ಈ ರಾಡಿಕ್ಸ್ ಸಂಖ್ಯೆಯವರ ಮೇಲೆ ಶಿವನಿಗೆ ತುಂಬಾ ಪ್ರೀತಿ

By Raghavendra M Y
Mar 14, 2025

Hindustan Times
Kannada

ಸಂಖ್ಯಾಶಾಸ್ತ್ರದ ಪ್ರಕಾರ, ಹುಟ್ಟಿದ ದಿನಾಂಕವನ್ನು ಆಧರಿಸಿ ಪ್ರತಿಯೊಂದು ರಾಡಿಕ್ಸ್ ಸಂಖ್ಯೆಯು ಯಾವುದಾದರೂ ದೇವರು ಅಥವಾ ದೇವತೆಯೊಂದಿಗೆ ಸಂಬಂಧ ಹೊಂದಿರುತ್ತೆ

ಶಿವನ ಅದೃಷ್ಟ ಸಂಖ್ಯೆಗಳೆಂದು ಪರಿಗಣಿಸಲಾಗಿರುವ ಕೆಲವು ವಿಶೇಷ ಸಂಖ್ಯೆಗಳ ಬಗ್ಗೆ ತಿಳಿಯೋಣ

ಯಾವುದೇ ತಿಂಗಳ 7, 16 ಹಾಗೂ 25 ನೇ ತಾರೀಖಿನಂದು ಜನಿಸಿದವರ ಮೂಲ ಸಂಖ್ಯೆ 7 ಆಗಿರುತ್ತದೆ. ಇದರ ಆಡಳಿತ ಗ್ರಹ ಗುರು ಕೇತು

ಪರಮೇಶ್ವರ ಮೇಲಿನ ಭಕ್ತಿಯ ಕಾರಣಕ್ಕೆ 7ನೇ ರಾಡಿಕ್ಸ್ ಸಂಖ್ಯೆಯ ಜನರು ಶಿವನಿಗೆ ತುಂಬಾ ಪ್ರಿಯರಾಗಿರುತ್ತಾರೆ

ಈ ಸಂಖ್ಯೆಯಲ್ಲಿ ಜನಿಸಿದವರು ಅಧ್ಯಾತ್ಮಿಕದಲ್ಲಿ ಆಸಕ್ತಿ ಹೆಚ್ಚಿರುತ್ತದೆ. ಅಧ್ಯಾತ್ಮಿಕ ವಿಷಯಗಳ ಬಗ್ಗೆ ಆಳವಾದ ಚಿಂತನೆಯನ್ನ ಹೊಂದಿರುತ್ತಾರೆ

ರಾಡಿಕ್ಸ್ ಸಂಖ್ಯೆ 5 ಹೊಂದಿರುವವರಿಗೂ ಶಿವನ ಆಶೀರ್ವಾದ ಇರುತ್ತದೆ. ಇವರ ಜನ್ಮ ದಿನಾಂಕಗಳು 5, 14 ಹಾಗೂ 23 ಆಗಿರುತ್ತದೆ

ಈ ಸಂಖ್ಯೆಯ ಜನರು ತುಂಬಾ ಬುದ್ಧಿವಂತರಾಗಿರುತ್ತಾರೆ. ಇವರ ಆರ್ಥಿಕ ಸ್ಥಿತಿಯೂ ತುಂಬಾ ಬಲಿಷ್ಠವಾಗಿರುತ್ತದೆ

ಯಾವುದೇ ತಿಂಗಳ 9, 18, 27 ರಂದು ಜನಿಸಿದವರ ಮೂಲ ಸಂಖ್ಯೆ 9 ಆಗಿರುತ್ತದೆ

ಸಂಖ್ಯಾಶಾಸ್ತ್ರದ ಪ್ರಕಾರ 9ನೇ ಸಂಖ್ಯೆಯನ್ನು ಹೊಂದಿರುವ ಜನರು ಧೈರ್ಯಶಾಲಿ, ಶಕ್ತಿಯುತ ಮತ್ತು ಕಠಿಣ ಪರಿಶ್ರಮ ಹಾಕುವವರಾಗಿರುತ್ತಾರೆ. ಇವರ ಆಳುವ ಗ್ರಹ ಮಂಗಳ

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆ ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ

ಪತಿ ಸಿದ್ದೇಗೌಡ ಜತೆಗಿನ ಹನಿಮೂನ್‌ ಪೋಟೋ ಹಂಚಿಕೊಂಡ ಲಕ್ಷ್ಮೀ ನಿವಾಸ ಸೀರಿಯಲ್‌ ಭಾವನಾ