ಮಹಾ ಶಿವರಾತ್ರಿ

ಮಹಾ ಶಿವರಾತ್ರಿಗೆ ಭೇಟಿ ನೀಡಬಹುದಾದ 5 ಪ್ರಾಚೀನ ಶಿವನ ದೇವಾಲಯಗಳಿವು

By Raghavendra M Y
Feb 24, 2025

Hindustan Times
Kannada

ಮಹಾಶಿವರಾತ್ರಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಈ ಹಬ್ಬವನ್ನು ಪ್ರತಿವರ್ಷ ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಆಚರಿಸಲಾಗುತ್ತದೆ

ಮಹಾಶಿವರಾತ್ರಿಯ ದಿನದಂದು ಶಿವ ಮತ್ತು ಪಾರ್ವತಿ ದೇವಿಯು ವಿವಾಹವಾದರು. ಈ ವರ್ಷ, ಹಬ್ಬವನ್ನು ಫೆಬ್ರವರಿ 26 ರಂದು ಆಚರಿಸಲಾಗುತ್ತೆ

ಮಹಾಶಿವರಾತ್ರಿಯ ದಿನದಂದು, ಶಿವ ದೇವಾಲಯಕ್ಕೆ ಭೇಟಿ ನೀಡುವುದು ಮತ್ತು ಶಿವನಿಗೆ ವಿವಿಧ ರೀತಿಯ ವಸ್ತುಗಳನ್ನು ಅರ್ಪಿಸುವುದು ಬಹಳ ಮುಖ್ಯ 

ಮಹಾಶಿವರಾತ್ರಿಯಂದು, ನೀವು ಈ ದೇವಾಲಯಗಳಿಗೆ ಭೇಟಿ ನೀಡಬಹುದು ಮತ್ತು ಶಿವನ ಆಶೀರ್ವಾದವನ್ನು ಪಡೆಯಬಹುದು

ಶ್ರೀ ತ್ರಯಂಬಕೇಶ್ವರ ದೇವಸ್ಥಾನವು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿದೆ. ಇದು ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ.  ಈ ದೇವಾಲಯವನ್ನು ಕಪ್ಪು ಕಲ್ಲುಗಳಿಂದ ನಿರ್ಮಿಸಲಾಗಿದೆ

ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಮಹಾಕಾಲೇಶ್ವರ ದೇವಸ್ಥಾನವಿದೆ. ದೇವಾಲಯವು ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ದೇವರ ದರ್ಶನಕ್ಕೆ ನಿತ್ಯ ನೂರಾರು ಭಕ್ತರು ಆಗಮಿಸುತ್ತಾರೆ.

ಸೋಮನಾಥ ದೇವಾಲಯವು ಶಿವನ 12 ಜ್ಯೋತಿರ್ಲಿಂಗ ದೇವಾಲಯಗಳಲ್ಲಿ ಮೊದಲನೆಯದೆಂದು ಪರಿಗಣಿಸಲಾಗಿದೆ

ಕಾಶಿ ವಿಶ್ವನಾಥ ದೇವಾಲಯವು ಶಿವನಿಗೆ ಸಮರ್ಪಿತವಾದ ಹಿಂದೂ ಧರ್ಮದ ಪವಿತ್ರ ಪೂಜಾ ಸ್ಥಳಗಳಲ್ಲಿ ಒಂದಾಗಿದೆ

ಕೇದಾರನಾಥ ದೇವಾಲಯವು ಅತ್ಯಂತ ಹಳೆಯ ಶಿವನ ದೇವಾಲಯಗಳಲ್ಲಿ ಒಂದಾಗಿದೆ. ಇಲ್ಲಿಗೆ ಭೇಟಿ ನೀಡಿದರೆ ಪ್ರತಿಯೊಂದು ಆಸೆಯೂ ಈಡೇರುತ್ತದೆ ಎಂಬ ನಂಬಿಕೆ ಇದೆ

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS