ಮಹಾ ಕುಂಭಕ್ಕೆ ಹೋಗಲು ಸಾಧ್ಯವಾಗದಿದ್ದರೆ ನೀವಿರುವಲ್ಲಿ 3 ಕೆಲಸ ಮಾಡಿದರೆ ಪುಣ್ಯ ಸಿಗುತ್ತೆ
By Raghavendra M Y
Dec 27, 2024
Hindustan Times
Kannada
2025ರ ಜನವರಿ 13 ರಿಂದ ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ಮಹಾ ಕುಂಭಮೇಳ ಆರಂಭವಾಗಲಿದೆ. ಲಕ್ಷಾಂತರ ಮಂದಿ ಪವಿತ್ರ ಸ್ನಾನಕ್ಕಾಗಿ ಸೇರುತ್ತಾರೆ
ಮಹಾ ಕುಂಭದ ಸಮಯದಲ್ಲಿ ಸಂಗಮದಲ್ಲಿ ಸ್ನಾನ ಮಾಡಿ ಪುಣ್ಯ ಪಡೆಯುತ್ತಾರೆ. ಎಷ್ಟೋ ಮಂದಿಗೆ ಕುಂಭ ಮೇಳಕ್ಕೆ ಹೋಗಲು ಸಾಧ್ಯವಾಗುವುದಿಲ್ಲ
ಇಂಥ ಸಮಯದಲ್ಲಿ ನೀವು ಇರುವ ಸ್ಥಳದಲ್ಲೇ ಕೆಲವು ಕ್ರಮಗಳನ್ನು ಅನುಸರಿಸಿ ಪವಿತ್ರ ಸ್ನಾನದ ಪ್ರಯೋಜನ ಪಡೆಯಬಹುದು
ಜ್ಯೋತಿಷ್ಯದ ಪ್ರಕಾರ ನಿಮಗೆ ಮಹಾ ಕುಂಭಕ್ಕೆ ಹೋಗಲು ಸಾಧ್ಯವಾಗದಿದ್ದರೆ ನಿಮ್ಮ ಹತ್ತಿರದ ಯಾವುದಾದರೂ ಪವಿತ್ರ ನದಿಯಲ್ಲಿ ಸ್ನಾನ ಮಾಡಿ
ಪವಿತ್ರ ನದಿ ಇಲ್ಲದಿದ್ದರೆ ಮಹಾ ಕುಂಭಮೇಳ ಸ್ನಾನದ ದಿನದಂದು ಮನೆಯ ಸಮೀಪದಲ್ಲಿರುವ ಕೆರೆ ಅಥವಾ ಕೊಳದಲ್ಲಿ ಸ್ನಾನ ಮಾಡಬಹುದು
ನಿಮಗೆ ಕುಂಭ ಮೇಳಕ್ಕೆ ಹೋಗಲು ಸಾಧ್ಯವಾಗದಿದ್ದರೆ ಮನೆಯ ನೀರಿನಲ್ಲಿ ಗಂಗಾಜಲವನ್ನು ಬೆರೆಸಿ ಸ್ನಾನ ಮಾಡಿ
ಮನೆಯಲ್ಲಿ ಗಂಗಾಜಲ ಇಲ್ಲದಿದ್ದರೆ ಸ್ನಾನದ ನೀರಿಗೆ ಕಾವೇರಿ, ಯಮುನಾ ಅಥವಾ ಗೋದಾವರಿ ನದಿಯ ನೀರನ್ನು ಕೂಡ ಸೇರಿಸಿಕೊಳ್ಳಬಹುದು
ಈ ಎಲ್ಲಾ ಕ್ರಮಗಳನ್ನು ಅಳವಡಿಸಿಕೊಂಡು ಮನೆಯಲ್ಲಿ ಸ್ನಾನ ಮಾಡಿದಾಗ ಮಹಾ ಕುಂಭಮೇಳದಲ್ಲಿ ಸ್ನಾನ ಮಾಡಿದ ಫಲವನ್ನು ಪಡೆಯಬಹುದು
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ
ಬಾಲಿವುಡ್ ನಟಿ ರವೀನಾ ಟಂಡನ್ ಮಸ್ತ್ ಮಸ್ತ್ ಫೋಟೋಗಳು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ