ವಿಷ್ಣು ಸಹಸ್ರನಾಮದ ಕುರಿತು ಪ್ರತಿಯೊಬ್ಬರೂ ತಿಳಿದಿರಬೇಕಾದ 9 ವಿಚಾರಗಳಿವು
By Reshma Mar 03, 2024
Hindustan Times Kannada
ತ್ರಿಮೂರ್ತಿಗಳಲ್ಲಿ ಒಬ್ಬರಾದ ಮಹಾವಿಷ್ಣುವು ಇಡೀ ಬ್ರಹ್ಮಾಂಡವನ್ನು ಕಾಯುವವನು. ವಿಷ್ಣುವನ್ನು ಭಜಿಸುವ ವಿಷ್ಣು ಸಹಸ್ರನಾಮಕ್ಕೆ ಹಿಂದೂಗಳಲ್ಲಿ ಮಹತ್ವ ಪ್ರಾಮುಖ್ಯವಿದೆ. ಮಹಾವಿಷ್ಣುವಿನ ಸಾವಿರ ಹೆಸರುಗಳು ಅದರಲ್ಲಿ ಉಲ್ಲೇಖವಾಗಿದೆ.
ಹಿಂದೂ ಮಹಾಕಾವ್ಯಗಳಾದ ಮಹಾಭಾರತ ಹಾಗೂ ಭಗವದ್ಗೀತೆಗಳನ್ನು ಬರೆದಿರುವ ವ್ಯಾಸ ಮುನಿಗಳು ವಿಷ್ಣು ಸಹಸ್ರನಾಮವನ್ನು ಬರೆದಿದ್ದಾರೆ. ವಿಷ್ಣು ಸಹಸ್ರನಾಮ ಪಠಿಸುವುದರಿಂದಾಗುವ ಪ್ರಯೋಜನಗಳನ್ನು ತಿಳಿಯಿರಿ.
ವಿಷ್ಣುಸಹಸ್ರನಾಮವನ್ನು ಪಠಿಸುವುದರಿಂದ ಜೀವನದಲ್ಲಿ ಪಗ್ರತಿಯನ್ನು ಸಾಧಿಸಬಹುದು. ಏಕಾದಶಿಯ ದಿನ ವಿಷ್ಣು ಸಹಸ್ರನಾಮ ಪಠಿಸುವುದರಿಂದ ಮೋಕ್ಷ ಪಡೆಯಬಹುದು ಎಂಬುದು ನಂಬಿಕೆ.
ವಿಷ್ಣು ಸಹಸ್ರನಾಮ ಪಠಿಸುವುದರಿಂದ ಎಲ್ಲಾ ರೀತಿ ಪಾಪಗಳಿಂದಲೂ ಮುಕ್ತಿ ಪಡೆಯಬಹುದು. ಇದು ನಮ್ಮೆಲ್ಲಾ ತೊಂದರೆಗಳಿಗೆ ಪರಿಹಾರ ಒದಗಿಸುತ್ತದೆ.
ವಿಷ್ಣು ಸಹಸ್ರನಾಮವನ್ನು ಓದುವುದರಿಂದ ಸಂತೋಷ, ಸಮೃದ್ಧಿ, ಆರ್ಥಿಕಾವೃದ್ಧಿ, ಆರೋಗ್ಯ ಹಾಗೂ ಭವಿಷ್ಯವು ಉತ್ತಮವಾಗಿರುತ್ತದೆ.
ಇನ್‌ಸೋಮ್ನಿಯಾದಂತಹ ನಿದ್ದೆಯ ಸಮಸ್ಯೆಯಿಂದ ಬಳಲುತ್ತಿರುವವರು ವಿಷ್ಣು ಸಹಸ್ರನಾಮ ಪಠಿಸುವುದರಿಂದ ಉತ್ತಮ ನಿದ್ದೆ ಪಡೆಯಬಹುದು.
ಮಕ್ಕಳಾಗದೇ ಇರುವವರು ವಿಷ್ಣು ಸಹಸ್ರನಾಮ ಪಠಿಸುವುದರಿಂದ ಮಕ್ಕಳು ಪಡೆಯುತ್ತಾರೆ ಎಂಬ ನಂಬಿಕೆ ಇದೆ.
ಜ್ಯೋತಿಷ್ಯದ ಪ್ರಕಾರ ಸೂರ್ಯನ ಅನುಗ್ರಹ ಇಲ್ಲದೇ ಇರುವ ಜನ್ಮರಾಶಿಯವರು ವಿಷ್ಣು ಸಹಸ್ರನಾಮವನ್ನು ಪಠಿಸಬೇಕು. ಇದರಿಂದ ಒಳಿತಾಗುತ್ತದೆ.
ವಿಷ್ಣು ಸಹಸ್ರನಾಮ ಪಠಿಸುವುದರಿಂದ ಗಮನಶಕ್ತಿ ಹೆಚ್ಚುತ್ತದೆ. ಆ ಕಾರಣಕ್ಕೆ ಇದು ವಿದ್ಯಾರ್ಥಿಗಳಿಗೂ ಉತ್ತಮ.
ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಫಿಟ್‌ನೆಸ್ ಸೀಕ್ರೆಟ್ ಇಲ್ಲಿದೆ