ಶಿವರಾತ್ರಿ ಸಂದರ್ಭ ಮಹಾಶಿವನಿಗೆ ಇಷ್ಟವಾಗುವ 10 ವಸ್ತುಗಳ ಬಗ್ಗೆ ತಿಳಿಯಿರಿ 

By Reshma
Mar 06, 2024

Hindustan Times
Kannada

2024ರ ಮಹಾಶಿವರಾತ್ರಿ ಆಚರಣೆಗೆ 2 ದಿನಗಳಷ್ಟೇ ಬಾಕಿ. ಈ ಸಂದರ್ಭ ಪರಮೇಶ್ವರನಿಗೆ ಇಷ್ಟವಾಗುವ ವಸ್ತುಗಳ ಬಗ್ಗೆ ತಿಳಿಯಿರಿ. ಇದನ್ನು ದೇವರಿಗೆ ಅರ್ಪಿಸಿ, ಶಿವನ ಕೃಪೆಗೆ ಪಾತ್ರರಾಗಿ.

ಬಿಲ್ವಪತ್ರೆ: ಮಹಾಶಿವನಿಗೆ ಬಿಲ್ವಪತ್ರೆ ಬಹಳ ಅಚ್ಚುಮೆಚ್ಚು. ಶಿವರಾತ್ರಿಯಂದು ಬಿಲ್ವಪತ್ರೆ ಅರ್ಪಿಸುವುದರಿಂದ ಶಿವನ ಕೃಪೆಗೆ ಪಾತ್ರರಾಗಬಹುದು, ಮಾತ್ರವಲ್ಲ ಪರಮೇಶ್ವರನ ಆಶೀರ್ವಾದವೂ ಲಭಿಸುತ್ತದೆ. 

ಬೇಲದ ಹಣ್ಣು: ಶಿವನಿಗೆ ಬೇಲದ ಹಣ್ಣು ಕೂಡ ಇಷ್ಟವಾಗುತ್ತದೆ. ಇದನ್ನು ಕೂಡ ದೇವರಿಗೆ ನೇವೇದ್ಯವಾಗಿ ನೀಡಬಹುದು. 

ಹಾಲು: ಶಿವನಿಗೆ ಹಾಲು ಅರ್ಪಿಸುವ ಕ್ರಮ ಬಹುತೇಕ ಕಡೆ ರೂಢಿಯಲ್ಲಿದೆ. ಶಿವಲಿಂಗಕ್ಕೆ ಹಾಲು ಅರ್ಪಿಸುವುದರಿಂದ ದೇವರ ಸಂತುಷ್ಟನಾಗುತ್ತಾನೆ ಎಂದು ನಂಬಲಾಗಿದೆ. 

ಜೇನುತುಪ್ಪ: ಮಹಾಶಿವರಾತ್ರಿಯಂದು ಶಿವನಿಗೆ ಜೇನುತುಪ್ಪವನ್ನೂ ಅರ್ಪಿಸಬಹುದು. ಇದು ಸಿಹಿ ಹಾಗೂ ಶುದ್ಧತೆಯ ಸಂಕೇತವಾಗಿದ್ದು, ಪರಮೇಶ್ವರ ಸಂತುಷ್ಟನಾಗುತ್ತಾನೆ ಎಂಬ ನಂಬಿಕೆ ಇದೆ.

ಮೊಸರು: ಮೊಸರನ್ನು ಕೂಡ ಶಿವನಿಗೆ ಅರ್ಪಿಸಬಹುದು 

ತುಪ್ಪ: ಹಿಂದೂ ಧರ್ಮದಲ್ಲಿ ತುಪ್ಪಕ್ಕೆ ತನ್ನದೇ ಆದ ಮಹತ್ವವಿದೆ. ಇದು ಶುದ್ಧತೆಯ ಸಂಕೇತ. ಪೂಜೆ, ಪುನಸ್ಕಾರ, ಯಾಗ, ಯಜ್ಞಗಳಲ್ಲಿ ತುಪ್ಪ ತನ್ನದೇ ಆದ ಮಹತ್ವವನ್ನು ಹೊಂದಿದೆ. 

ಶ್ರೀಗಂಧ: ತೇಯ್ದ ಶ್ರೀಗಂಧವು ದೇವರಿಗೆ ಬಹಳ ವಿಶೇಷ. ಶಿವಲಿಂಗಕ್ಕೆ ಶ್ರೀಗಂಧ ಲೇಪಿಸುವ ಮೂಲಕ ದೇವರ ಆಶೀರ್ವಾದ ಪಡೆಯಬಹುದು. 

ಭಾಂಗ್‌ ಕೂಡ ಶಿವನಿಗೆ ಅಚ್ಚುಮೆಚ್ಚಿನ ವಸ್ತುವಾಗಿದ್ದು, ಶಿವರಾತ್ರಿಯಂದು ಇದನ್ನು ಕೂಡ ಅರ್ಪಿಸಬಹುದು. 

ಬಾರೆಹಣ್ಣು: ಶಿವನಿಗೆ ಬಾರೆಹಣ್ಣು ಕೂಡ ಇಷ್ಟ. ಇದನ್ನು ನೀವು ನೇವೇದ್ಯವಾಗಿ ಇರಿಸುವ ಮೂಲಕ ಶಿವನನ್ನು ಸಂತುಷ್ಠಿಗೊಳಿಸಬಹುದು. 

ವೀಳ್ಯದೆಲೆ: ವೀಳ್ಯದೆಲೆಗೂ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವಿದೆ. ಇದು ಕೂಡ ಶಿವನಿಗೆ ಅಚ್ಚುಮೆಚ್ಚು.  

ಸ್ಟಾರ್ ಆಕರ್ಷಣೆ; ಎಲೆಕ್ಷನ್‌ ಡ್ಯೂಟಿಯಲ್ಲಿ ಬ್ಯೂಟಿಫುಲ್ ಮೇಡಮ್