ಕನಸಿನಲ್ಲಿ ಈ 5 ವಸ್ತುಗಳು ಕಾಣಿಸಿದ್ರೆ ಶೀಘ್ರದಲ್ಲೇ ಶ್ರೀಮಂತರಾಗ್ತೀರಿ ಅಂತ ಅರ್ಥ
By Reshma Mar 03, 2024
Hindustan Times Kannada
ಸ್ವಪ್ನಶಾಸ್ತ್ರದ ಪ್ರಕಾರ ನಾವು ಕಾಣುವ ಪ್ರತಿ ಕನಸಿಗೂ ಅರ್ಥವಿದೆ. ಈ ಕನಸುಗಳು ಭವಿಷ್ಯದ ಸೂಚಕವಾಗಿವೆ.
ಕನಸಿನಲ್ಲಿ ನಾವು ಈ 5 ವಸ್ತುಗಳನ್ನು ನೋಡಿದರೆ ಬಹಳ ಬೇಗ ಶ್ರೀಮಂತರಾಗುತ್ತೇವೆ ಎಂದು ಸ್ವಪ್ನಶಾಸ್ತ್ರ ಹೇಳುತ್ತದೆ.
ಪೊರಕೆ: ಕನಸಿನಲ್ಲಿ ಪೊರಕೆ ಕಂಡರೆ ನಿಮ್ಮ ಅದೃಷ್ಟ ಖುಲಾಯಿಸುತ್ತದೆ ಎಂದರ್ಥ. ಇದರಿಂದ ನೀವು ಶೀಘ್ರದಲ್ಲೇ ಹಣ ಗಳಿಸುತ್ತೀರಿ.
ಚಂದ್ರ: ಕನಸಿನಲ್ಲಿ ಚಂದ್ರನನ್ನು ಕಾಣುವುದು ಬಹಳ ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಇದರಿಂದ ನಿಮ್ಮ ಭವಿಷ್ಯ ಉತ್ತಮವಾಗಿರುತ್ತದೆ.
ಸಿಗ್ನಲ್ ಕಾಣಿಸುವುದು: ಕನಸಿನಲ್ಲಿ ರಸ್ತೆಯ ಸಿಗ್ನಲ್ ಕಾಣಿಸಿದರೆ ನಿಮ್ಮ ಪ್ರತಿಷ್ಠೆ ಹೆಚ್ಚಲಿದೆ ಎಂದರ್ಥ. ಅಲ್ಲದೇ ಲಕ್ಷ್ಮೀದೇವಿಯು ಶೀಘ್ರ ನಿಮಗೆ ಒಲಿಯಲಿದ್ದಾಳೆ ಎಂಬುದನ್ನು ಇದು ಸೂಚಿಸುತ್ತದೆ.
ಮಳೆ: ನೀವು ಕನಸಿನಲ್ಲಿ ಮಳೆ ಸುರಿಯುತ್ತಿರುವುದನ್ನು ನೋಡಿದರೆ ಶೀಘ್ರದಲ್ಲೇ ನಿಮ್ಮ ಹಳೆಯ ಸಾಲಗಳೆಲ್ಲಾ ತೀರುತ್ತದೆ ಎಂದು ಅರ್ಥ.
ಖಾಲಿಪಾತ್ರೆ: ಕನಸಿನಲ್ಲಿ ಖಾಲಿ ಪಾತ್ರೆಗಳನ್ನು ನೋಡುವುದರಿಂದ ಶೀಘ್ರದಲ್ಲೇ ನಿಮ್ಮ ಮನೆಗೆ ಲಕ್ಷ್ಮೀದೇವಿಯ ಆಗಮನವಾಗುತ್ತದೆ ಎಂದರ್ಥ.
ಗುಲಾಬಿ ಹೂ: ಕನಸಿನಲ್ಲಿ ಗುಲಾಬಿ ಹೂ ಕಂಡರೆ ನಿಮ್ಮ ಅದೃಷ್ಟದ ಬೀಗ ತೆರೆಯುತ್ತದೆ. ಲಕ್ಷ್ಮೀದೇವಿ ನಿಮ್ಮನ್ನು ಆಶೀರ್ವದಿಸುತ್ತಾಳೆ ಎಂದರ್ಥ.