ಶಿವಭಕ್ತರು ತಪ್ಪದೇ ನೋಡಬೇಕಾದ ಭಾರತದಲ್ಲಿನ 12 ಜ್ಯೋತಿರ್ಲಿಂಗಗಳಿವು  

By Reshma
Feb 29, 2024

Hindustan Times
Kannada

ಮಹಾ ಶಿವರಾತ್ರಿ ಸಮೀಪದಲ್ಲಿದೆ. ಈ ವಿಶೇಷ ದಿನದಂದು ಶಿವ ಭಕ್ತರು ಶಿವನ ಆಲಯಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆಯುತ್ತಾರೆ. ಈ ಶಿವರಾತ್ರಿಗೂ ಮುನ್ನ ಭಾರತದಲ್ಲಿನ 12 ಜ್ಯೋತಿರ್ಲಿಂಗಗಳ ಬಗ್ಗೆ ತಿಳಿಯಿರಿ.

ಸೋಮನಾಥ ದೇವಾಲಯ: 12 ಆದಿ ಜ್ಯೋತಿರ್ಲಿಂಗಗಳಲ್ಲಿ ಇದಕ್ಕೆ ಅಗ್ರಸ್ಥಾನವಿದೆ. ಈ ದೇವಾಲಯವಿರುವುದು ಗುಜರಾತ್‌ನಲ್ಲಿ. ದೇಶದ ಅತ್ಯಂತ ಪವಿತ್ರ ತೀರ್ಥಯಾತ್ರ ಸ್ಥಳಗಳಲ್ಲಿ ಇದು ಒಂದು. 

ನಾಗೇಶ್ವರ ದೇವಾಲಯ: ಇದು ಗುಜರಾತ್‌ನ ಸೌರಾಷ್ಟ್ರ ಭಾಗದಲ್ಲಿದೆ. 25 ಮೀಟರ್‌ ಎತ್ತರದ ಶಿವನ ವಿಗ್ರಹ ಇಲ್ಲಿದ್ದು, ಸಹಸ್ರಾರು ಶಿವ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. 

ಭೀಮಶಂಕರ ದೇವಾಲಯ: ನಾಗರಶೈಲಿಯ ಈ ದೇಗುಲವು ಮಹಾರಾಷ್ಟ್ರದಲ್ಲಿದೆ. ಈ ದೇಗುಲವನ್ನು ಭೀಮನ ಮಗ ಕುಂಭಕರ್ಣ ನಿರ್ಮಿಸಿದ್ದಾನೆ ಎಂದು ಹೇಳಲಾಗುತ್ತದೆ. 

ತ್ರಯಂಬಕೇಶ್ವರ ದೇವಾಲಯ: ತ್ರಯಂಬಕೇಶ್ವರ ದೇವಾಲಯವು ಬ್ರಹಗಿರಿ ಪರ್ವತದಲ್ಲಿದೆ. ಗೋದಾವರಿ ನದಿಯ ಉಗಮ ಸ್ಥಾನವದು. ಧಾರ್ಮಿಕ ನಂಬಿಕೆಗಳ ಪ್ರಕಾರ ಗೌತಮ ಹಾಗೂ ಗೋದಾವರಿಯು ಶಿವನಲ್ಲಿ ಆ ಪ್ರದೇಶದಲ್ಲಿ ನೆಲೆಯಾಗುವಂತೆ ಕೇಳಿಕೊಳ್ಳುತ್ತಾರೆ. 

ಗ್ರೀಷ್ಣೇಶ್ವರ ದೇವಾಲಯ: ಈ ದೇವಾಲಯವು ಔರಂಗಬಾದ್‌ನಲ್ಲಿದೆ. ಇದು 5 ಅಂತಸ್ತಿನ ಶಿಖರ ಶೈಲಿಯ ದೇಗುಲವಾಗಿದೆ. 

ವೈದ್ಯನಾಥ ದೇವಾಲಯ: 12 ಜ್ಯೋತಿರ್ಲಿಂಗಗಳಲ್ಲಿ ಅತಿ ಹೆಚ್ಚು ಜನರು ನಂಬುವ ದೇಗುಲ ಇದಾಗಿದೆ. ಇದು ದಿಯೋಘರ್‌ನಲ್ಲಿದೆ. 

ಮಹಾಕಾಳೇಶ್ವರ ದೇವಾಲಯ: ಭಾರತದಲ್ಲಿ ಈ ದೇಗುಲಕ್ಕೂ ವಿಶೇಷ ಮಹತ್ವವಿದೆ. ಇದು ಉಜ್ಜಯಿನಿಯಲ್ಲಿದೆ. ದೇಶದ ವಿವಿಧ ಭಾಗದ ಶಿವಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. 

ಓಂಕಾರೇಶ್ವರ ದೇಗುಲ: ಈ ದೇಗುಲಕ್ಕೂ ಬಹಳ ಮಹತ್ವವಿದೆ. ದಾನವರು ಇದನ್ನು ನಿರ್ಮಾಣ ಮಾಡಿದರು ಎಂದು ಹೇಳಲಾಗುತ್ತದೆ. ಇದು ಮಹಾಕಾಲೇಶ್ವರ ದೇಗುಲದಿಂದ ಸ್ವಲ್ಪ ದೂರದಲ್ಲಿದೆ. 

ಕಾಶಿ ವಿಶ್ವನಾಥ ದೇವಾಲಯ: ಮರಾಠ ಅಧಿಪತ್ಯದಲ್ಲಿ ರಾಣಿ ಅಹಲ್ಯಾಬಾಯಿ ಹೋಳ್ಕರ್‌ ಈ ದೇಗುಲವನ್ನು ನಿರ್ಮಿಸಿದ್ದಾಳೆ ಎನ್ನಲಾಗುತ್ತದೆ. ಸಾಕಷ್ಟು ಮಂದಿ ಹಿಂದೂಗಳು ಕಾಶಿಗೆ ಭೇಟಿ ನೀಡಿ ವಿಶ್ವನಾಥನ ದರ್ಶನ ಪಡೆಯುತ್ತಾರೆ. 

ಕೇದಾರನಾಥ: ಹಿಮಾಲಯ ಪರ್ವತ ಶ್ರೇಣಿಯಲ್ಲಿರುವ ಕೇದಾರನಾಥವು ಚಾರ್‌ಧಾಮ್‌ಗಳಲ್ಲಿ ಒಂದು. ಸಹಸ್ರಾರು ಹಿಂದೂಗಳು ಭೇಟಿ ನೀಡುವ ಜಾಗವಿದು. 

ರಾಮೇಶ್ವರಂ ದೇವಾಲಯ: ಈ ದೇಗುಲವನ್ನು ಶ್ರೀರಾಮ ನಿರ್ಮಾಣ ಮಾಡಿದ ಎಂದು ಹೇಳಲಾಗುತ್ತದೆ. ದಕ್ಷಿಣದ ಪ್ರಸಿದ್ಧ ಶಿವ ದೇಗುಲಗಳಲ್ಲಿ ಇದೂ ಒಂದು. 

ಮಲ್ಲಿಕಾರ್ಜುನ ದೇವಾಲಯ: ಇದು ಆಂಧ್ರಪ್ರದೇಶ ಶ್ರೀಶೈಲಂನಲ್ಲಿದೆ. 52 ಶಕ್ತಿಪೀಠಗಳಲ್ಲಿ ಇದೂ ಒಂದು. 12 ಜ್ಯೋತಿರ್ಲಿಂಗಗಳಲ್ಲಿ ಈ ದೇಗುಲವೂ ಒಂದು. 

 ಪಿತೃಪಕ್ಷದಲ್ಲಿ ಈ 4 ತಪ್ಪುಗಳನ್ನು ಮಾಡಬೇಡಿ