ಅಮರನಾಥಕ್ಕೆ ಹೊರಡುವ ಆಸೆಯಿದ್ದರೆ ನೀವು ತಿಳಿಯಲೇಬೇಕಾದ ಮಾಹಿತಿಯಿದು

By Jayaraj
Jul 03, 2024

Hindustan Times
Kannada

ಭಾರತದಲ್ಲಿ ಅಮರನಾಥ ಯಾತ್ರೆಗೆ ಮಹತ್ವವಿದೆ. ಆಧ್ಯಾತ್ಮಿಕ ಹಿನ್ನೆಲೆಯಿರುವ ತಾಣಕ್ಕೆ ಅನಾದಿಕಾಲದಿಂದಲೂ ಯಾತ್ರೆ ಕೈಗೊಳ್ಳಲಾಗುತ್ತದೆ.

ಜಮ್ಮು ಮತ್ತು ಕಾಶ್ಮೀರದ ಸುಂದರ ಪರ್ವತಗಳಲ್ಲಿರುವ ಅಮರನಾಥ ಗುಹೆಗೆ ಪ್ರತಿ ವರ್ಷ ಸಾವಿರಾರು ಭಕ್ತರು ಯಾತ್ರೆ ಕೈಗೊಳ್ಳುತ್ತಾರೆ.

ಅಮರನಾಥ ಯಾತ್ರೆ ಯಶಸ್ವಿಯಾಗಲು, ಹೊರಡುವ ಮುನ್ನ ನೀವು ಕೆಲವು ಸಿದ್ಧತೆಗಳನ್ನು ಮಾಡಬೇಕು.

ಅಮರನಾಥ ಯಾತ್ರೆಯಲ್ಲಿ ಸಾಕಷ್ಟು ಎತ್ತರವನ್ನು ಏರಬೇಕಾಗುತ್ತದೆ. ಹೀಗಾಗಿ ಮನೆಯಿಂದ ಹೊರಡುವ ಮುನ್ನ ನಿಮ್ಮ ದೈಹಿಕ ಸಾಮರ್ಥ್ಯದ ಬಗ್ಗೆ ಗಮನವಿರಲಿ.

ಕೆಲವು ವಾರಕ್ಕೂ ಮುಂಚೆಯೇ ಗುಡ್ಡಗಾಡು ಪ್ರದೇಶಗಳಲ್ಲಿ ನಿಯಮಿತ ವ್ಯಾಯಾಮ ಮತ್ತು ಟ್ರೆಕ್ಕಿಂಗ್ ಅಭ್ಯಾಸ ಮಾಡಿಕೊಳ್ಳಿ.

ಪರ್ವತಗಳಲ್ಲಿನ ಹವಾಮಾನ ಅನಿರೀಕ್ಷಿತವಾಗಿದೆ. ಹೀಗಾಗಿ ಬೆಚ್ಚಗಿನ ಬಟ್ಟೆ, ಜಲನಿರೋಧಕ ಜಾಕೆಟ್, ಸೂಕ್ತ ಟ್ರೆಕ್ಕಿಂಗ್ ಶೂಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ಕೊಂಡೊಯ್ಯಿರಿ.

ಪ್ರಯಾಣದ ಸಮಯದಲ್ಲಿ ಲಘು ಮತ್ತು ಪೌಷ್ಟಿಕ ಆಹಾರ ಸೇವಿಸಿ. ಡ್ರೈಫ್ರುಟ್ಸ್‌, ಬಿಸ್ಕತ್ತು, ಚಾಕೊಲೇಟ್ ಮತ್ತು ನೀರು ಜೊತೆಗೆ ಇಟ್ಟುಕೊಳ್ಳಿ.

ಅಮರನಾಥ ಯಾತ್ರೆಗೆ ಮುಂಚಿತವಾಗಿ ಹೆಸರು ನೋಂದಾಯಿಸಿಕೊಳ್ಳುವುದು ಕಡ್ಡಾಯ. ಅದನ್ನು ಮರೆಯದಿರಿ.

ಮತ್ತೆ ನಾಗಿಣಿ ಲುಕ್‌ನಲ್ಲಿ ನಟಿ ನಮ್ರತಾ ಗೌಡ

Instagram (All Photos)