ಜೀವನದ ಯಶಸ್ಸಿಗಾಗಿ ಹನುಮನಿಂದ ಕಲಿಯಬೇಕಾದ 7 ಗುಣಗಳಿವು

By Raghavendra M Y
Nov 10, 2024

Hindustan Times
Kannada

ಹಿಂದೂ ಧರ್ಮದಲ್ಲಿ ಭಗವಾನ್ ಹನುಮನನ್ನು ಪ್ರಮುಖ ದೇವರೆಂದು ಪರಿಗಣಿಸಲಾಗಿದೆ. ಎಲ್ಲಾ ರೀತಿಯ ದುಃಖಗಳನ್ನು ತೊಡೆದುಹಾಕುವ ದೇವರೆಂಬ ನಂಬಿಕೆ ಇದೆ

ಜೀವನದಲ್ಲಿ ಯಶಸ್ವಿಯಾಗಲು ನೀವು ಅಳವಡಿಸಿಕೊಳ್ಳಬಹುದಾದ 7 ಪ್ರಮುಖ ಗುಣಗಳ ಬಗ್ಗೆ ತಿಳಿಯಿರಿ

ಶ್ರೀರಾಮನ ಪರಮ ಭಕ್ತರಲ್ಲಿ ಹನುಮ ಕೂಡ ಒಬ್ಬರಾಗಿದ್ದು, ಅಪಾರ ಶಕ್ತಿಯನ್ನು ಹೊಂದಿದ್ದರು. ಆದರೆ ಅತ್ಯಂತ ವಿನಮ್ರರಾಗಿದ್ದರು

ಹನುಮಾನ್ ಭಗವಾನ್ ಶ್ರೀರಾಮನ ಬಂಟನಾಗಿದ್ದ. ನಿಸ್ವಾರ್ಥ ಸೇವೆಗೆ ಹೆಸರುವಾಸಿಯಾಗಿದ್ದ. ಈ ಗುಣವು ಅರ್ಥಪೂರ್ಣ ಸಂಬಂಧವನ್ನು ಸೂಚಿಸುತ್ತದೆ

ಆಂಜನೇಯನು ವಾನರ ಸೈನ್ಯದ ಕಮಾಂಡರ್ ಆಗಿದ್ದ. ನಾಯಕತ್ವದ ಗುಣಗಳನ್ನು ಹೊಂದಿದ್ದ. ಎಲ್ಲರನ್ನು ಒಗ್ಗೂಡಿಸಿ ಕೆಲಸ ಮಾಡಿಸುತ್ತಿದ್ದ

ಹನುಮಾನ್ ಆದರ್ಶ ಬ್ರಹ್ಮಚಾರಿ. ಕಾಮದೇವನೂ ಈತನ ಬ್ರಹ್ಮಚರ್ಯಕ್ಕೆ ತಲೆಬಾಗಿದ್ದನು. ಸಮರ್ಪಣಾ ಭಾವದಿಂದ ಪ್ರತಿ ಕೆಲಸವನ್ನು ಪೂರ್ಣಗೊಳಿಸಬಹುದು

ಹನುಮಂತನಿಗೆ ದೂರದೃಷ್ಟಿ ಇತ್ತು. ಅದಕ್ಕಾಗಿಯೇ ಶ್ರೀರಾಮನನ್ನು ಸುಗ್ರೀವನ ಸ್ನೇಹಿತನನ್ನಾಗಿ ಮಾಡಿದ. ಪ್ರತಿಯೊಬ್ಬ ವ್ಯಕ್ತಿಯೂ ದೂರದೃಷ್ಟಿ ಹೊಂದಿರಬೇಕು

ಹನುಮಂತನನ್ನು ಧೈರ್ಯದ ಸಂಕೇತ ಎನ್ನುತ್ತಾರೆ. ಯಾವುದೇ ಪರಿಸ್ಥಿತಿಗೆ ಮಣಿಯದೆ ಎಲ್ಲವನ್ನು ಎದುರಿಸುತ್ತಿದ್ದ. ಬಲವಾದ ಇಚ್ಛಾಶಕ್ತಿಯಿಂದ ಮುನ್ನಡೆಯುತ್ತಿದ್ದರು

ಹನುಮನಲ್ಲಿ ಸಂವಹನ ಕೌಶಲ್ಯಗಳಿದ್ದವು. ವಾಟಿಕಾದಲ್ಲಿ ಸೀತೆಯನ್ನು ಭೇಟಿಯಾದಾಗ ತಮ್ಮ ಸಂವಹನ ಕೌಶಲ್ಯದಿಂದ ರಾಮನ ಸಂದೇಶವಾಹಕ ಎಂದು ಕರೆಸಿಕೊಂಡಿದ್ದರು

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ

ಪಿಂಕ್ ಬಾಲ್ ಟೆಸ್ಟ್​ನಲ್ಲಿ ಟ್ರಾವಿಸ್ ಹೆಡ್ ವೇಗದ ಶತಕ