ಮನೆಯಲ್ಲಿ ಶಿವಲಿಂಗ ಇಟ್ಟಿದ್ದರೆ ತಪ್ಪದೇ ಈ ನಿಯಮಗಳನ್ನು ಪಾಲಿಸಿ
By Raghavendra M Y
May 09, 2025
Hindustan Times
Kannada
ಶಿವಲಿಂಗವನ್ನು ಶಿವನ ಒಂದು ರೂಪವೆಂದು ಪರಿಗಣಿಸಲಾಗುತ್ತದೆ. ಶಿವ ಪುರಾಣದ ಪ್ರಕಾರ, ಶಿವಲಿಂಗ ಪೂಜೆಗೆ ವಿಶೇಷ ಮಹತ್ವವಿದೆ
ಅನೇಕ ಮಂದಿ ತಮ್ಮ ಪೂಜಾ ಮಂದಿರ ಅಥವಾ ಪ್ರಾರ್ಥನಾ ಸ್ಥಳಗಳಲ್ಲಿ ಶಿವಲಿಂಗವನ್ನು ಇಟ್ಟು ಪೂಜಿಸುತ್ತಾರೆ
ಮನೆಯಲ್ಲಿ ಶಿವಲಿಂಗವನ್ನು ಇಡಲು ಕೆಲವು ನಿಯಮಗಳನ್ನು ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಆ ನಿಯಮಗಳ ಬಗ್ಗೆ ತಿಳಿಯೋಣ
ನಂಬಿಕೆಗಳ ಪ್ರಕಾರ, ಮನೆಯಲ್ಲಿ ಇರಿಸಲಾಗಿರುವ ಶಿವಲಿಂಗಕ್ಕೆ ಪ್ರಾಣ ಪ್ರತಿಷ್ಠೆಯನ್ನು ಮಾಡಬಾರದು
ಮನೆಯಲ್ಲಿ ಎಂದಿಗೂ ದೊಡ್ಡ ಶಿವಲಿಂಗವನ್ನು ಪ್ರತಿಷ್ಠಾಪಿಸಬಾರದು. ಮನೆಯ ಪೂಜಾ ಸ್ಥಳದಲ್ಲಿ ಯಾವಾಗಲೂ ಸಣ್ಣ ಶಿವಲಿಂಗವನ್ನು ಇಟ್ಟುಕೊಳ್ಳಿ
ಮನೆಯ ಪೂಜಾ ಕೋಣೆಯಲ್ಲಿ ಒಂದಕ್ಕಿಂತ ಹೆಚ್ಚಿನ ಶಿವಲಿಂಗಗಳನ್ನು ಇಡಬಾರದು. ಇದನ್ನು ಶುಭವೆಂದು ಪರಿಗಣಿಸಲಾಗುವುದಿಲ್ಲ
ಮನೆಯಲ್ಲಿ ಇರಿಸಲಾಗಿರುವ ಶಿವಲಿಂಗದ ಶುಚಿತ್ವದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಶಿವಲಿಂಗಕ್ಕೆ ಪ್ರತಿದಿನ ಅಭಿಷೇಕ ಮಾಡಬೇಕು
ಮನೆಯಲ್ಲಿ ಶಿವಲಿಂಗವನ್ನು ಇಟ್ಟುಕೊಂಡಿದ್ದರೆ ಅದರ ಜೊತೆಗೆ ಶಿವನ ಕುಟುಂಬದ ಫೋಟೊವನ್ನು ಇಡಿ
ಮನೆಯಲ್ಲಿನ ಶಿವಲಿಂಗವು ಲೋಹದಿಂದ ತಯಾರಿಸಿದ್ದರೆ ಅದರ ಸುತ್ತಲೂ ಹಾವು ಇರುವಂತೆ ತಯಾರಿಸಿರಬೇಕು
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆ ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ
ಈ ದೇಶಗಳಿಗೆ ಭೇಟಿ ನೀಡಲು ಭಾರತೀಯರಿಗೆ ವೀಸಾ ಅಗತ್ಯವಿಲ್ಲ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ