Swapna Shastra: ಕನಸಿನಲ್ಲಿ ಈ 5 ವಿಚಾರಗಳು ಕಂಡರೆ ನಿಮ್ಮ ಅದೃಷ್ಟ ಬದಲಾಗುವುದು ಖಂಡಿತ 

By Reshma
Apr 13, 2024

Hindustan Times
Kannada

ಸ್ವಪ್ನಶಾಸ್ತ್ರವು ಕನಸಿನ ಅರ್ಥವನ್ನು ತಿಳಿಸುತ್ತದೆ. ಇದರ ಪ್ರಕಾರ ನಾವು ಕನಸಿನಲ್ಲಿ ಕಾಣುವ ವಿಚಾರಗಳು ನಮ್ಮ ಭವಿಷ್ಯವನ್ನು ತಿಳಿಸುತ್ತದೆ.

ನಾವು ಕಾಣುವ ಕೆಲವು ಕನಸುಗಳು ಶುಭ ಸೂಚಕವಾದರೆ ಇನ್ನೂ ಕೆಲವು ಕನಸುಗಳು ಅಶುಭವಾಗಿರುತ್ತವೆ. 

ಕನಸಿನಲ್ಲಿ ಈ 5 ವಿಚಾರಗಳನ್ನು ಕಾಣುವುದು ತುಂಬಾ ಶುಭ ಎಂದು ಸ್ವಪ್ನಶಾಸ್ತ್ರ ಹೇಳುತ್ತದೆ. ಇದರಿಂದ ನಿಮ್ಮ ಬದುಕಿನಲ್ಲಿ ಮಂಗಳಕರ ಘಟನೆಗಳು ನಡೆಯುತ್ತವೆ ಎಂದು ಸ್ವಪ್ನಶಾಸ್ತ್ರ ಹೇಳುತ್ತದೆ. ಇಂತಹ ವಿಚಾರಗಳು ಯಾವುವು ನೋಡಿ.

ಚಿನ್ನದ ಆಭರಣ: ಕನಸಿನಲ್ಲಿ ಚಿನ್ನದ ಆಭರಣಗಳನ್ನು ಕಾಣುವುದು ತುಂಬಾ ಮಂಗಳಕರ.

ಇದರಿಂದ ನಿಮ್ಮ ಮನೆಗೆ ಲಕ್ಷ್ಮೀದೇವಿ ಬರಲಿದ್ದಾಳೆ ಎಂದು ಅರ್ಥ. 

ಕನಸಿನಲ್ಲಿ ಹುಡುಗಿಯೊಬ್ಬಳು ನೃತ್ಯ ಮಾಡುತ್ತಿರುವಂತೆ ಕಾಣುವುದು ಕೂಡ ಶುಭಸೂಚಕವಾಗಿದೆ. 

ಕನಸಿನಲ್ಲಿ ಇಲಿಯನ್ನು ಕಾಣುವುದು ಕೂಡ ಶುಭ ಎಂದು ಸ್ವಪ್ನಶಾಸ್ತ್ರ ಹೇಳುತ್ತದೆ. 

ಇಲಿಯ ಕನಸು ಬಿದ್ದರೆ ಗಣೇಶ ಹಾಗೂ ಲಕ್ಷ್ಮೀದೇವಿಯ ಅನುಗ್ರಹ ನಿಮಗೆ ದೊರೆಯುತ್ತದೆ ಎಂದು ಅರ್ಥ. ಇದರಿಂದ ನೀವು ಆರ್ಥಿಕ ಲಾಭ ಪಡೆಯಬಹುದು. 

ಬಣ್ಣ ಬಣ್ಣದ ಹೂಗಳನ್ನು ಕನಸಿನಲ್ಲಿ ಕಂಡರೆ ನೀವು ಸದ್ಯದಲ್ಲೇ ಆರ್ಥಿಕ ಲಾಭ ಪಡೆಯಲಿದ್ದೀರಿ ಎಂದು ಅರ್ಥ. 

ಕನಸಿನಲ್ಲಿ ಜೇನುನೊಣವನ್ನು ನೋಡುವುದು ಕೂಡ ಶುಭಸೂಚಕ. ಇದರಿಂದ ಹಣಕಾಸಿನ ತೊಂದರೆಗಳನ್ನು ನಿವಾರಿಸುತ್ತದೆ. 

ಪುಷ್ಪ 2 ಡಿಸೆಂಬರ್‌ 5ರಂದು ಬಿಡುಗಡೆ, ರಶ್ಮಿಕಾ ಮಂದಣ್ಣರ ಖುಷಿ ನೋಡಿ

Instagram/rashmika_mandanna