ಜೀವನದಲ್ಲಿನ ಎಲ್ಲಾ ಸಮಸ್ಯೆಗಳ ಪರಿಹಾರಕಕ್ಕಾಗಿ ಶ್ರಾವಣ ಪುತ್ರದಾ ಏಕದಶಿಯಂದು ಏನೆಲ್ಲಾ ಮಾಡಬೇಕೆಂಬುದನ್ನು ತಿಳಿಯೋಣ
By Raghavendra M Y
Aug 11, 2024
Hindustan Times
Kannada
ಪ್ರತಿ ತಿಂಗಳ ಏಕಾದಶಿ ತಿಥಿಯನ್ನು ಭಗವಾನ್ ವಿಷ್ಣುವಿಗೆ ಸಮರ್ಪಿಸಲಾಗುತ್ತದೆ. ಕೃಷ್ಣ ಮತ್ತು ಶುಕ್ಲ ಪಕ್ಷದಲ್ಲಿ ಎರಡು ಏಕಾದಶಿ ದಿನಾಂಕಗಳು ಬರುತ್ತವೆ
ಶ್ರಾವಣ ಶುಕ್ಲ ಪಕ್ಷದ ಏಕಾದಶಿಯನ್ನು ಪುತ್ರದಾ ಏಕಾದಶಿಯಂತಲೂ ಕರೆಯಲಾಗುತ್ತದೆ
ಈ ವರ್ಷ ಪುತ್ರದಾ ಏಕಾದಶಿಯನ್ನು ಆಗಸ್ಟ್ 15 ರಂದು ಶ್ರಾವಣದಲ್ಲಿ ಆಚರಿಸಲಾಗುತ್ತದೆ. ಈ ದಿನ ವಿಷ್ಣು ಮತ್ತು ತಾಯಿ ಲಕ್ಷ್ಮಿಯನ್ನು ಪೂಜಿಸಲಾಗುತ್ತೆ
ನೀವು ಈ ದಿನ ವಿಷ್ಣುವಿನ ಕೃಪೆಗೆ ಪಾತ್ರರಾಗಲು ಮತ್ತು ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಬಯಸಿದರೆ ಕೆಲವು ಪದ್ಧತಿಗಳನ್ನು ಅನುಸರಿಸಬೇಕಾಗುತ್ತದೆ
ಏಕಾದಶಿ ದಿನದಂದು ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ಪೂಜೆಗೆ ಸಿದ್ದತೆಗಳನ್ನು ಮಾಡಿಕೊಳ್ಳಬೇಕು
ಇದಾದ ನಂತರ ಕೆಂಪು ಬಟ್ಟೆಯಲ್ಲಿ ವಿಷ್ಮುವಿಗೆ ಅರ್ಪಿಸಿ ಸ್ವಲ್ಪ ಸಮಯದ ಬಳಿಕ ಅದನ್ನು ನಿಮ್ಮ ಬಳಿಯೇ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು
ಈ ರೀತಿ ಮಾಡುವುದರಿಂದ ನಿಮಗೆ ಹಣದ ಕೊರತೆಯೇ ಎದುರಾಗುವುದಿಲ್ಲ. ಸಂಪತ್ತಿನ ಅವಕಾಶಗಳು ಸೃಷ್ಟಿಯಾಗುತ್ತವೆ ಎಂದು ಹೇಳಲಾಗುತ್ತದೆ
ಏಕಾದಶಿಯಂದು ಪತಿ-ಪತ್ನಿ ತುಳಸಿ ಗಿಡವನ್ನು ಒಟ್ಟಿಗೆ ಪೂಜಿಸಬೇಕು. ಕೆಂಪು ಬಣ್ಣದ ಬಟ್ಟೆಯನ್ನು ಗಿಡಕ್ಕೆ ಕಟ್ಟಬೇಕು. ಇದರಿಂದ ಸಂತೋಷ, ಶಾಂತಿ ಹೆಚ್ಚಾಗುತ್ತೆ
ವಿವಾಹಿತ ಮಹಿಳೆಯರು ತುಳಸಿ ಮಾತೆಗೆ 16 ವಸ್ತುಗಳನ್ನು ಅರ್ಪಿಸಬೇಕು. ಇದು ಅಖಂಡ ಸೌಭಾಗ್ಯವನ್ನು ತರುತ್ತದೆ
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ
ಪುಷ್ಪ 2 ಬಿಡುಗಡೆಗೆ ಮುನ್ನ ಶ್ರೀಲೀಲಾ ನಟನೆಯ ಈ ಸಿನಿಮಾಗಳನ್ನು ಕಣ್ತುಂಬಿಕೊಳ್ಳಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ