ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿಸಲು ಸಾಧ್ಯವಾಗಿಲ್ಲ ಅಂದ್ರೆ, ಈ ವಸ್ತುಗಳನ್ನೂ ಖರೀದಿಸಬಹುದು 

By Reshma
May 10, 2024

Hindustan Times
Kannada

ಹಿಂದೂ ಧರ್ಮದಲ್ಲಿ ಅಕ್ಷಯ ತೃತೀಯಕ್ಕೆ ವಿಶೇಷ ಮಹತ್ವವಿದೆ. ಪ್ರತಿ ವರ್ಷ ವೈಶಾಖ ಮಾಸದ ಶುಕ್ಲಪಕ್ಷದಂದು ಅಕ್ಷಯ ತೃತೀಯ ಆಚರಣೆ ಇರುತ್ತದೆ.

ಈ ವರ್ಷ ಇಂದು ಅಂದರೆ ಮೇ 10 ರಂದು ಅಕ್ಷಯ ತೃತೀಯವಿದ್ದು, ಈ ದಿನವನ್ನು ಬಹಳ ಮಂಗಳಕರ ಎಂದು ಪರಿಗಣಿಸಲಾಗಿದೆ. 

ಈ ದಿನ ಸಂಪತ್ತಿನ ದೇವರು ಎಂದು ಕರೆಸಿಕೊಳ್ಳುವ ಕುಬೇರನು ಚಿನ್ನದ ರಾಶಿಯನ್ನು ಪಡೆದಿದ್ದನು ಎಂದು ನಂಬಲಾಗಿದೆ. 

ಅಕ್ಷಯ ತೃತೀಯದಂದು ಧಾರ್ಮಿಕ ಆಚರಣೆ, ಚಿನ್ನ ಖರೀದಿ ಮಾಡುವುದು ಮಂಗಳಕರ ಎಂಬ ನಂಬಿಕೆ ಇದೆ. ಈ ದಿನ ಮಾಡಿದ ಶುಭಕಾರ್ಯಗಳ ಪುಣ್ಯವು ಎಂದಿಗೂ ಕಡಿಮೆಯಾಗುವುದಿಲ್ಲ ಎನ್ನಲಾಗುತ್ತದೆ. 

ಅಕ್ಷಯ ತೃತೀಯದಂದು ಚಿನ್ನ ಅಥವಾ ಬೆಳ್ಳಿ ಖರೀದಿ ಮಾಡುವುದು ಶುಭ ಎಂದು ನಂಬಲಾಗಿದೆ. 

ಇಂದು ನೀವು ಚಿನ್ನ, ಬೆಳ್ಳಿಯ ಆಭರಣಗಳು, ನಾಣ್ಯಗಳನ್ನು ಖರೀದಿ ಮಾಡಬಹುದು. 

ಆದರೆ ಹಣಕಾಸಿನ ಕೊರತೆಯಿಂದ ಚಿನ್ನ, ಬೆಳ್ಳಿ ಖರೀದಿಸಲು ಸಾಧ್ಯವಾಗಿಲ್ಲ ಎಂದರೆ ಈ ವಸ್ತುಗಳನ್ನೂ ಖರೀದಿ ಮಾಡಬಹುದು. ಇದರಿಂದಲೂ ಶುಭವಾಗುತ್ತದೆ ಎನ್ನಲಾಗುತ್ತದೆ. 

ಈ ದಿನ ಮಣ್ಣಿನ ಮಡಿಕೆ, ಬಾರ್ಲಿ, ಹಳದಿ ಸಾಸಿವೆ, ದಕ್ಷಿಣಾಮೂರ್ತಿ ಶಂಖ, ಶ್ರೀಯಂತ್ರ ಹಾಗೂ ಕೊತ್ತಂಬರಿ ಬೀಜಗಳನ್ನು ಖರೀದಿಸುವ ಮೂಲಕ ಅಕ್ಷಯ ತೃತೀಯದಂದು ಶುಭ ಫಲಿತಾಂಶಗಳನ್ನು ಪಡೆಯಬಹುದು. 

ಅಕ್ಷಯ ತೃತೀಯದಂದು ಪ್ಲಾಸ್ಟಿಕ್‌, ಕಪ್ಪುಬಟ್ಟೆ, ಚಾಕು ಇಂತಹ ವಸ್ತುಗಳನ್ನು ಖರೀದಿ ಮಾಡಬಾರದು. 

ಮಾಡರ್ನ್‌ ಲುಕ್‌ನಲ್ಲಿ ಮಾಲಾಶ್ರಿ ಮಗಳು ಆರಾಧನಾ ರಾಮ್‌