ಧನತೇರಸ್ ಹಬ್ಬದಲ್ಲಿ ಈ ವಸ್ತುಗಳನ್ನು ಖರೀದಿಸಿದರೆ ಸಮೃದ್ಧಿ ಹೆಚ್ಚಾಗುತ್ತೆ
By Raghavendra M Y Oct 06, 2024
Hindustan Times Kannada
ಹಿಂದೂ ಧರ್ಮದ ಪ್ರಮುಖ ಹಬ್ಬ ದೀಪಾವಳಿ. 5 ದಿನಗಳ ಹಬ್ಬ ಧನತೇರಸ್‌ನೊಂದಿಗೆ ಪ್ರಾರಂಭವಾಗುತ್ತೆ. ಪ್ರತಿ ವರ್ಷ ಕಾರ್ತಿಕ ಮಾಸದ ಕೃಷ್ಣ ಪಕ್ಷದ ತ್ರಯೋದಶಿ ತಿಥಿಯಂದು ಹಬ್ಬ ಆಚರಿಸಲಾಗುತ್ತೆ
ದೃಕ್ ಪಂಚಾಂಗದ ಪ್ರಕಾರ ಈ ವರ್ಷ ಅಕ್ಟೋಬರ್ 29 ರಂದು ಧನತೇರಸ್ ಅನ್ನು ಆಚರಿಸಲಾಗುತ್ತದೆ. ಧನತೇರಸ್ ದಿನದಂದು ಮಹಾಲಕ್ಷ್ಮಿ ಮತ್ತು ಕುಬೇರ ದೇವರನ್ನು ಪೂಜಿಸಲಾಗುತ್ತದೆ
ಧನತೇರಸ್ ಎಂದರೆ ಧನ್ ಮತ್ತು ತೇರಸ್ ಎಂಬ ಎರಡು ಪದಗಳಿಂದ ಕೂಡಿದೆ. ಅಂದರೆ 13 ಪಟ್ಟು ಹಣ. ಧನತೇರಸ್ ದಿನ ಯಾವ ವಸ್ತುಗಳನ್ನು ಖರೀದಿಸಲು ಮಂಗಳಕರವೆಂದು ಪರಿಗಣಿಸಲಾಗುತ್ತದೆ ಎಂಬುದನ್ನು ತಿಳಿಯಿರಿ
ಧನತೇರಸ್ ದಿನ ಚಿನ್ನಾಭರಣ ಖರೀದಿಸುವ ಸಂಪ್ರದಾಯವಿದೆ. ಚಿನ್ನವನ್ನು ತಾಯಿ ಲಕ್ಷ್ಮಿ ಮತ್ತು ದೇವಗುರುವಿನ ಸಂಕೇತವೆಂದು ಪರಿಗಣಿಸಲಾಗಿದೆ
ಧನತೇರಸ್ ದಿನದಂದು ಹಿತ್ತಾಳೆ, ತಾಮ್ರ ಹಾಗೂ ಬೆಳ್ಳಿಯ ಪಾತ್ರೆಗಳನ್ನು ಖರೀದಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ
ಧನತೇರಸ್ ಹಬ್ಬದ ಸಂದರ್ಭದಲ್ಲಿ ಸಂಪೂರ್ಣ ಕೊತ್ತಂಬರಿ ಸೊಪ್ಪವನ್ನು ಖರೀದಿಸುವುದು ಒಳ್ಳೆಯದು. ಸಂಜೆ ಪೂಜೆಯ ಸಮಯದಲ್ಲಿ ಲಕ್ಷ್ಮಿ ದೇವಿಗೆ ಕೊತ್ತಂಬರಿ ಸೊಪ್ಪವನ್ನು ಅರ್ಪಿಸಲಾಗುತ್ತದೆ
ದೀಪಾವಳಿ ಹಬ್ಬದಂದು ಲಕ್ಷ್ಮಿ ಮತ್ತು ಗಣೇಶನನ್ನು ಪೂಜಿಸಲಾಗುತ್ತದೆ. ಆದ್ದರಿಂದ ದೀಪಾವಳಿ ಪೂಜೆಗಾಗಿ ಧನತೇರಸ್ ದಿನಂದು ಲಕ್ಷ್ಮಿ-ಗಣೇಶನ ವಿಗ್ರಹವನ್ನು ಮನೆಗೆ ತಂದು ಪೂಜಿಸಲಾಗುತ್ತದೆ
ಧನತೇರಸ್ ದಿನದಂದು ಮನೆಗೆ ಪೊರಕೆ ತರುವುದು ಕೂಡ ಮಂಗಳಕರವೆಂದು ಪರಿಗಣಿಸಲಾಗಿದೆ. ಇದು ವರ್ಷವಿಡೀ ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ದೂರ ಇಡುತ್ತದೆ
ಧನತೇರಸ್ ದಿನದಂದು ದೀಪಾವಳಿ ಪೂಜಾ ಸಾಮಗ್ರಿಗಳೊಂದಿಗೆ ಸಿಹಿ ತಿನಿಸುಗಳನ್ನು ಖರೀದಿಸುವುದು ಮಂಗಳಕರ ಎಂದು ಪರಿಗಣಿಸಲಾಗಿದೆ. ಇದರಿಂದ ಮನೆಗೆ ನೆಮ್ಮದಿ ಸಿಗುತ್ತದೆ
ಧನತೇರಸ್ ಹಬ್ಬದ ದಿನ ಲಕ್ಷ್ಮಿ ದೇವಿ ಮತ್ತು ಕುಬೇರ ದೇವಿಯ ಚಿತ್ರಗಳನ್ನು ಹೊಂದಿರುವ ಬೆಳ್ಳಿ ನಾಣ್ಯಗಳನ್ನು ಖರೀದಿಸುವುದು ಮಂಗಳಕರವಾಗಿದೆ
ಅಶ್ವಿನ್ ಸೇರಿ ವಿದಾಯ ಪಂದ್ಯವಾಡದ ಭಾರತದ ದಿಗ್ಗಜ ಕ್ರಿಕೆಟಿಗರು