ಕರಿ ಎಳ್ಳಿನಿಂದ ಬೆಲ್ಲದವರಿಗೆ; ಶನಿ ದೇವರಿಗೆ ಅರ್ಪಿಸಬೇಕಾದ ವಸ್ತುಗಳು

By Raghavendra M Y
Sep 25, 2024

Hindustan Times
Kannada

ಹಿಂದೂ ಧರ್ಮದ ಪ್ರಕಾರ, ಒಂದೊಂದು ದೇವರಿಗೆ ಒಂದೊಂದು ದಿನವನ್ನು ಮೀಸಲಿಡಲಾಗಿದೆ. ಅದೇ ರೀತಿ ಶನಿವಾರ ಶನಿ ದೇವರಿಗೆ ಮೀಸಲು ದಿನ

ಶನಿ ದೇವರನ್ನು ಮೆಚ್ಚಿಸಲು ಅನೇಕ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತೆ. ಕೆಲವರು ದೇವಸ್ಥಾನಕ್ಕೆ ಹೋಗುತ್ತೆ, ಇನ್ನೂ ಕೆಲವರು ಉಪವಾಸ ಮಾಡ್ತಾರೆ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿವಾರದಂದು ವಿಶೇಷವಾದ ವಸ್ತುಗಳನ್ನು ಅರ್ಪಿಸಿ ಪೂಜಿಸಿದರೆ ಶನಿ ದೇವರ ಆಶೀರ್ವಾದ ಸಿಗುತ್ತೆ ಎಂದು ನಂಬಿಕೆ ಇದೆ

ಶನಿ ದೇವರಿಗೆ ಯಾವ ವಸ್ತುಗಳನ್ನು ಅರ್ಪಿಸದರೆ ತೃಪ್ತನಾಗಿ ಆಶೀರ್ವಾದ ನೀಡುತ್ತಾನೆ ಎಂಬುದನ್ನು ತಿಳಿಯೋಣ

ಕಪ್ಪು ಉದ್ದಿನ ಬೇಳೆ: ಕಪ್ಪು ಉದ್ದಿನ ಬೇಳೆಯ ಖಿಚಡಿಯನ್ನು ಶನಿ ದೇವರಿಗೆ ಅರ್ಪಿಸುವುದು ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗಿದೆ

ಕಪ್ಪು ಎಳ್ಳು: ಶನಿ ದೇವರಿಗೆ ಕಪ್ಪು ಎಳ್ಳು ಎಂದರೆ ತುಂಬಾ ಇಷ್ಟ. ಶನಿವಾರ ಕಪ್ಪು ಎಳ್ಳಿನಿಂದ ಮಾಡಿದ ಪದಾರ್ಥಗಳನ್ನು ದೇವರಿಗೆ ಅರ್ಪಿಸಬೇಕು

ಬೆಲ್ಲ: ಶನಿ ದೇವರಿಗೆ ಬೆಲ್ಲವನ್ನು ಅರ್ಪಿಸುವುದು ಕೂಡ ತುಂಬಾ ಒಳ್ಳೆಯದು. ಇದರಿಂದ ಶನಿ ಶೀಘ್ರ ಪ್ರಸನ್ನನಾಗುತ್ತಾನೆ

ನೀವು ಹೀಗೆ ಮಾಡಿದಾಗ ಶನಿ ದೇವರನ್ನು ಸಂತೋಷ ಪಡಿಸುವುದಲ್ಲದೆ, ನಿಮ್ಮ ಜೀವನವು ಸಂತೋಷದಿಂದ ಕೂಡಿರುತ್ತೆ

ಗಮನಿಸಿ: ಈ ಮಾಹಿತಿ ನಂಬಿಕೆಗಳು, ಧಾರ್ಮಿಕ ಪಠ್ಯಗಳು, ವಿವಿಧ ಮಾಧ್ಯಮಗಳನ್ನ ಆಧರಿಸಿದೆ. ಮಾಹಿತಿ ಸ್ವೀಕರಿಸುವ ಮುನ್ನ ತಜ್ಞರನ್ನು ಸಲಹೆ ಪಡೆಯಿರಿ

2024ರ ದೀಪಾವಳಿ ಯಾವಾಗ? ಇಲ್ಲಿದೆ ದಿನಾಂಕ, ಶುಭ ಸಮಯದ ವಿವರ