವಾರದ ದಿನ ಭವಿಷ್ಯ