ಪಿತೃಪಕ್ಷದಲ್ಲಿ ಈ 4 ತಪ್ಪುಗಳನ್ನು ಮಾಡಬೇಡಿ

By Prasanna Kumar P N
Sep 09, 2024

Hindustan Times
Kannada

ಪಿತೃಪಕ್ಷದ ದಿನವು ಪೂರ್ವಜರಿಗೆ ಪಿಂಡದಾನ, ಗೌರವ ಮತ್ತು ತರ್ಪಣ ಅರ್ಪಿಸುವುದಾಗಿದ್ದು, ಹಿಂದೂ ಧರ್ಮದಲ್ಲಿ ಪ್ರಾಮುಖ್ಯತೆ ಇದೆ.

ಪಿತೃ ಪಕ್ಷದ ಸಮಯದಲ್ಲಿ ಪಿಂಡದಾನ, ಶ್ರಾದ್ಧ ಅಥವಾ ತರ್ಪಣವನ್ನು ಅರ್ಪಿಸಿದರೆ, ಪೂರ್ವಜರ ಆತ್ಮ ಶಾಂತಿಯಾಗುತ್ತದೆ ಎಂಬುದು ನಂಬಿಕೆ.

ಈ ಬಾರಿ ಪಿತೃ ಪಕ್ಷ ಸೆಪ್ಟೆಂಬರ್ 17 ರಿಂದ ಆರಂಭವಾಗಲಿದ್ದು ಅಕ್ಟೋಬರ್ 2 ರವರೆಗೆ ಇರಲಿದೆ. ಆದರೆ, ಪಿತೃಪಕ್ಷದ ವೇಳೆ ಈ ನಾಲ್ಕು ತಪ್ಪುಗಳನ್ನು ಮಾಡಲೇಬೇಡಿ.

ಪಿತೃ ಪಕ್ಷದ ಸಮಯದಲ್ಲಿ ಸಂಪೂರ್ಣ 15 ದಿನಗಳವರೆಗೆ ಪಕ್ಷಿಗಳನ್ನು ಕೊಲ್ಲಬೇಡಿ ಅಥವಾ ಕಿರುಕುಳ ಮಾಡಬೇಡಿ. ಕಾಗೆಗಳಿಗೆ ಸೇವೆ ಸಲ್ಲಿಸಿದರೆ, ಪೂರ್ವಜರು ಸಂತುಷ್ಟರಾಗುತ್ತಾರೆ. ಅವರಿಗೆ ಸಂತೋಷ ಮತ್ತು ಸಮೃದ್ಧಿ ಸಿಗಲಿದೆ ಎಂದು ನಂಬಲಾಗಿದೆ.

ಪಿತೃ ಪಕ್ಷದ ವೇಳೆ ಇಡೀ 15 ದಿನಗಳ ಕಾಲ ಮನೆಯಲ್ಲಿ ಸದ್ಗುಣದ ವಾತಾವರಣ ಕಾಪಾಡಿ. ಅಂದರೆ ಮಾಂಸ-ಮದ್ಯ ಸೇವಿಸಬೇಡಿ. ಇದು ನಿಮ್ಮ ವಂಶಸ್ಥರ ಮೇಲೆ ನೇರ ಪರಿಣಾಮ ಬೀರುತ್ತದೆ.

ಪಿತೃ ಪಕ್ಷದ ಸಮಯದಲ್ಲಿ ಕೆಲವು ಸಸ್ಯಾಹಾರಗಳನ್ನು ಸಹ ನಿಷೇಧಿಸಲಾಗಿದೆ. ಉದಾಹರಣೆಗೆ ಸೌತೆಕಾಯಿ, ಸಾಸಿವೆ ಸೊಪ್ಪು, ಬೇಳೆ ಇತ್ಯಾದಿಗಳನ್ನು ತಿನ್ನಬಾರದು. ಇದನ್ನು ಅಶುಭವೆಂದು ಪರಿಗಣಿಸಲಾಗಿದೆ.

ಪಿತೃ ಪಕ್ಷದ ದಿನಗಳಲ್ಲಿ ಗೃಹ ಪ್ರವೇಶ, ಮದುವೆ.. ಹೀಗೆ 15 ದಿನಗಳ ಕಾಲ ಮನೆಯಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡಬೇಡಿ.

ಮಾರ್ಟಿನ್ ಪದದ ರಿಯಲ್ ಅರ್ಥವಿದು