ಕನಸಿನಲ್ಲಿ ಈ 7 ವಸ್ತುಗಳು ಕಂಡರೆ ಅಶುಭ

By Reshma
Mar 11, 2024

Hindustan Times
Kannada

ಸ್ವಪ್ನಶಾಸ್ತ್ರದ ಪ್ರಕಾರ ಕೆಲವು ವಿಚಾರಗಳನ್ನು ಕನಸಿನಲ್ಲಿ ಕಾಣುವುದು ಶುಭವಲ್ಲ. ಇದು ಅಶುಭದ ಸಂಕೇತವಾಗಿದೆ. 

ಈ ರೀತಿ ಕನಸು ಬಿದ್ದರೆ ಅಹಿತಕರ ಘಟನೆ ನಡೆಯಬಹುದು ಎಂಬುದರ ಮುನ್ಸೂಚನೆಯಾಗಿದೆ. ಅಂತಹ ಕನಸುಗಳು ಯಾವುವು ನೋಡಿ.

ಮರದ ಕೊಂಬೆಯನ್ನು ಕತ್ತರಿಸುವುದು: ಈ ರೀತಿ ಕನಸು ಬಿದ್ದರೆ ಭವಿಷ್ಯದಲ್ಲಿ ನೀವು ದೊಡ್ಡ ತೊಂದರೆಗೆ ಸಿಲುಕಲಿದ್ದೀರಿ, ನಿಮ್ಮ ಕುಟುಂಬ ಸದಸ್ಯರು ಅನಾರೋಗ್ಯಕ್ಕೆ ಒಳಗಾಗುತ್ತಾರೆ ಎಂಬುದರ ಸೂಚಕವಾಗಿದೆ. 

ಪ್ರೇತಗಳನ್ನು ನೋಡುವುದು: ಕನಸಿನಲ್ಲಿ ಪ್ರೇತಗಳನ್ನ ನೋಡುವುದು ಕೂಡ ಅಪಾಯಕಾರಿ ಕನಸು. ಇದು ಅನಾರೋಗ್ಯವನ್ನು ಸೂಚಿಸುತ್ತದೆ. 

ಹಾಡುವ ಮಹಿಳೆ: ನೀವು ಕನಸಿನಲ್ಲಿ ಹಾಡುತ್ತಿರುವ ಮಹಿಳೆಯನ್ನು ಕಂಡರೆ ಅದು ಅಪಶಕುನ. ಇದರಿಂದ ದೊಡ್ಡ ರಸ್ತೆ ಅಪಘಾತ ಉಂಟಾಗಬಹುದು. 

ನಾಗಸಾಧುಗಳು: ಕನಸಿನಲ್ಲಿ ನಾಗಸಾಧುಗಳನ್ನು ಕಾಣುವುದು ಕೂಡ ಅಶುಭ ಎಂದು ಪರಿಗಣಿಸಲಾಗಿದೆ. ಇದು ಆರ್ಥಿಕ ನಷ್ಟದ ಸೂಚನೆಯಾಗಿದೆ. 

ಕಪ್ಪು ಬೆಕ್ಕು: ಕನಸಿನಲ್ಲಿ ಕಪ್ಪು ಬೆಕ್ಕು ಕಂಡರೆ ಅಶುಭದ ಸೂಚನೆಯಾಗಿದೆ. ಇದರಿಂದ ನೀವು ಮಾನಸಿಕ ಒತ್ತಡಕ್ಕೆ ಒಳಗಾಗಬಹುದು.

ಮುಚ್ಚಿದ ಬಾಗಿಲು: ಕನಸಿನಲ್ಲಿ ಮುಚ್ಚಿದ ಬಾಗಿಲು ಕಂಡರೆ ವೃತ್ತಿಜೀವನದಲ್ಲಿ ತೊಂದರೆ ಎದುರಾಗುತ್ತದೆ ಎಂದು ಅರ್ಥ. 

ನಿಮ್ಮ ಕೂದಲನ್ನು ನೀವೇ ಕತ್ತರಿಸಿಕೊಳ್ಳುವುದು: ಇದು ಕೂಡ ಅಶುಭದ ಸಂಕೇತ. ಇದು ಆರ್ಥಿಕ ನಷ್ಟವನ್ನು ಸೂಚಿಸುವ ಕನಸಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್ vs ಎಸ್‌ಆರ್‌ಎಚ್ ಮುಖಾಮುಖಿ ದಾಖಲೆ