ಯಾವ ರಾಶಿಯವರು ಯಾವ ದೇವರನ್ನು ಆರಾಧಿಸಬೇಕು, ಯಾಕೆ?

Pixabay

By Raghavendra M Y
Jul 08, 2024

Hindustan Times
Kannada

ಮೇಷ ರಾಶಿ: ಮೇಷ ರಾಶಿಯವರಿಗೆ ಆಂಜನೇಯ ಪರಮ ದೇವರಾಗಿದ್ದು, ಇವರು ಹನುಮಂತನನ್ನು ಪೂಜಿಸಬೇಕು. ಪ್ರತಿದಿನ ಹನುಮಾನ್ ಚಾಲೀಸವನ್ನು ಪಠಿಸಬೇಕು

ವೃಷಭ ರಾಶಿ: ಲಕ್ಷ್ಮಿ ದೇವಿಯು ವೃಷಭ ರಾಶಿಯವರ ಅಧಿದೇವತೆ. ದೇವರ ಆಶೀರ್ವಾದ ಪಡೆಯಲು ಲಕ್ಷ್ಮಿ ದೇವಿಯ ಸ್ತೋತ್ರಗಳನ್ನು ಪಠಿಸಬೇಕು

ಮಿಥುನ ರಾಶಿ: ಶ್ರೀಕೃಷ್ಣನು ಮಿಥುನ ರಾಶಿಯವರಿಗೆ ಪ್ರಧಾನ ದೇವರು. ಮಿಥುನ ರಾಶಿಯವರು ಹೆಚ್ಚಿನ ಲಾಭಗಳಿಗಾಗಿ ಶ್ರೀಕೃಷ್ಣನನ್ನು ಪಠಿಸಬೇಕು

ಕಟಕ ರಾಶಿ: ಇವರಿಗೆ ಪಾರ್ವತಿ ಪ್ರಧಾನ ದೇವತೆ. ಹೆಚ್ಚಿನ ಆಶೀರ್ವಾದಕ್ಕಾಗಿ ಪಾರ್ವತಿ ಚಾಲೀಸವನ್ನು ಪಠಿಸಬೇಕು

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಸೂರ್ಯ ದೇವರನ್ನು ಪೂಜಿಸಲು ಸಲಹೆ ನೀಡಲಾಗುತ್ತದೆ. ಸೂರ್ಯ ಈ ರಾಶಿಯವರ ಪರಮೋಚ್ಚ ದೇವರು. ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸಬೇಕು

ಕನ್ಯಾ ರಾಶಿ: ಈ ರಾಶಿಯವರಿಗೆ ಮುಖ್ಯ ದೇವರು ವಿಷ್ಣು. ಕನ್ಯಾ ರಾಶಿಯವರು ವಿಷ್ಣು ಸಹಸ್ರನಾಮವನ್ನು ಓದಬೇಕು

ತುಲಾ ರಾಶಿ: ದುರ್ಗಾ ದೇವಿ ತುಲಾ ರಾಶಿಯವರ ಪ್ರಧಾನ ದೇವತೆಯಾಗಿದ್ದಾಳೆ. ದೇವಿಯನ್ನು ಮೆಚ್ಚಿಸಲು ದುರ್ಗಾ ಚಾಲೀಸಾವನ್ನು ಪಠಿಸಲು ಸಲಹೆ ನೀಡಲಾಗಿದೆ

ವೃಶ್ಚಿಕ ರಾಶಿ: ಕಾರ್ತಿಕೇಯನು ವೃಶ್ಚಿಕ ರಾಶಿಯವರ ಪ್ರಧಾನ ದೇವರು. ಈ ರಾಶಿಯವರು ಕಾರ್ತಿಕೇಯ ಮಂತ್ರವನ್ನು ಪಠಿಸಬೇಕು

ಧನು ರಾಶಿ: ಧನು ರಾಶಿಯವರಿಗೆ ಇಂದ್ರನು ಪ್ರಧಾನ ದೇವರು. ಇಂದ್ರ ಮಂತ್ರವನ್ನು ಪಠಣ ಮಾಡಬೇಕೆಂದು ಸೂಚಿಸಲಾಗುತ್ತದೆ

ಮಕರ ರಾಶಿ: ಈ ರಾಶಿಯವರ ಪ್ರಧಾನ ದೇವರು ಶನಿ. ದೇವರ ಆಶೀರ್ವಾದಕ್ಕಾಗಿ ನಿಯಮಿತವಾಗಿ ಶನಿ ಚಾಲೀಸಾವನ್ನು ಪಠಿಸಬೇಕು

ಕುಂಭ ರಾಶಿ: ಭೈರವ ಕುಂಭ ರಾಶಿಯವರ ಸರ್ವೋಚ್ಚ ದೇವರು. ಭೈರವನನ್ನು ಸಮಾಧಾನಪಡಿಸಲು ಕಾಲ ಬೈರವ ಅಷ್ಟಕಮ್ ಪಠಿಸಬೇಕು

ಮೀನ ರಾಶಿ: ಈ ರಾಶಿಯವರಿಗೆ ಶಿವನ ಪ್ರಧಾನ ದೇವರಾಗಿದ್ದಾನೆ. ಭಗವಂತನ ಆಶೀರ್ವಾದ ಪಡೆಯಲು ನಿತ್ಯ ರುದ್ರಾಷ್ಟಕವನ್ನು ಪಟಿಸಲು ಸೂಚಿಸಲಾಗಿದೆ

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ

ಮಾಸ್ಟರ್‌ ಪೀಸ್‌ ಚೆಲುವೆ ಜ್ಯೋತಿ ರೈ ಹೊಸ ಫೋಟೋಗಳು