ಸಂಜೆ ವೇಳೆ ಈ 5 ಕೆಲಸ ಮಾಡಿದರೆ ಲಕ್ಷ್ಮಿ ದೇವಿ ನಿಮ್ಮ ಮನೆಗೆ ಬರುತ್ತಾಳೆ
By Raghavendra M Y
Dec 30, 2024
Hindustan Times
Kannada
ಹಿಂದೂ ಧರ್ಮದ ಪ್ರಕಾರ, ಹಗಲಿನ 4 ಪ್ರಹಾರಗಳು, ರಾತ್ರಿಯ 4 ಪ್ರಹಾರಗಳು ಸೇರಿದಂತೆ ಒಟ್ಟು 8 ಪ್ರಹಾರಗಳಿವೆ
ಪ್ರಹಾರ ಬದಲಾದಾಗ ಆ ಸಮಯವನ್ನು ಸಂಧಿ ಕಾಲ ಎಂದು ಕರೆಯಲಾಗುತ್ತೆ. ಸಂಜೆಯ ಸಂಧಿ ಅವಧಿ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ
ಸಂಜೆಯ ಸಮಯದಲ್ಲಿ 5 ಕೆಲಸಗಳನ್ನು ಮಾಡಿದರೆ ಲಕ್ಷ್ಮಿ ದೇವಿ ಮನೆಗೆ ಬರುತ್ತಾಳೆ. ಇದರಿಂದ ಕುಟುಂಬದ ಸಂತೋಷ ಹೆಚ್ಚಾಗುತ್ತೆ
ಸಂಜೆ ವೇಳೆ ಮನೆಯ ಮುಖ್ಯ ದ್ವಾರದ ಹೊಸ್ತಿನಲ್ಲಿ ದೀಪ ಹಚ್ಚಬೇಕು. ಇದರಿಂದ ತಾಯಿ ಲಕ್ಷ್ಮಿ ದೇವಿ ಹರ್ಷಗೊಳ್ಳುತ್ತಾಳೆ
ಸಂಜೆ ವೇಳೆ ಮನೆಯ ಮುಖ್ಯ ದ್ವಾರದಲ್ಲಿ ಕತ್ತಲು ಆವರಿಸಿದ್ದರೆ ಲಕ್ಷ್ಮಿ ದೇವಿ ಮನೆಯೊಳಗೆ ಬರುವುದಿಲ್ಲ
ಸಂಜೆ 7.15 ರಿಂದ 7.30 ರ ಅವಧಿಯಲ್ಲಿ ಪೂಜೆ ಮಾಡಿ. ನಂತರ ಕರ್ಪೂರ ಆರತಿ ಮಾಡಬೇಕು. ಹೀಗೆ ಮಾಡಿದರೆ ಲಕ್ಷ್ಮಿ ಮನೆಯೊಳಗೆ ಪ್ರವೇಶಿಸುತ್ತಾಳೆ
ಪ್ರತಿನಿತ್ಯ ಸಂಜೆ ವೇಳೆ ತುಳಸಿ ಗಿಡಕ್ಕೆ ಪೂಜೆ ಮಾಡಿ ದೀಪ ಹಚ್ಚಬೇಕು. ಏಕೆಂದರೆ ತುಳಸಿಯನ್ನು ತಾಯಿ ಲಕ್ಷ್ಮಿಯ ರೂಪವೆಂದು ಪರಿಗಣಿಸಲಾಗಿದೆ
ಸಂಜೆ ಭಜನೆ ಮಾಡುವುದು ಅಥವಾ ಕೇಳುವುದು ಎರಡೂ ಕೂಡ ಮಂಗಳಕರ. ಇದರಿಂದ ಮನಸ್ಸು ಸಂತೋಷವಾಗುತ್ತೆ. ಅಧ್ಯಾತ್ಮಿಕ ವಾತಾವರಣ ಹೆಚ್ಚುತ್ತೆ
ಇದಲ್ಲದೆ, ನೀವು ಸಂಜೆ ಕನಿಷ್ಠ 5 ಮಂತ್ರಗಳನ್ನು ಪಠಿಸಬಹುದು. ಇದು ಲಕ್ಷ್ಮಿ ದೇವಿಯನ್ನ ಮೆಚ್ಚಿಸುತ್ತೆ. ಆಕೆ ಸಂತೋಷದಿಂದ ನಿಮ್ಮ ಮನೆ ಪ್ರವೇಶಿಸುತ್ತಾಳೆ
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ
ಮಹಾ ಕುಂಭಮೇಳ ಮುಗಿದ ನಂತರ ನಾಗಾ ಸಾಧುಗಳು ಎಲ್ಲಿಗೆ ಹೋಗುತ್ತಾರೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ