ಮಹಾ ಶಿವರಾತ್ರಿ ದಿನ ಪೂಜೆ ಮಾಡುವುದು ಹೇಗೆ, ಅಗತ್ಯ ವಸ್ತುಗಳಿವು

By Raghavendra M Y
Feb 13, 2025

Hindustan Times
Kannada

ಮಹಾ ಶಿವರಾತ್ರಿಯನ್ನು ಈ ವರ್ಷ ಫೆಬ್ರವರಿ 26 ರಂದು ಆಚರಿಸಲಾಗುತ್ತದೆ. ಈ ದಿನ ಶಿವನನ್ನು ಪೂಜಿಸಲಾಗುತ್ತದೆ

ದಿನಾಂಕ

ಈ ದಿನ ಶಿವನು ಮೊದಲ ಬಾರಿಗೆ ದೈವಿಕ ಶಿವಲಿಂಗದಲ್ಲಿ ಕಾಣಿಸಿಕೊಂಡನೆಂದು ನಂಬಲಾಗಿದೆ

 ದೈವಿಕ ಶಿವಲಿಂಗ

ಮಹಾ ಶಿವರಾತ್ರಿಯಂದು ಪೂಜೆ ಮಾಡುವ ವಿಧಾನ ಮತ್ತು ಯಾವೆಲ್ಲಾ ಸಾಮಗ್ರಿಗಳು ಬೇಕು ಎಂಬುದನ್ನು ತಿಳಿಯೋಣ

ಪೂಜಾ ವಿಧಾನ

ಶಿವರಾತ್ರಿಯ ಪೂಜೆಯ ದಿನ ಒಂದು ಶಿವಲಿಂಗ ಅಥವಾ ಫೋಟೊ, ಪವಿತ್ರ ದಾರ, ಬಟ್ಟೆ, ರಕ್ಷಾ ಸೂತ್ರ, ಬಿಲ್ವಪತ್ರೆ, ಶಮಿ ಎಲೆ, ಹೂವುಗಳು ಹಾಗೂ ಹೂವಿನ ಹಾರ ಬೇಕಾಗುತ್ತೆ

ಶಿವಲಿಂಗ

ಇವುಗಳ ಜೊತೆಗೆ ಗಂಗಾಜಲ, ಹಸುವಿನ ಹಾಲು ಮೊಸರು, ಸಕ್ಕರೆ, ಬಿಳಿ ಶ್ರೀಗಂಧ, ಅಕ್ಕಿ ಧಾನ್ಯಗಳು, ಸುಗಂಧ ದ್ರವ್ಯ, ಲವಂಗ, ಏಲಕ್ಕಿ, ಕೇಸರಿ, ಎಲೆ ಅಡಿಕೆ

ಈ ವಸ್ತುಗಳು ಇರಲಿ

ಜೇನು ತುಪ್ಪ, ಈ ಋತುವಿನಲ್ಲಿ ಸಿಗುವ ಹಣ್ಣುಗಳು, ವಿಭೂತಿ, ಹವನದ ವಸ್ತು, ಪಾರ್ವತಿಗೆ ಸೀರಿ ಸೇರಿ ಸಿಂಗಾರ ಮಾಡುವ ವಸ್ತುಗಳನ್ನು ತೆಗೆದುಕೊಳ್ಳಿ

ಅಲಂಕಾರಿಕ ವಸ್ತುಗಳು

ಇವುಗಳ ಹೊರತಾಗಿ ದೀಪ, ಹಸುವಿನ ತುಪ್ಪ, ಕರ್ಪೂರ, ಶಿವ ಚಾಲೀಸಾ, ಶಿವ ಆರತಿ ಮತ್ತು ಮಹಾ ಶಿವರಾತ್ರಿ ವ್ರತ ಕಥೆಯ ಪುಸ್ತಕ ಇತ್ಯಾದಿ

ಇತರೆ ವಸ್ತುಗಳು

ಶಿವಲಿಂಗಕ್ಕೆ ಬಿಲ್ವಪತ್ರೆ, ಶಮಿ ಎಲೆಗಳು, ಹೂವುಗಳು, ಜೇನುತುಪ್ಪ, ಸಕ್ಕರೆ, ಹಣ್ಣುಗಳು, ಧೂಪ, ದೀಪ, ಸುಗಂಧ ಇತ್ಯಾರ್ಥಿಗಳನ್ನು ಅರ್ಪಿಸಬೇಕು

ಬಿಲ್ವಪತ್ರೆ

ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ

ಗಮನಿಸಿ

ಏಪ್ರಿಲ್‌ನಲ್ಲಿ ಜೋಡಿಹಕ್ಕಿಗಳಂತೆ ವಿಹರಿಸಲು ರೊಮ್ಯಾಂಟಿಕ್ ತಾಣಗಳಿವು