ಶಿವರಾತ್ರಿಯಂದು ನಂದಿ ಪೂಜೆಗೆ ಯಾಕಷ್ಟು ಮಹತ್ವ; ಇಲ್ಲಿದೆ ವಿವರ 

By Reshma
Feb 25, 2024

Hindustan Times
Kannada

ಶಿವನ ಆರಾಧನೆಯಲ್ಲಿ ನಂದಿ ಪೂಜೆಗೆ ವಿಶೇಷ ಮಹತ್ವವಿದೆ. ನಂದಿ ಕಿವಿಯಲ್ಲಿ ನಾವು ಬೇಡಿಕೊಂಡ ಆಶಯಗಳು ಶಿವನನ್ನು ತಲುಪುತ್ತದೆ ಎಂದು ನಂಬಲಾಗಿದೆ. 

ಯಾವುದೇ ಶಿವ ದೇವಾಲಯದಲ್ಲೂ ಶಿವನಿಗೆ ಎದುರಾಗಿ ನಂದಿಯ ವಿಗ್ರಹವಿರುತ್ತದೆ. ಅದು ಯಾಕೆ ಎನ್ನುವುದು ತಿಳಿದಿಲ್ಲ ಎಂದರೆ ಮುಂದೆ ಓದಿ. 

ನಂದಿಯು ಶಿವನ ವಾಹನವಾಗಿದೆ. ಹಿಂದೂ ಪುರಾಣಗಳಲ್ಲಿ ನಂದಿಯ ಜನ್ಮಕಥೆಯನ್ನು ವಿವರಿಸಲಾಗಿದೆ. 

ನಂದಿಯು ಶಿಲದ ಎಂಬ ಖುಷಿಯ ಮಗ. ಶಿಲದ ಋಷಿಯ ತಪಸ್ಸಿಗೆ ಮೆಚ್ಚುವ ಶಿವನು ಅವನಿಗೆ ರತ್ನ ಎಂಬ ಮಗನನ್ನು ಕರುಣಿಸುತ್ತಾನೆ. ಅವನೇ ನಂದಿ. 

ನಂದಿಯು ಸದಾ ಶಿವಭಕ್ತಿಯಲ್ಲಿ ಮುಳುಗಿರುತ್ತಾನೆ. ಅವನ ಅಪಾರ ಭಕ್ತಿಯಿಂದ ಸಂತುಷ್ಠನಾದ ಶಿವನು ಅವನನ್ನು ತನ್ನ ಮಗನಂತೆ ಸ್ವೀಕರಿಸುತ್ತಾನೆ. 

ತನ್ನನ್ನು ಪ್ರತಿಷ್ಠಾಪಿಸುವ ಪ್ರತಿ ದೇವಾಲಯದಲ್ಲೂ ನಂದಿ ವಿಗ್ರಹವೂ ಇರಬೇಕು ಎಂದು ಶಿವನು ನಂದಿಗೆ ವರ ನೀಡಿರುತ್ತಾನೆ. ಆ ಕಾರಣಕ್ಕೆ ಶಿವನ ಎದುರು ನಂದಿಯನ್ನೂ ಪ್ರತಿಷ್ಠಾಪಿಸಲಾಗುತ್ತದೆ. 

ಶಿವನ ದೇವಾಲಯಕ್ಕೆ ಭೇಟಿ ನೀಡಿದಾಗೆಲ್ಲಾ ನಂದಿಯನ್ನೂ ಪೂಜಿಸಬೇಕು. ಅಲ್ಲದೇ ನಿಮ್ಮ ಆಶಯಗಳನ್ನು ನಂದಿಯ ಕಿವಿಯಲ್ಲಿ ಹೇಳಬೇಕು, ಇದು ನೇರವಾಗಿ ಶಿವನನ್ನು ತಲುಪುತ್ತದೆ ಎಂಬ ನಂಬಿಕೆ ಇದೆ. 

ಮಹಾಶಿವರಾತ್ರಿಯಂದು ಶಿವನ ಜೊತೆಗೆ ನಂದಿ ಪೂಜೆಯನ್ನೂ ಮಾಡಲಾಗುತ್ತದೆ. ಈ ವರ್ಷ ಮಾರ್ಚ್‌ 8ಕ್ಕೆ ಶಿವರಾತ್ರಿ ಆಚರಣೆ ಇದೆ. 

ಉತ್ತರ ಭಾರತದ ಫೇಮಸ್‌ ಬ್ರೇಕ್‌ಫಾಸ್ಟ್‌ಗಳು